Mangalore: ಮಂಗಳೂರು (Prakash Raj Against Modi) ಹೊರವಲಯದ ತೊಕ್ಕೋಟ್ಟು ಎಂಬಲ್ಲಿ ನಡೆಯುತ್ತಿರುವ ಡಿವೈಎಫ್ಐನ (DYFI) 12ನೇ ರಾಜ್ಯ
ಸಮ್ಮೇಳನದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪ್ರಕಾಶ್ ರಾಜ್.. ನಮ್ಮ ದೇಶದಲ್ಲಿ ಎಂತಹ ನಾಯಕನಿದ್ದಾನೆ? ದೇಶವನ್ನು ಹೇಗೆ ಮಂಗ ಮಾಡ್ತಿದ್ದಾನೆ? ಅಂದರೆ 2019ರಲ್ಲಿ ಗುಹೆ
ಸೇರಿಕೊಂಡ, ಈಗ ಕ್ಯಾಮರಾ ಹಿಡಿದುಕೊಂಡು ನೀರೊಳಗೆ ಸೇರಿದ್ದಾನೆ. ಮುಂದಿನ ಚುನಾವಣೆಗೆ ಚಂದ್ರನ ಮೇಲೆ ನಿಂತುಕೊಳ್ಳುತ್ತಾನೆ. ದಿನಕ್ಕೆ ಐದು ಕಾಸ್ಟ್ಯೂಮ್ ಚೇಂಜ್
(Costume Change) ಮಾಡ್ತಾನೆ. ಕರ್ಕಶವಾದ ಲೌಡ್ (Prakash Raj Against Modi) ಸ್ಪೀಕರ್ ಅವನು ಎಂದು ಟೀಕಿಸಿದ್ದಾರೆ.
ನಮಗೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಆಗಿವೆ. ಅಂದು ಸ್ವಾತಂತ್ರ್ಯಕ್ಕಾಗಿ ನಾಯಕರು ಉಪವಾಸ ಮಾಡಿದ್ದರು. ಆದರೀಗ ಎಂದು ನಟ ಪ್ರಕಾಶ್ ರಾಜ್ (Prakash Raj),
ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಎಲ್ಲಾ ಧರ್ಮದಲ್ಲಿರುವ ಅಂಧ ಭಕ್ತರದ್ದೇ ನನಗೆ ಸಮಸ್ಯೆ. ನಾನು ಯಾವ ಪಾರ್ಟಿ ಅಂತಾರೆ? ನಾನು ಜನರ
ಪಕ್ಷ ಎಂದು ಹೇಳುತ್ತೇನೆ.
ಕಲಾವಿದನಾಗಿ ಮಾತನಾಡಬೇಕಿರುವುದು ನನ್ನ ಜವಬ್ದಾರಿ. ಸಮಸ್ಯೆಯಾದಾಗ ಬಂದು ನಿಲ್ಲಬೇಕು, ನಾನು ಬಡವ ಅಲ್ಲ, ಜನರ ಶ್ರೀಮಂತಿಕೆ ನನ್ನ ಬಳಿಯಿದೆ. ದೇಹಕ್ಕಾದ ಗಾಯಗಳು
ಸುಮ್ಮನಿದ್ದರೂ ಕಡಿಮೆಯಾಗುತ್ತದೆ. ಆದರೆ ದೇಶಕ್ಕೆ ಗಾಯವಾಗುತ್ತಿದ್ದಾಗ ನಾವು ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ. ಈತ ವಂದೇ ಭಾರತ್ ಗೆ ಬಾವುಟ ತೋರಿಸಿದಷ್ಟು ಸ್ಟೇಷನ್ ಮಾಸ್ಟರ್
(Station Master) ಸಹ ಬಾವುಟ ತೋರಿಸಿರಲಿಕ್ಕಿಲ್ಲ.
ಬಿಜೆಪಿ ಮತ್ತು ಆರ್ಎಸ್ಎಸ್ (BJP and RSS) ನಂತಹ ಕಿಡ್ನಾಪಿಂಗ್ ಟೀಮ್ ಈ ದೇಶದಲ್ಲಿ ಬೇರೆ ಯಾವುದೂ ಇಲ್ಲ. ಭಗತ್ ಸಿಂಗ್ರನ್ನು ಕಿಡ್ನಾಪ್ ಮಾಡಿದ್ದಾರೆ. ಅವರು ಇಂದು
ಇದ್ದರೆ ಒದ್ದು ಓಡಿಸೋರು. ಪಟೇಲ್ರನ್ನು ಕಿಡ್ನಾಪ್ (Kidnap) ಮಾಡಿ ಪ್ರತಿಮೆ ಮಾಡಿ ಇಟ್ಟಿದ್ದಾರೆ. ಬರ ಪರಿಹಾರಕ್ಕೆ ನೂರು ಕೋಟಿ ಕೊಡಲು ದುಡ್ಡು ಇರಲ್ಲ. ನೂರು ಸಾವಿರ ಕೋಟಿ
ಖರ್ಚು ಮಾಡಿ ಪ್ರತಿಮೆ ಮಾಡ್ತಾರೆ. ಈಗ ರಾಮ ಲಕ್ಷ್ಮಣ ಅಂದ್ಕೊಂಡು ಕೋಟಿ ಜನರ ಕಿಡ್ನ್ಯಾಪ್ ಮಾಡಲು ಬಂದಿದ್ದಾರೆ.
ಮಾತೆತ್ತಿದ್ರೆ ರಾಮಮಂದಿರ, ಮಸೀದಿ, ಹಿಂದೂ ಧರ್ಮ ಅಂತಾರೆ. ಎಷ್ಟು ಅಂತಾ ಅಗೆಯುತ್ತ ಹೋಗ್ತೀರಾ? ಮುಂದೆ ಹರಪ್ಪ, ಮಹೆಂಜೊದಾರ್ ಸಿಗಬಹುದು. ಹಾಗಾದರೆ ಮತ್ತೆ
ಶಿಲಾಯುಗಕ್ಕೆ ಹೋಗ್ತೀರಾ..? ಪೆಟ್ರೋಲ್ ಮುಸ್ಲಿಂ ರಾಷ್ಟ್ರದಲ್ಲಿ ಸಿಗುತ್ತದೆ. ಪೆಟ್ರೋಲ್ ಬೇಡ ಎಂದು ಎತ್ತಿನಗಾಡಿಯಲ್ಲಿ ಹೋಗ್ತೀರಾ? ಈ ಸಲ ಗೆದ್ದರೆ ಇನ್ನಷ್ಟು ನಾಚಿಕೆ ಮಾನ ಮರ್ಯಾದೆ
ಕಳೆದುಕೊಳ್ಳುತ್ತಾನೆ. ಹಿಂದೂ ರಾಷ್ಟ್ರ ಮಾಡಲು ಈ ಮಂಗಗಳು ತಿರುಗಾಡುತ್ತಿದ್ದಾರೆ. ಹಿಂದೂ ರಾಷ್ಟ್ರವಾದ ಮೇಲೆ ಮತ್ತೆ ಜಾತಿ ಪದ್ದತಿ ಶುರು ಮಾಡುತ್ತಾರೆ ಎಂದು ಕಿಡಿಕಾರಿದರು.
ಫೇಕ್ ಡಿಗ್ರಿಯಲ್ಲಿ ಒಡಾಡುತ್ತಿರುವವನಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತದೆ? ಪಾರ್ಲಿಮೆಂಟ್ (Parliament) ಮೇಲೆ ನಾಲ್ಕೈದು ಯುವಕ-ಯುವತಿಯರು ದಾಳಿ ಮಾಡಿದ್ದರು. ಯುವಕರು
ಯಾಕೆ ಹಾಗೆ ಮಾಡಿದರು ಎಂದು ಯೋಚನೆ ಮಾಡಬೇಕು. ನಿರುದ್ಯೋಗ ಸಮಸ್ಯೆ ಇದೆ ಎಂದು ಯುವಕರು ಹೇಳ್ತಿದ್ದಾರೆ. ಬಾಲ್ಯದಲ್ಲಿದ್ದಾಗ ಮಂಗಳೂರು ಹೀಗಾಗುತ್ತೆ ಎಂದು ಗೊತ್ತಿರಲಿಲ್ಲ.
ಎಷ್ಟು ಯುವಕರು ಜೈಲಿನಲ್ಲಿ (Jail) ಕುಳಿತಿದ್ದಾರೆ.
ಗಲಾಟೆ ಮಾಡಿಸುವ ಒಬ್ಬ ಜನಪ್ರತಿನಿಧಿಯ ಮಕ್ಕಳು ಜೈಲಿನಲ್ಲಿದ್ದಾರಾ? ದೇಶದಲ್ಲಿ ದೇವಸ್ಥಾನವನ್ನು ಉದ್ಘಾಟನೆ ಮಾಡುವ ಕೆಲಸ ಯಾರಾದರೂ ಮಾಡಿದ್ದಾರಾ? ಕಾಮಗಾರಿ
ಅಪೂರ್ಣವಾಗಿ ಉದ್ಘಾಟನೆಯಾಗಿದೆ. ಸಂಗ್ರಹಿಸಿದ ದುಡ್ಡೆಲ್ಲಾ ಎಲ್ಲೋಯ್ತು..? ಕೋಟ್ಯಾಂತರ ಇಟ್ಟಿಗೆ ಎಲ್ಲೋಯ್ತು? ಪ್ರಜಾಪ್ರಭುತ್ವ ಅಂದ್ರೆ ಮೆಜಾರಿಟಿ ಅಲ್ಲ. ಮೆಜಾರಿಟಿ ಮುಖ್ಯವಾದ್ರೆ
ಕಾಗೆ ರಾಷ್ಟ್ರೀಯ ಪಕ್ಷಿ ಆಗಬೇಕಿತ್ತು. ಹಸು ರಾಷ್ಟ್ರೀಯ ಪ್ರಾಣಿ ಆಗಬೇಕಿತ್ತು. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಕೊಟ್ಟವರಲ್ಲಿ ಅಧಿಕಾರದ ಶಕ್ತಿ ಇದೆ. ಲೋಕಸಭಾ ಚುನಾವಣೆಯಲ್ಲಿ ಮನೆಮನೆಗೆ
ಈ ಸಂದೇಶ ನೀಡಬೇಕು. ಮೋದಿ (Modi) ಏನು ಕಿಸಿದು ಗುಡ್ಡ ಹಾಕಿದ್ದಾನೆ? ಪ್ರಜಾಪ್ರಭುತ್ವದಲ್ಲಿ ಸೂಕ್ಷ್ಮತೆ ಇರಬೇಕು ಎಂದರು.
ಇದನ್ನು ಓದಿ: ಜ್ಞಾನವಾಪಿಯಲ್ಲಿ ಪೂಜೆಗೆ ತಡೆ ನೀಡಲು ಹೈಕೋರ್ಟ್ ನಕಾರ; ಮುಸ್ಲಿಂ ಸಂಘಟನೆಗಳಿಗೆ ಹಿನ್ನಡೆ