ಮೈಸೂರು ಮಹಾರಾಜರ ನಂತರ ಮೈಸೂರನ್ನು ಅಭಿವೃದ್ಧಿ ಮಾಡಿದ್ದು ‘ನಾನು ರೀ’ – ಪ್ರತಾಪ್ ಸಿಂಹ!

ಮೈಸೂರು ಜಿಲ್ಲೆಯನ್ನು ಮೈಸೂರು ಮಾಹಾರಾಜರ ನಂತರ ತಾನೇ ಅದನ್ನು ಅಭಿವೃದ್ಧಿ ಮಾಡಲು ಶ್ರಮಿಸಿದ್ದು, ನನ್ನ ಕೊಡುಗೆ ಅಪಾರವಿದೆ ಎಂಬ ಮಾತನ್ನು ಮೈಸೂರು-ಕೊಡಗು ಸಂಸದರಾದ ಪ್ರತಾಪ್ ಸಿಂಹ ಇಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮ್ಮ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗಳು, ಅಭಿವೃದ್ಧಿ ಕಾರ್ಯಗಳು, ರಸ್ತೆ ಅಗಲೀಕರಣ ಇವೆಲ್ಲದನ್ನು ಅಭಿವೃದ್ದಿ ಮಾಡಿದ್ದು ನಾನು, ನಾನು ಎಂದು ಒತ್ತಿ ಹೇಳುವ ಮೂಲಕ ತಮ್ಮದೇ ಕೊಡುಗೆ ಎಂಬ ವಾಕ್ಯವನ್ನು ಒತ್ತಿ ಹೇಳಿದ್ದಾರೆ.

ಇತ್ತೀಚೆಗೆ ಮೈಸೂರಿನಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಸಲು ಹೊಸ ರಸ್ತೆಗಳನ್ನು ಅಗೆದು ಗುಂಡಿ ತೋಡಿರುವ ವಿಚಾರಕ್ಕೆ ಭಾರೀ ಟೀಕೆಗೆ ಒಳಗಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಈ ರೀತಿ ಹೇಳುವ ಮೂಲಕ ತಮ್ಮನ್ನು ಕಾಲೆಳೆದ ಅನ್ಯ ಮೈಸೂರಿನ ಶಾಸಕರಿಗೆ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ತಮ್ಮ ಹೇಳಿಕೆಯಲ್ಲಿ ನಾನು ಮಾಡಿದ್ದು, ನಂದೇ ಹೆಚ್ಚು ಕೊಡುಗೆ ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಬಿತ್ತರಿಸಿದ್ದಾರೆ. ಮಹಾರಾಜರ ನಂತರ ಅತಿ ಹೆಚ್ಚು ಲೀಡ್ ನಲ್ಲಿ ಗೆದ್ದಿರೋದು ನಾನು, ನನ್ನಿಂದಲೇ ಮೈಸೂರು ಅಭಿವೃದ್ಧಿ ಆಗಿರೋದು.

ಶಾಸಕ ಎಲ್. ನಾಗೇಂದ್ರ ಅಭಿವೃದ್ಧಿ ಹರಿಕಾರ ಎನ್ನುವ ಭ್ರಮೆಯಲ್ಲಿದ್ದಾರೆ. ಅವರ ಬಳಿ ಮೂವತ್ತು ಕೋಟಿ ರೂಪಾಯಿ ತರಲು ಆಗಲಿಲ್ಲ. ಆದರೆ 300 ಕೋಟಿ ಕೆಲಸ ಎಂದು ಹೇಳುತ್ತಾರೆ. ಎಲ್ಲಿದೆ 300 ಕೋಟಿ? ಯಾವ ರಸ್ತೆ ಮಾಡಿಸಿದ್ದೀರಿ?ಎಲ್ಲಿ ನಿಮ್ಮ ಕೆಲಸ ಆಗಿದೆ ಎಂಬುದನ್ನು ನಮಗೂ ತೋರಿಸಿ ಹೇಳಿ, ಆ ನಂತರ ಮಾತನಾಡಿ ಎಂದು ಹೇಳುವ ಮುಖೇನ ತಿರುಗೇಟು ನೀಡಿದ್ದಾರೆ. ಶಾಸಕರು ಗೋವಾಗೆ ತೆರಳಲು ಫ್ಲೈಟ್ ತಂದಿದ್ದು ನಾನು. ಬೆಂಗಳೂರು ಮೈಸೂರು ಹೆದ್ದಾರಿ ಮಾಡಿಸಿದ್ದು ನಾನು, ಕ್ಷೇತ್ರದ ಕಸ ಸಮಸ್ಯೆ ನಿವಾರಿಸಲು ನಿಂತಿದ್ದು ನಾನು. ಆ ಶಾಸಕರು ರಿಯಲ್ ಎಸ್ಟೇಟ್ ಮಾಡಲಿ. ಆದರೆ ಕೃಷ್ಣರಾಜ, ಚಾಮರಾಜ ಕ್ಷೇತ್ರಗಳು ಅವರ ಬಡಾವಣೆಗಳಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಸಾಧನೆಗಳ ದೊಡ್ಡ ಪಟ್ಟಿಯನ್ನೇ ಎಲ್ಲರಿಗೂ ವಿವರಿಸಿದ್ದಾರೆ.

ಯಾರನ್ನು ದಾರಿ ತಪ್ಪಿಸುವುದು ಬೇಡ. ಏನೇನೋ ಮಾತನಾಡುವುದು ಬೇಡ. ಊಹಾಪೋಹಗಳ ಚರ್ಚೆ ಏತಕ್ಕೆ ಬೇಕು? ಪಾಲಿಕೆಯಲ್ಲಿ ಚರ್ಚೆಗೆ ಬಂದಿದ್ದರೆ ಎಲ್ಲ ಮಾಹಿತಿ ನೀಡುತ್ತಿದ್ದೆ, ಪ್ರಧಾನಿ ಮೋದಿ ಅವರಿಗಿಂತ ನಾಗೇಂದ್ರ, ರಾಮದಾಸ್ ಬಹಳ ಪ್ರಭಾವಿಗಳು ಹಾಗೂ ಅನುಭವಿಗಳು. ಇವರಿಬ್ಬರು ಪ್ರಧಾನಿ ಮೋದಿಗೆ ಪತ್ರ ಬರೆಯಲಿ. ಯೋಜನೆ ಸರಿಯಿಲ್ಲ, ನಾವು ನಿಮಗಿಂತ ಹಿರಿಯರೆಂದು ಹೇಳಲಿ ಎಂದು ಪ್ರತಾಪ್ ಸಿಂಹ ಗುಡುಗಿದ್ದಾರೆ.

Exit mobile version