ಉತ್ತರ ಪ್ರದೇಶದಲ್ಲಿ(UttarPradesh) ಚುನಾವಣೆ(Election) ಸಮೀಪಿಸುತ್ತಿದ್ದಂತೆ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳು ಆರಂಭವಾಗಿದೆ. ಬಿಜೆಪಿಯನ್ನು ಹೇಗಾದರೂ ಮಣಿಸಬೇಕೆಂದು ಪಣ ತೊಟ್ಟಿರುವ ಎಸ್‌ಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ(Yogi adhitynath) ಕಪ್ಪು ಬಾವುಟ ಬೀಸಿ, ಇದು ಪ್ರಜಾಪ್ರಭುತ್ವದ(Democracy) ಪ್ರತಿಭಟನೆ ಎಂದು ಕರೆದಿದ್ದ ಪೂಜಾ ಶುಕ್ಲಾ(Pooja Shukla) ಅವರಿಗೆ ಸಮಾಜವಾದಿ ಪಕ್ಷ ಟಿಕೆಟ್ ನೀಡಿದೆ. ಇವರು ಉತ್ತರದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿದ್ದು, ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ(Vidhansabha Election) ಅತ್ಯಂತ ಕಿರಿಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ರಾಜಕೀಯ ಅಖಾಡಕ್ಕೆ 25ರ ಹರೆಯದ ಯುವತಿ :
ಲಕ್ನೋ ವಿಶ್ವವಿದ್ಯಾಲಯಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸಿದಾಗ ಅವರ ವಿರುದ್ದ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸಿದ್ದ ಪೂಜಾ ಶುಕ್ಲಾ ಮುಂಚೂಣಿಯಲ್ಲಿದ್ದವು. ಪ್ರತಿಭಟನೆನೆ ಮರುದಿನವೇ ಪೂಜಾ ಶುಕ್ಲಾ ಅವರನ್ನು ಬಂಧಿಸಿ 20ದಿಗಳ ಕಾಲ ಜೈಲಿನಲ್ಲಿರಿಸಲಾಗಿತ್ತು. ಇವರು ಕಾಲೇಜಿನಲ್ಲಿ ಇದ್ದಾಗಲೇ ಸಮಾಜವಾದಿ ಪಕ್ಷದ ವಿದ್ಯಾರ್ಥಿ ಸಂಘಟನೆಯಾದ ಸಮಾಜವಾದಿ ಛತ್ರ ಸಭಾದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು ಇದೀಗ ಅವರ ಹೋರಾಟದ ನಾಯಕತ್ವವನ್ನು ಗುರುತಿಸಿ ಪೂಜಾ ಅವರಿಗೆ ಅಖಿಲೇಶ್ ಟಿಕೆಟ್ ನೀಡಿದ್ದಾರೆ.
ಟಿಕೆಟ್ ಘೋಷಣೆಯಾದ ಬಳಿಕ ವರದಿಗಾರರು ನೀವು ಎಸ್ಪಿಯನ್ನು ಏಕೆ ಆರಿಸಿದ್ದೀರಿ ಎಂದು ಕೇಳಿದಾಗ, ಪೂಜಾ ಅವರು,ಮುಲಾಯಂ ಸಿಂಗ್ ಯಾದವ್ ಅವರ ರಾಜಕೀಯ ಹೋರಾಟ ಮತ್ತು ಅಖಿಲೇಶ್ ಯಾದವ್ ಅವರ ನೀತಿಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಇದಲ್ಲದೆ ನಾನು ಎಸ್ಪಿಯ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹತ್ತಿರವಾಗಿದ್ದೇನೆ. ಬಿಜೆಪಿ ಮತ್ತು ಅದರ ಬೆಂಬಲಿಗರು ಅದನ್ನು ಉಲ್ಲಂಘಿಸಲು ಬಯಸುತ್ತಾರೆ ಎಂದು ಅವರು ಹೇಳಿದರು. ಲಕ್ನೋ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ವೇಳೆ ರಸ್ತೆ ತಡೆ ಮೂಲಕ ಮುಖ್ಯಮಂತ್ರಿಯನ್ನು ತಡೆದು ಪ್ರತಿಭಟನೆಗೆ ನಿರಾಕರಿಸಿದ್ದರಿಂದ, 2018 ರಲ್ಲಿ ಪೂಜಾ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.
ಶಿಕ್ಷಣದ ಹೆಸರಿನಲ್ಲಿ ಯುವಕರು ಅದರಲ್ಲೂ ವಿದ್ಯಾರ್ಥಿಗಳನ್ನು ರಾಜಕೀಯದಿಂದ ದೂರ ಇಡಲಾಗಿದೆ ಎಂದು ನನಗೆ ಅನಿಸುತ್ತದೆ. ಇದು ಬದಲಾಗಬೇಕು. ರಾಜಕೀಯ ಅರಿವು ಹೊಂದಿರುವ ವಿದ್ಯಾರ್ಥಿ ಮಾತ್ರ ಉತ್ತಮ ನಾಯಕನನ್ನು ಆಯ್ಕೆ ಮಾಡಬಹುದು. ಯುವಜನರು ದೇಶದ ರಾಜಕೀಯವನ್ನು ಬದಲಾಯಿಸಲು ಸಾಧ್ಯವಾಗುತ್ತದೆ ಮತ್ತು ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂದು ಪೂಜಾ(Pooja shukla) ತಮ್ಮ ಅಭಿಪ್ರಯಾ ವ್ಯಕ್ತಪಡಿಸಿದ್ದಾರೆ. ಕಾಲೇಜ್ ಹೋರಾಟ ಮಾತ್ರವಲ್ಲದೆ ಪೌರತ್ವ(Citizenship) ತಿದ್ದುಪಡಿ ಕಾಯ್ದೆಯ ವಿರುದ್ದ ಕೂಡ ಪ್ರತಿಭಟನೆಯಲ್ಲಿ ಪೂಜಾ ಶುಕ್ಲಾ(Pooja Shukla) ಭಾಗವಹಿಸಿದ್ದರು.