ಪುನೀತ್ ಅವರ ಜೀವನಗಾಥೆಯನ್ನು ಪಠ್ಯದಲ್ಲಿ ಅಳವಡಿಸಿ ; ಈ ಕುರಿತು ನಾನು ಸಿಎಂ ಜೊತೆ ಚರ್ಚಿಸಲಿದ್ದೇನೆ : ಬಿ.ಸಿ ನಾಗೇಶ್!

powerstar

ಪವರ್ ಸ್ಟಾರ್(Powerstar) ಪುನೀತ್ ರಾಜ್‍ಕುಮಾರ್(Puneeth Rajkumar) ಅಂದ್ರೇ ಯಾರಿಗೆ ಇಷ್ಟವಿಲ್ಲಾ ಹೇಳಿ? ಚಿಕ್ಕ ಮಗುವಿನಿಂದ, ಕೋಲು ಹಿಡಿದು ನಡೆಯುವ ವಯಸ್ಸಿನವರಿಗೂ ಕೂಡ ಹುಚ್ಚು ಅಭಿಮಾನ, ವಿಶೇಷ ಪ್ರೀತಿ ನಮ್ಮ ಕರ್ನಾಟಕ ರತ್ನ(Karnataka Ratna), ಕರುನಾಡ ರಾಜಕುಮಾರ(Rajakumara) ಪುನೀತ್ ರಾಜ್‍ಕುಮಾರ್(Puneeth Rajkumar) ಅವರನ್ನು ಕಂಡರೆ.

ಹೌದು, ಈ ಅಭಿಮಾನ ಮೊನ್ನೆ ಅವರ ಜನ್ಮದಿನದಂದು ಮತ್ತೊಮ್ಮೆ ಸಾಬೀತಾಯಿತು. ಅಪ್ಪು(Appu) ಅವರ ಜನ್ಮದಿನ(Birthday) ಮತ್ತು ಜೇಮ್ಸ್(James) ಸಿನಿಮಾ ಎರಡು ಒಂದೇ ದಿನ ಬಿಡುಗೆಡೆಗೊಂಡ ಕಾರಣ, ಅಭಿಮಾನಿಗಳಿಗೆ ಹಬ್ಬವನ್ನು ಸಂಭ್ರಮಿಸಿದಷ್ಟೇ ಖುಷಿಯಾಯಿತು. ಈ ನಡುವೆ ಮತ್ತೊಂದು ಖುಷಿ ಸುದ್ದಿ ಪವರ್ ಸ್ಟಾರ್ ಅಭಿಮಾನಿಗಳಿಗೆ ಎದುರಾಗಿದೆ. ಹೌದು, ಕನ್ನಡಿಗರ ಅಚ್ಚುಮೆಚ್ಚಿನ ಯುವರತ್ನ ಪುನೀತ್ ರಾಜ್‍ಕುಮಾರ್ ಅವರ ಸಾಧನೆ, ಜೀವನದ ಹಾದಿಯನ್ನು ಜೀವನಚರಿತ್ರೆಯಾಗಿ ಪ್ರಾಥಮಿಕ ಶಾಲೆ ಮಕ್ಕಳ ಪಠ್ಯಕ್ರಮದಲ್ಲಿ ಅಳವಡಿಸಿ ಎಂಬ ಮನವಿ ಕೇಳಿಬಂದಿದೆ.

ಅಳವಡಿಸುವ ಬಗ್ಗೆ ಮಾತುಕತೆಗಳು ನಡೆಯುತ್ತಿದ್ದು, ಪಠ್ಯಕ್ರಮದೊಳಗೆ ಅಪ್ಪು ಅವರ ಜೀವನಗಾಥೆ ಮೂಡಿಬರುವ ಸಾಧ್ಯತೆ ಹೆಚ್ಚಿದೆ ಎಂದೇ ಹೇಳಬಹುದು. 6 ತಿಂಗಳ ಮಗುವಿದ್ದಾಗಲೇ ಅಪ್ಪು ಅವರು ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡದ ಕುವರ. 10 ವರ್ಷದ ವಯಸ್ಸಿನಲ್ಲೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡ ಶ್ರೇಷ್ಟ `ಬೆಟ್ಟದ ಹೂವು‘, ಕೋಟ್ಯಾಂತರ ಕನ್ನಡಿಗರ ಉಸಿರಾಗಿ ರಾರಾಜಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಯಶಸ್ಸಿನ ಪಯಣವನ್ನು ಪ್ರಾಥಮಿಕ ಶಾಲಾ ಮಕ್ಕಳಿಗೆ ಪಠ್ಯವನ್ನಾಗಿ ಪರಿವರ್ತಿಸಿ ಶಿಕ್ಷಣ ನೀಡಿ ಎಂದು ಅನೇಕ ಸಂಘ-ಸಂಸ್ಥೆಗಳು, ಹಿರಿಯ ವ್ಯಕ್ತಿಗಳು ಮನವಿ ಮಾಡಿದ್ದಾರೆ.

ಈ ಹಿನ್ನೆಲೆ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರು ಮಾತನಾಡಿದ್ದು, ಈ ಸಂಬಂಧ ನಾನು ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಪ್ರಾಥಮಿಕ ಶಾಲೆಯ 4 ಮತ್ತು 5ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಯ ಪಠ್ಯಕ್ರಮದಲ್ಲಿ ಅಳವಡಿಸಿ ಎಂಬ ಮನವಿ ಪದೇ ಪದೇ ಕೇಳಿಬರುತ್ತಿದೆ. ಈ ಕುರಿತು ಶಿಕ್ಷಣ ಸಚಿವರು ನೀಡಿರುವ ಭರವಸೆಯ ಮಾತು, ಪುನೀತ್ ರಾಜ್‍ಕುಮಾರ್ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ.

Exit mobile version