ಮಠಾಧೀಶರು ನಡೆದಾಡುವ ದೇವರಾಗಬೇಕೇ ಹೊರತು ನಡೆದಾಡುವ ರಾಜಕಾರಣಿಗಳಾಗಬಾರದು: MLC ವಿಶ್ವನಾಥ್

ಮೈಸೂರು, ಜು. 21: ಮುಖ್ಯಮಂತ್ರಿ ಯಡಿಯೂರಪ್ಪ ಪರವಾಗಿ ಬೀದಿಗಿಳಿದಿರುವ ಮಠಾಧೀಶರ ನಡೆಯ ಬಗ್ಗೆ ಕಿಡಿಕಾರಿರುವ ವಿಧಾನ ಪರಿಷತ್ ಬಿಜೆಪಿ ಸದಸ್ಯ ಎಚ್.ವಿಶ್ವನಾಥ್, ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕೇ ಹೊರತು, ರಾಜಕಾರಣ ಹಾಗೂ ಅಧಿಕಾರದ ಭಾಗವಾಗಬಾರದು ಎಂದಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಠಾಧೀಶರು ‘ರಾಜಕೀಯ ವಿಚಾರಕ್ಕೆ ತಲೆ ಹಾಕಬಾರದು. ಏಕವ್ಯಕ್ತಿ ಹಾಗೂ ಪಕ್ಷದ ಪರವಾಗಿ ಧರ್ಮಾಧಿಕಾರಿ ನಿಲ್ಲಬಾರದು. ಸರ್ಕಾರಗಳು ಬರುತ್ತದೆ ಹೋಗುತ್ತದೆ, ಜನ ಸಮುದಾಯದ ಏಳಿಗೆ ಆಗಬೇಕು. ಬಸವಶ್ರೀ ಪ್ರಶಸ್ತಿ ಪಡೆದ ಮುರುಘ ಶ್ರೀಗಳೇ ಬೀದಿಗಿಳಿದಿರೋದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರದ ಕೆಲಸ ದೇವರ ಕೆಲಸ ಎನ್ನುವುದು ಈಗ ಸ್ವಾಮಿಗಳ ಕೆಲಸವಾಗಿದೆ. ಯಡಿಯೂರಪ್ಪ ನಮ್ಮ ಜನ ನಾಯಕ, ನನಗೆ ಗೌರವ ಇದೆ. ಎರಡು ಸಾರಿ ಮುಖ್ಯಮಂತ್ರಿ ಆದ್ರೂ BSY ಪರಿಸ್ಥಿತಿ ಶಿಶು ಆಗಿದ್ದಾರೆ. ಮೊದಲ ಬಾರಿ ಸಿಎಂ ಆದಾಗ ಕುಟುಂಬದವರಿಂದ ಜೈಲು ಪಾಲಾದ್ರಿ. ಇದರಿಂದ ಪಕ್ಷದಿಂದ ಉಚ್ಛಾಟನೆ ಆದರು. ಆ ವೇಳೆ ಸ್ವಾಮೀಜಿಗಳೇಕೆ ಬಿಎಸ್ವೈ ಪರ ನಿಲ್ಲಲಿಲ್ಲ ಎಂದು ಪ್ರಶ್ನಿಸಿದ ಅವರು, ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು ಹೊರತು ನಡೆದಾಡುವ ರಾಜಕಾರಣಿಗಳು ಆಗಬಾರದು ಅಂತ ಆಕ್ರೋಶ ವ್ಯಕ್ತಪಡಿಸಿದರು.

17 ಜನ ಬಿಜೆಪಿಗೆ ಸೇರಿದ ಮೇಲೆ ಅಧಿಕಾರಕ್ಕೆ ಬಂತು. ಆದ್ರೆ ಯಡಿಯೂರಪ್ಪನವರ ನಾಲಿಗೆ & ಕೈ ಅವರ ಮಗನ ಕೈಯಲ್ಲಿದೆ. ಈ ಕಾರಣಕ್ಕೆ ಹೈಕಮಾಂಡ್ ಈ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ಪಕ್ಷ ಕಟ್ಟಿದ್ದು B.S ಯಡಿಯೂರಪ್ಪ ಅಲ್ಲ. ಅನೇಕ ನಾಯಕರ ಶ್ರಮದಿಂದ ಕಟ್ಟಿರೋದು ನೀವು ಅಧಿಕಾರಿ ಅನುಭವಿಸಿದ್ರಿ ಅಷ್ಟೇ. ರಾಜ್ಯದ ಅಭಿವೃದ್ಧಿಗಾಗಿ, ಬಿಜೆಪಿ ಭವಿಷ್ಯದ ದೃಷ್ಠಿಯಿಂದ, ಗೌರವದಿಂದ ರಾಜೀನಾಮೆ ಕೊಡಿ ಎಂದ ಅವರು, ಬಾಂಬೆ ಟೀಂನ ಯಾರೊಬ್ಬರಿಗೂ ಮಂತ್ರಿ ಸ್ಥಾನ ಕೊಡಬೇಡಿ ಎಂದರು.

ಇನ್ನು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಿಲುವಿನ ಬಗ್ಗೆ ವಿಶ್ವನಾಥ್ ಕಿಡಿಕಾರಿದ್ರು . ಒಂದೆಡೆ ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಅಂದ್ರೆ ,ಶಾಮನೂರು ಶಿವಶಂಕರಪ್ಪ BSY ಮುಂದುವರೆಯಲಿ ಅಂತಿದ್ದಾರೆ. ಹಾಗಿದ್ರೆ ನಿಮ್ಮ ನಿಲುವು ಏನು? ಎಂಬುವುದನ್ನ ಸ್ಪಷ್ಟಪಡಿಸಿ ಅಂತ ಶಾಮನೂರು ಶಿವಶಂಕರಪ್ಪ & M.B ಪಾಟೀಲ್ ವಿರುದ್ಧ ಕಿಡಿಕಾರಿದರು.

Exit mobile version