ಅಚ್ಚೇ ದಿನ ಬಂದಾಯ್ತು ; ನಿಮ್ಮಂತ `ಸುಪ್ರೀಂ ನಾಯಕ’ ನಮಗೆ ಬೇಕು ಮೋದಿ ಜೀ : ಪ್ರಕಾಶ್ ರಾಜ್!

prakash raj

ಪಂಚಭಾಷಾ ನಟ(Actor), ರಾಜಕೀಯ ವ್ಯಕ್ತಿಯಾದ(Politician) ಪ್ರಕಾಶ್ ರಾಜ್(Prakash Raj) ಅಚ್ಚೇ ದಿನಕ್ಕೆ ಕ್ಷಣಗಣನೇ ಬಂದಾಯ್ತು, ನಿಮ್ಮಂತ ನಾಯಕ ನಮಗೆ ಬೇಕೇ ಬೇಕು ಎಂದು ಟ್ವೀಟ್(Tweet) ಮಾಡುವ ಮೂಲಕ ಪರೋಕ್ಷವಾಗಿ ಪ್ರಧಾನಿ ಮೋದಿಯವರಿಗೆ ಟಾಂಗ್ ನೀಡಿದ್ದಾರೆ. ಹೌದು, ಇತ್ತೀಚಿಗೆ ಹೊರಬಂದ ಸಮೀಕ್ಷೆಯ ವರದಿಯ ಅನುಸಾರ ಪೆಟ್ರೋಲ್(Petrol), ಡೀಸೆಲ್(Diesel), ಎಲ್‌ಪಿಜಿ(LPG) ಅಥವಾ ಸಿಎನ್‌ಜಿ(CNG) ಬೆಲೆ ಏರಿಕೆಯು ಜನರು ಜೀವನವನ್ನು ನಡೆಸಲು ಬಹಳ ಕಷ್ಟಕರವಾದ ಪರಿಸ್ಥಿತಿಗೆ ತಂದೊಡ್ಡಿದೆ ಎಂದು ತಿಳಿಸಿದೆ.

ಈ ಎಲ್ಲಾ ಇಂಧನಗಳ ಬೆಲೆಗಳು ಕಳೆದ ಕೆಲವು ದಿನಗಳಲ್ಲಿ ಬಹಳ ವೇಗವಾಗಿ ಏರಿಕೆಯಾಗುತ್ತಿವೆ. ವಿಶ್ವದ ೩ ಅತ್ಯಂತ ದುಬಾರಿ ಎಲ್‌ಪಿಜಿ ಬೆಲೆ ಈಗ ಭಾರತದಲ್ಲಿ ಲಭ್ಯವಿದೆ ಎಂದು ಮಾಹಿತಿ ಕೊಟ್ಟಿದೆ? ವಿಶ್ವದ ಅತ್ಯಂತ ದುಬಾರಿ LPG ಭಾರತದಲ್ಲಿ ಕಂಡುಬಂದರೆ, ‘ಕರೆನ್ಸಿಗಳ ಖರೀದಿ ಸಾಮರ್ಥ್ಯದ ಪ್ರಕಾರ ಅದನ್ನು ಲೆಕ್ಕಾಚಾರ ಮಾಡುವ ಮೂಲಕ ಉತ್ತರವನ್ನು ಕಾಣಬಹುದಾಗಿದೆ. ಆದ್ರೆ ಅದಕ್ಕಾಗಿ ಅಂತರಾಷ್ಟ್ರೀಯ ಆರ್ಥಿಕತೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು.

ಅಂದಹಾಗೆ, ಈ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಪೆಟ್ರೋಲ್ ಬೆಲೆ ವಿಶ್ವದ ಪ್ರತಿ ಲೀಟರ್‌ಗೆ ಮೂರನೇ ಅತಿ ಹೆಚ್ಚು ಬೆಲೆಯಾಗಿದೆ ಎಂದು ತಿಳಿಸಲಾಗಿದೆ. ಆದರೆ ಡೀಸೆಲ್ ವಿಷಯದಲ್ಲಿ ನಾವು ವಿಶ್ವದಲ್ಲಿ 8 ನೇ ಸ್ಥಾನದಲ್ಲಿದ್ದೇವೆ. ಸದ್ಯ ದೇಶದಲ್ಲಿ ದಿನೇ ದಿನೇ ದಿಢೀರ್ ಎಂಬಂತೆ ಇಂಧನ ಬೆಲೆಯಲ್ಲಿ ಪೈಸೆ ಲೆಕ್ಕಾಚಾರದಲ್ಲಿ ಏರಿಕೆಯಾಗುತ್ತಿದ್ದರೆ, ಜನರು ಪ್ರತಿನಿತ್ಯ ಬಳಸುವ ಗೃಹಬಳಕೆ ಎಲ್.ಪಿ.ಜಿ ಸಿಲಿಂಡರ್ ಬೆಲೆಯಲ್ಲಿ 50 ರೂ ಹೆಚ್ಚಳವಾಯಿತು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 250 ರೂ. ಏರಿಕೆಗೊಂಡಿದೆ ಮತ್ತು ವಿದ್ಯುತ್ ಬೆಲೆಯಲ್ಲೂ ಕೂಡ ಯೂನಿಟ್ ಲೆಕ್ಕಾಚಾರದಲ್ಲಿ ಏರಿಕೆ ಕಂಡಿದೆ.

ಈ ಎಲ್ಲಾ ಏರಿಕೆಯನ್ನು ಜನಸಾಮಾನ್ಯರು ವಿರೋಧಿಸುತ್ತಿದ್ದಾರೆ. ಇದೆ ಸಂಗತಿ ಇಂದು ರಾಜಕೀಯ ವಲಯದಲ್ಲೂ ಕೇಳಿಬರುತ್ತಿದ್ದು, ತಮ್ಮದೇ ಶೈಲಿಯಲ್ಲಿ ನಾಯಕರು ಕೇಂದ್ರ ಸರ್ಕಾರವನ್ನು ಗುರಿ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ. ಸರಣಿ ಟ್ವೀಟ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿರುವವರ ಸಾಲಿನಲ್ಲಿ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದು, ಅಚ್ಚೇ ದಿನ ಹತ್ತಿರಬಂದಾಯ್ತು, ನಿಮ್ಮಂತ ಸುಪ್ರೀಂ ನಾಯಕ ನಮಗೆ ಬೇಕಿದೆ ಪ್ರೀತಿಯ ಮೋದಿ ಜೀ…ನಿಮಗೆ ನಮ್ಮ ನಮನಗಳು ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

Exit mobile version