ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಮ್ಮ ಅಪ್ಪನಿಗೆ ಹುಟ್ಟಿದ್ದೇನೆ’. ನಾನು ಧರ್ಮದ ವಿರೋಧಿ ಅಲ್ಲ, ನರೇಂದ್ರ ಮೋದಿಯ ವಿರೋಧಿ ಪ್ರಕಾಶ್ ರೈ

Bengaluru: ಸನಾತನ ಧರ್ಮದ ಕುರಿತಂತೆ ಎಲ್ಲೆಡೆ ಬಹಳ ಚರ್ಚೆಗೆ ಗ್ರಾಸವಾಗಿದ್ದು, ಬಹುಭಾಷಾ (prakash rai vs narendra modi) ನಟ ಪ್ರಕಾಶ್ ರೈ ಅವರು ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ.

ನಾನು ನಮ್ಮ ಅಮ್ಮ, ಅಪ್ಪನಿಗೆ ಹುಟ್ಟಿದ್ದೇನೆ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಧರ್ಭದಲ್ಲಿ ಮಾತನಾಡಿದ ಅವರು

ನಾನು ಧರ್ಮದ ವಿರೋಧಿ ಅಲ್ಲ, ಪ್ರಧಾನಿ ನರೇಂದ್ರ ಮೋದಿಯ (prakash rai vs narendra modi) ವಿರೋಧಿ ಎಂದು ತಿಳಿಸಿದ್ದಾರೆ.

ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಅವರು ಇತ್ತೀಚೆಗೆ ನಡೆದ ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ‘ಹಿಂದು ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿಕೆ ಕೊಟ್ಟಿದ್ದರು.

ಒಂದು ಹೇಳಿಕೆ ದೊಡ್ಡ ಸಂಚಲನ ಮೂಡಿಸಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರು

‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.

ಮೋದಿ ನೂತನ ಸಂಸತ್ ಭವನ ಉದ್ಘಾಟನೆ ವೇಳೆ ಹೋಮ, ಹವನ ಮಾಡಿಸಿದ್ದರು ಆದರೆ ನಮ್ಮ ಸಂಸತ್ ಅಲ್ಲಿ ಹೋಮ ಹವನಗಳನ್ನ ಮಾಡಬಾರದು. ಅಲ್ಲದೆ ನಮ್ಮನ್ನ ಕೊಲ್ಲುತ್ತೇನೆ ಎಂದು

ಆಯುಧಗಳನ್ನು ಹಿಡಿದು ಬರುವವರು ಹೇಡಿಗಳು. ಯಾವುದನ್ನು ನಮ್ಮ ಮೇಲೆ ಬಲವಂತವಾಗಿ ಹೇರಬಾರದು. ಆದರೆ ಇದು ಮೋದಿಯಿಂದ ಆಗುತ್ತಿದ್ದು, ಅದಕ್ಕೆ ನಮ್ಮ ವಿರೋಧ ಇದೆ ಎಂದು ಹೇಳಿದ್ದಾರೆ.

ಈ ಹಿಂದೆಯೇ ನಾನು ಇಲ್ಲಿಗೆ ಬರುವ ಮೊದಲು ಖಾಸಗಿ ಚಾನಲ್ ಒಂದಕ್ಕೆ ಸಂದರ್ಶನಕ್ಕೆ ಹೋಗಿದ್ದೆ. ಅದು ಯಾವ ಚಾನಲ್? ಅದು ಅವರ ಚಾನಲ್. ಅಲ್ಲಿಗೆ 30 ಜನ ಕಾವಿ ಶಾಲು ಹಾಕಿಕೊಂಡು ಬಂದಿದ್ದರು.

ಅವರನ್ನು ನೋಡಿ ನಾನು ನಿಮ್ಮ ಜೊತೆ ಮಾತನಾಡಬೇಕು ಬನ್ನಿ ಅಂತ ಕರೆದೆ. ತದ ನಂತರ ನಾನು ಟ್ವೀಟ್ ನಲ್ಲಿ ತನಾತನಿ ಸಂಸತ್ ಅಂತ ಹಾಕಿದ್ದೆ. ಅದಕ್ಕೆ ಒಬ್ಬ ಪ್ರಶ್ನೆ ಮಾಡಿ ಕೇಳಿದ್ದನು ನೀನು ಸನಾತನ

ಧರ್ಮ ಅಲ್ವಾ ಅಂತ. ಅದಕ್ಕೆ ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನಾನು ನಮ್ಮ ಅಪ್ಪ ಅಪ್ಪನಿಗೆ ಹುಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ನಾನು ಮೋದಿ ವಿರುದ್ಧ ಇದ್ದೇನೆ. ಆಡಳಿತ ಪಕ್ಷದಲ್ಲಿರುವವರನ್ನು ನಾವು ಕೇಳಬೇಕು. ಹಾಗಾಗಿ ಮೋದಿ ಅವರನ್ನು ಕೇಳ್ತೀವಿ. ನನಗೆ ಧರ್ಮದ ಬಗ್ಗೆ ಸಮಸ್ಯೆ ಇಲ್ಲ. ಹಾಗಾಗಿ ನಾನು ತನಾತನಿ ಸಂಸತ್ ಅಂತ

ಟ್ವಿಟ್ಟರ್‌ನಲ್ಲಿ ಹಾಕ್ಕೊಂಡಿದೀನಿ. ಸಂಸತ್‌ನಲ್ಲಿ ಮೋದಿಯವರು ಎಲ್ಲ ಸ್ವಾಮೀಜಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಮೋದಿಯವರು ಅವರ ಮನೆಯಲ್ಲಿ ಹೋಮ ಮಾಡಿಕೊಳ್ಳಲಿ, ಆದರೆ ನಮ್ಮ ಸಂಸತ್‌ನಲ್ಲಿ

ಯಾಕೆ ಹೋಮ ಮಾಡೋದು ಎಂದು ನೀವು ಪ್ರಶ್ನೆ ಮಾಡಲ್ಲ, ಆದರೆ ನಾನು ಮಾಡ್ತೀನಿ ಅಂತ ನಾನು ಅವನಿಗೆ ಹೇಳಿದೆ” ಎಂದಿದ್ದಾರೆ ಪ್ರಕಾಶ್ ರಾಜ್.

ಪ್ರಕಾಶ್ ರಾಜ್ ಅವರು “ನಾವು ಗೌರಿಯನ್ನು ಹೂಳಲಿಲ್ಲ, ಬಿತ್ತಿದ್ದೇವೆ. ಒಂದು ಧ್ವನಿಯನ್ನು ಅಡಗಿಸಿದರೆ ನೂರಾರು ಧ್ವನಿಗಳು ಹುಟ್ಟುತ್ತವೆ ಅಂತ ಬಿತ್ತಿದ್ದೇವೆ. ಇವತ್ತು ನೂರಾರು ಧ್ವನಿಯಾಗಿ ನಾವು ನಿಂತುಕೊಂಡಿದ್ದೇವೆ.

ನಮ್ಮ ದೇಹಕ್ಕೆ ಗಾಯವಾದರೆ ನಾವು ಮೌನವಾಗಿದ್ದಷ್ಟು ವಾಸಿಯಾಗುತ್ತದೆ, ಆದರೆ ದೇಶಕ್ಕೆ ಗಾಯ ಆದರೆ ವಾಸಿಯಾಗಲ್ಲ. ಹಿಂಸೆಗೆ ಕರುಣೆ ಇಲ್ಲ, ನಾನು ಧರ್ಮದ ವಿರುದ್ಧ ಇಲ್ಲ, ನಿಮ್ಮಂತಹ ದುರುಳರ

ವಿರುದ್ಧವಾಗಿ ಇದ್ದೇನೆ.

ಅದಕ್ಕೆ ನೀವು ಕೊಲ್ತೀನಿ ಅಂತೀರಿ, ಆಯುಧ ತೆಗೆದುಕೊಳ್ತೀರಿ. ಕೊಲ್ಲುವವನು ವೀರ ಅಲ್ಲ, ಹೇಡಿ. ನಮ್ಮ ಮಕ್ಕಳ ಭವಿಷ್ಯಗೋಸ್ಕರ ನಾವು ನೇರವಾಗಿ ಮಾತನಾಡಬೇಕು. ನಾವು ಅಡ್ಡ ಗೋಡೆ ಮೇಲೆ ದೀಪ

ಇಟ್ಟುಕೊಂಡು ಮಾತನಾಡಬಾರದು. ಒಂದು ಸೈಡ್ ತಗೊಂಡು ನಾವು ಮಾತನಾಡಬೇಕು. ಗೌರಿ, ಲಂಕೇಶ್, ಬಸವಣ್ಣ ಅವರ ಧ್ವನಿ ಹಾಗಿತ್ತು. ಇವರಂತಹ ಶ್ರೀಮಂತ ಇತಿಹಾಸ ಹೊಂದಿದ್ದೇವೆ.

ಇದರ ವಿರುದ್ಧವಾಗಿರುವವರನ್ನು ಒದ್ದೋಡಿಸುವವರೆಗೂ, ಕೆಳಗಡೆ ಇಳಿಸುವವರೆಗೂ ನಾವು ಹೋರಾಟ ಮಾಡ್ತೀವಿ” ಎಂದು ಹೇಳಿದ್ದಾರೆ.

ಇದನ್ನು ಓದಿ: ಶಾಕಿಂಗ್‌ ನ್ಯೂಸ್‌ : ಬೆಂಗಳೂರು ಹಾಗೂ ಮೈಸೂರಲ್ಲಿ ಹೆಚ್ಚುತ್ತಿದೆ ಬಾಲ ತಾಯಂದಿರ ಸಂಖ್ಯೆ !

Exit mobile version