ಲೋಕ ಫಲಿತಾಂಶ: ಸೋತಿತು ನಿರ್ಲಜ್ಜ ರಾಜಕೀಯ, ಗೆದ್ದು ಬೀಗಿದ ಮತದಾರ ಪ್ರಭು

2024ರ ಲೋಕಸಭಾ ಚುನಾವಣೆಯ (Loksabha Election) ಫಲಿತಾಂಶ ಭಾರತದ ರಾಜಕೀಯ ವ್ಯವಸ್ಥೆಗೆ ಅನೇಕ ಸಂದೇಶಗಳನ್ನು (Politics Big Update) ನೀಡಿದೆ. ಭಾರತದ ಮತದಾರ ಪ್ರಭು

ನಿರ್ಲಜ್ಜ ರಾಜಕೀಯ ವ್ಯವಸ್ಥೆಯನ್ನು ಸ್ಪಷ್ವವಾಗಿ ತಿರಸ್ಕರಿಸುವ ಮೂಲಕ ಎಲ್ಲ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾನೆ. ಪ್ರಜಾತಂತ್ರ ವ್ಯವಸಸ್ಥೆಯಲ್ಲಿ “ನಾನೇ ಪ್ರಭು” ಎಂಬ ಸಂದೇಶವನ್ನು

ಪರೋಕ್ಷವಾಗಿ ಸಾರಿದ್ದಾನೆ.

Politics Big Update

1962ರ ನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರವೊಂದು ಸತತವಾಗಿ 3ನೇ ಅವಧಿಗೆ ಆಯ್ಕೆಯಾದರೂ, ಸರಳ ಬಹುಮತವನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಭಾರತೀಯರು ನೀಡಿಲ್ಲ

ಎಂಬುದು ಗಮನಾರ್ಹ ಸಂಗತಿ. ಬಿಜೆಪಿ (BJP) ಸಂಪೂರ್ಣ ಜನಬೆಂಬಲ ಪಡೆಯುವಲ್ಲಿ ವಿಫಲವಾದರೆ, ಇನ್ನೊಂದೆಡೆ ಕಾಂಗ್ರೆಸ್ ಸಂಪೂರ್ಣವಾಗಿ ಮತದಾರರ ವಿಶ್ವಾಸ ಗಳಿಸುವಲ್ಲಿ ಈ ಬಾರಿಯೂ ಸೋತಿದೆ.

ಈ ಎರಡೂ ಪ್ರಮುಖ ರಾಜಕೀಯ ಪಕ್ಷಗಳ ನಡುವೆ (Politics Big Update) ಮತದಾರ ಪ್ರಭು ಗೆದ್ದು ಬೀಗಿದ್ದಾನೆ.

ಇನ್ನು ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರ ಸಭೆಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಅವಮಾನ ಮಾಡುವಂತಿದ್ದವು. ರಾಜಕೀಯ ನಾಯಕರು ತಮ್ಮ ರಾಜಕೀಯ ಎಲ್ಲೆಗಳನ್ನು ಮೀರಿ

ವಾಕ್ಸಮರ ನಡೆಸಿದ್ದು, ಮತದಾರರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಅಂಶ ಈ ಫಲಿತಾಂಶದಲ್ಲಿದೆ. ಅತಿ ಎನಿಸುವ ಬಿಜೆಪಿಯ ರಾಷ್ಟ್ರೀಯವಾದವನ್ನೂ, ಮತದಾರರಿಗೆ ಗ್ಯಾರಂಟಿ ಎನ್ನುವ ಕಾಂಗ್ರೆಸ್

(Congress) ಪಕ್ಷದ ಆಮೀಷವನ್ನೂ ಮತದಾರರು ತಿರಸ್ಕರಿಸಿದ್ದಾರೆ. ಇನ್ನೊಂದೆಡೆ ಏಕವ್ಯಕ್ತಿ ನಾಯಕತ್ವಕ್ಕೆ ಮತ್ತು ಕುಟುಂಬ ರಾಜಕೀಯ ಪಾರಮ್ಯಕ್ಕೂ ಮತದಾರ ಈ ಫಲಿತಾಂಶದ ಮೂಲಕ ಉತ್ತರ ನೀಡಿದ್ದಾನೆ.

ಉಚಿತ ಗ್ಯಾರಂಟಿ (Guarantee), ಮೀಸಲಾತಿ, ಸಂವಿಧಾನ ರಕ್ಷಣೆ, ರಾಷ್ಟ್ರೀಯ ಭದ್ರತೆ, ರಾಮಮಂದಿರ, ಮಂಗಳಸೂತ್ರ, ಕುಟುಂಬ ರಾಜಕೀಯ, ಅಣುಬಾಂಬ್ ಹೀಗೆ ಅನೇಕ ಸಂಗತಿಗಳು ಪ್ರಚಾರ

ಸಭೆಗಳಲ್ಲಿ ಚರ್ಚೆಯಾದರೂ, ದೇಶದ ಮೂಲಭೂತ ಸಮಸ್ಯೆಗಳ ಬಗ್ಗೆ ಯಾವುದೇ ರಾಜಕೀಯ ಪಕ್ಷ ಗಂಭೀರವಾಗಿ ಚರ್ಚೆ ನಡೆಸಲಿಲ್ಲ. ಬಹುತೇಕ ಎಲ್ಲ ಪ್ರಚಾರ ಸಭೆಗಳು ಆರೋಪ-ಪ್ರತ್ಯಾರೋಪಕ್ಕೆ

ವೇದಿಕೆಯಾದವು. ಇನ್ನು 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ʼಮೋದಿ ಅಲೆʼಯ ಮೇಲೆ ಗೆದ್ದಿದ್ದ, ಅನೇಕ ನಿಷ್ಟ್ಕೀಯ ನಾಯಕರು ಈ ಬಾರಿ ಸೋಲುಂಡಿದ್ದಾರೆ. ಈ ಮೂಲಕ “ಪ್ರತಿ ಬಾರಿಯೂ

ಮೋದಿ ಎಂಬ ವ್ಯಕ್ತಿಯನ್ನು ನೋಡಿ ಮತ ಚಲಾವಣೆ ಮಾಡಲು ಸಾಧ್ಯವಿಲ್ಲ” ಎಂಬ ಸಂದೇಶ ರವಾನೆಯಾಗಿದೆ. ಇನ್ನೊಂದೆಡೆ ʼರಾಮಮಂದಿರʼ (Rama Mandira)ಎಂಬ ಧಾರ್ಮಿಕ ಅಸ್ತ್ರಕ್ಕೂ ಮತದಾರರು

ತಕ್ಕ ಉತ್ತರ ನೀಡಿದ್ದಾನೆ.

ಈ ಬಾರಿಯ ಫಲಿತಾಂಶ ಎಲ್ಲ ರಾಜಕೀಯ ಪಕ್ಷಗಳಿಗೂ ಒಂದು ಪಾಠವಾಗಿದ್ದು, ಭಾರತದ ಮತದಾರರ ಪ್ರಜ್ಞಾವಂತಿಕೆಗೆ ಸಾಕ್ಷಿಯಾಗಿದೆ. ಬಿಜೆಪಿಯ ರಾಜಕೀಯ ಪಾರಮ್ಯಕ್ಕೆ ಕಡಿವಾಣ ಬಿದ್ದರೆ, ಇನ್ನೊಂದೆಡೆ

ವಿಪಕ್ಷಗಳಿಗೆ ಶಕ್ತಿ ನೀಡುವ ಫಲಿತಾಂಶ ಇದಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಶಕ್ತಿಯಾಗಿರುವ ವಿಪಕ್ಷ ಸ್ಥಾನಕ್ಕೆ ಮತದಾರ ಪ್ರಭು ಶಕ್ತಿ ತುಂಬಿದ್ದಾನೆ. ಇನ್ನೊಂದೆಡೆ ಆಡಳಿತರೂಢ ಪಕ್ಷದ

ಏಕಸ್ವಾಮ್ಯಕ್ಕೆ ಮುಗುದಾರ ಬಿದ್ದಿದೆ. ಒಟ್ಟಾರೆಯಾಗಿ 2024ರ ಲೋಕಸಭಾ ಚುನಾವಣೆಯ ಫಲಿತಾಂಶ ನಿರ್ಲಜ್ಜ ರಾಜಕೀಯವನ್ನು ಸೋಲಿಸಿ, ಮತದಾರ ಪ್ರಭುವನ್ನೂ, ಪ್ರಜಾತಂತ್ರ ವ್ಯವಸ್ಥೆಯನ್ನು ಗೆಲ್ಲಿಸಿದೆ.

-ಮಹೇಶ್ ಹಿರೇಮಠ

Exit mobile version