ಸಂವಿಧಾನ ದಿನವನ್ನು ವಿರೋಧಿಸಿದ 14 ಪಕ್ಷಗಳು !

ನವದೆಹಲಿ ನ 26 : ಸಂವಿಧಾನ ದಿನದ (Constitution Day) ಅಂಗವಾಗಿ ಕೇಂದ್ರ ಸರ್ಕಾರ ಸಂಸತ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಿದೆ. ಆದರೆ, ಕಾಂಗ್ರೆಸ್ (Congress), ಸಮಾಜವಾದಿ ಪಕ್ಷ, ಡಿಎಂಕೆ, ಟಿಎಂಸಿ ಸೇರಿದಂತೆ 14 ಪಕ್ಷಗಳು ಈ ಕಾರ್ಯಕ್ರಮವನ್ನು ಬಹಿಷ್ಕರಿಸಿವೆ. ಪ್ರತಿಪಕ್ಷಗಳ ಈ ನಿರ್ಧಾರ  ವಿರೋಧ ಪಕ್ಷಗಳು ಮತ್ತು ಸರ್ಕಾರದ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ. 

ಕಾಂಗ್ರೆಸ್ ನಡೆಯನ್ನು ಟೀಕಿಸಿದ ಕೇಂದ್ರ ಸಚಿವ
ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಈ ಕುರಿತು ಮಾತನಾಡಿದ್ದು (Arjun Meghwal), ಇಂದು ಇಂತಹ ಮಹತ್ವದ ದಿನವಾಗಿದೆ. ಹಾಗಿದ್ದರೂ  ದೇಶವನ್ನು ಐವತ್ತು ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಆಳಿದ ಕಾಂಗ್ರೆಸ್‌ನಂತಹ ಪಕ್ಷವು ಸಂವಿಧಾನ ದಿನಾಚರಣೆಯನ್ನು ಬಹಿಷ್ಕರಿಸುತ್ತಿದೆ. ಬಾಬಾ ಸಾಹೇಬರನ್ನು (Baba saheb Ambedkar) ಅವಮಾನಿಸಿದ ಕಾಂಗ್ರೆಸ್, ಇಂದು ಸ್ಪೀಕರ್ ಆಯೋಜಿಸಿದ್ದ ಗೌರವ ದಿನಾಚರಣೆಯನ್ನು ಬಹಿಷ್ಕರಿಸಿ, ಕಾಂಗ್ರೆಸ್ ಕೇವಲ ಕುಟುಂಬಕ್ಕೆ ಸಂಬಂಧಿಸಿದ ವ್ಯಕ್ತಿಯ ಗೌರವ ಕಾರ್ಯಕ್ರಮವನ್ನು ಮಾತ್ರ ಆಚರಿಸುತ್ತದೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಕಾಂಗ್ರೆಸ್, ಬಾಬಾ ಸಾಹೇಬ್ ಮತ್ತು ಸರ್ದಾರ್ ಪಟೇಲ್ (Sardar Patel) ಅವರಂತಹ ಮಹಾನ್ ವ್ಯಕ್ತಿಗಳ ಗೌರವ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತದೆ ಎಂಬುದನ್ನು ಸಾಬೀತುಪಡಿಸಿದೆ. ನಾವು ಪ್ರತಿಯೊಂದು ವಿಷಯದ ಬಗ್ಗೆಯೂ ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ಈ ದಿನವನ್ನು ಬಹಿಷ್ಕರಿಸುವುದು ಸಂವಿಧಾನಕ್ಕೆ ಮಾಡಿದ ಅಪಮಾನ ಮಾಡಿದಂತಿದೆ ಎಂದು ಹೇಳಿದರು

ಸಂವಿಧಾನ ದಿನಕ್ಕೆ ಮೋದಿ ಟ್ವಿಟ್ :
ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ದಿನದ ಅಂಗವಾಗಿ, ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ದೇಶವಾಸಿಗಳಿಗೆ ಸಂವಿಧಾನ ದಿನದ ಶುಭಾಶಯಗಳನ್ನು ಹೇಳಿದ್ದಾರೆ. ಅಲ್ಲದೆ, ನವೆಂಬರ್ 4, 1948 ರಂದು, ಸಂವಿಧಾನ ರಚನಾ ಸಭೆಯಲ್ಲಿ ಡಾ. ಅಂಬೇಡ್ಕರ್ ಅವರು ನೀಡಿದ ಭಾಷಣದ ಆಯ್ದ ಭಾಗವನ್ನು ಶೇರ್ ಮಾಡಿದ್ದಾರೆ. 

Exit mobile version