ಮುಸ್ಲಿಂ ಪುರುಷರು 3-4 ಮಹಿಳೆಯರನ್ನು ಮದುವೆಯಾಗುವ ವ್ಯವಸ್ಥೆ ಬದಲಿಸಿ : ಬಿಸ್ವಾ ಶರ್ಮಾ

Guwahati :  ಭಾರತದಲ್ಲಿ ವಾಸಿಸುವ ಯಾವುದೇ ಪುರುಷನಿಗೆ ಮೊದಲ ಪತ್ನಿಗೆ ವಿಚ್ಚೇದನ ನೀಡದೇ ಮತ್ತೊಂದು ಮದುವೆಯಾಗುವ ಹಕ್ಕಿಲ್ಲ. ಮುಸ್ಲಿಂ ಪುರುಷರು 3-4 ಮಹಿಳೆಯರನ್ನು (population control Biswa Sarma) ಮದುವೆಯಾಗುವ ವ್ಯವಸ್ಥೆಯನ್ನು ಬದಲಿಸುವ ಮೂಲಕ,

ಮುಸ್ಲಿಂ ಸಮುದಾಯದ ಮಹಿಳೆಯರಿಗೆ ನ್ಯಾಯ ಒದಗಿಸಬೇಕೆಂದು ಅಸ್ಸಾಂ ಮುಖ್ಯಮಂತ್ರಿ ಹಿಂತ ಬಿಸ್ವಾ ಶರ್ಮಾ (population control Biswa Sarma) ಹೇಳಿದ್ದಾರೆ

ಇದೇ ವೇಳೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬದ್ರುದ್ದೀನ್ ಅಜ್ಮಲ್ ಅವರಂತಹ ಕೆಲವು ಅಪ್ರಬುದ್ದ ನಾಯಕರು ಇದ್ದಾರೆ.

ಮಹಿಳೆಯರ ಹೆರಿಗೆಯನ್ನು ಫಲವತ್ತಾದ ಭೂಮಿಗೆ ಹೋಲಿಸುತ್ತಾರೆ. ಕಡಿಮೆ ವಯಸ್ಸಿನಲ್ಲಿ ಮದುವೆಯಾದರೆ ಹೆಚ್ಚು ಮಕ್ಕಳನ್ನು ಪಡೆಯಬಹುದು.

ಮುಸ್ಲಿಂ ಸಮುದಾಯದಂತೆ ಹಿಂದೂಗಳು ಕೂಡಾ ಬೇಗನೆ ಮದುವೆಯಾಗಿ  ಹೆಚ್ಚು ಮಕ್ಕಳನ್ನು ಪಡೆಯಬೇಕು ಎಂದು ಹೇಳುತ್ತಾರೆ. 

ಮಹಿಳೆಯರು 20-25 ಮಕ್ಕಳಿಗೆ ಜನ್ಮ ನೀಡಬಹುದು. ಆದರೆ ಜನ್ಮ ನೀಡದ ಮಕ್ಕಳಿಗೆ ಸೂಕ್ತ ಆಹಾರ, ಬಟ್ಟೆ, ಆರೋಗ್ಯ, ಶಿಕ್ಷಣ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಬದ್ರುದ್ದೀನ್ ಅಜ್ಮಲ್ ಅವರೇ ನೀಡುವುದಾದರೆ ಮುಸ್ಲಿಂ ಮಹಿಳೆಯರು 20-25 ಮಕ್ಕಳಿಗೆ ಜನ್ಮ ನೀಡಲು ನಮ್ಮ ವಿರೋಧವಿಲ್ಲ.

ಇದನ್ನೂ ಓದಿ : https://vijayatimes.com/job-vacancies-in-central-government/

ಅವರು ಎಷ್ಟು ಬೇಕಾದರು ಮಕ್ಕಳಿಗೆ  ಜನ್ಮ ನೀಡಲಿ ಎಂದು ತಿರುಗೇಟು ನೀಡಿದರು. ಮಹಿಳೆಯರ ವೆಚ್ಚವನ್ನು ಭರಿಸಲಾಗದವರಿಗೆ ಮಹಿಳೆಯರ ಹೆರಿಗೆಯ ಕುರಿತು ಉಪನ್ಯಾಸ ನೀಡುವ ಹಕ್ಕಿಲ್ಲ.

ನೀವು ಮಕ್ಕಳಿಗೆ ಜನ್ಮ ನೀಡಿ, ಇನ್ಯಾರದೋ ತೆರಿಗೆಯಲ್ಲಿ ಆ ಮಕ್ಕಳನ್ನು ಬೆಳೆಸುವುದು ಯೋಗ್ಯವಲ್ಲ.

https://vijayatimes.com/covid-guidelines-published/

ನಾವು ನಮಗೆ ಸಾಧ್ಯವಾದಷ್ಟು ಆಹಾರ, ಶಿಕ್ಷಣ (Education), ಆರೋಗ್ಯ, ಬಟ್ಟೆ ಒದಗಿಸಲು ಹಾಗೂ ಉತ್ತಮ ನಾಗರಿಕನನ್ನಾಗಿ ಮಾಡಲು ಸಾಧ್ಯವಾಗುವಷ್ಟು ಮಕ್ಕಳಿಗೆ ಮಾತ್ರ ಜನ್ಮ ನೀಡುತ್ತೇವೆ ಎಂದು ಬಿಸ್ವಾ ಶರ್ಮಾ ಅವರು ಬದ್ರುದ್ದೀನ್ ಅಜ್ಮಲ್ಗೆ  ಟಾಂಗ್ ನೀಡಿದರು.
Exit mobile version