ಹಿಜಾಬ್ ಬೇಕೇ ಬೇಕು ಎನ್ನುವವರು ಮದರಸಿಗೆ ಹೋಗಿ! : ಸಂಸದ ಪ್ರತಾಪ್ ಸಿಂಹ

hijaab

ಹಿಜಾಬ್‌ ಟೊಪ್ಪಿ ಧರಿಸಿಕೊಂಡು ಬರುವುದಾದರೆ ಮದರಸಿಗೆ ಹೋಗಿ ಅಧ್ಯಯನ ಮಾಡಿ ಎಂದು ಸಂಸದ ಪ್ರತಾಪ್‌ ಸಿಂಹ ಟೀಕಿಸಿದ್ದಾರೆ. ಎಲ್ಲಾ ರೀತಿಯ ಒತ್ತಡ, ಟೀಕಾ ಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ. ಹಿಜಾಬ್ಗಾಗಿ ವಿದ್ಯಾರ್ಥಿಗಳು ಇಷ್ಟು ಹಠ ಹಿಡಿದು ಯಾಕಾಗಿ ಕೂತಿದ್ದಾರೆ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು. ಎಲ್ಲರೂ ಕಾಲೇಜಿಗೆ ಜಾಬ್ಗಾಗಿ ಬರುತ್ತಾರೆ. ನೀವು ಹಿಜಾಬ್ಗಾಗಿ ಬರುತ್ತೀದ್ದೀರಾ? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು. ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಹೇರಿಕೆ ಇಲ್ಲಿ ನಡೆಯುವುದಿಲ್ಲ. ಈ ನೆಲದ ಸಂಸ್ಕೃತಿಯನ್ನು ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಒಪ್ಪಿಕೊಳ್ಳಬೇಕು ಎಂದಿದ್ದಾರೆ. ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಮಾತನಾಡಿದ ಅವರು, ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಾಸಿಗೆ ಹೋಗಿ. ಮದರಸಾದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿಕೊಳ್ಳಬಹುದು. ಸರಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ. ಇದು ಬ್ರಿಟಿಷರ ಭಾರತವಲ್ಲ, ಇದು ಭರತ ಖಂಡ. ಹಿಂದೂ ಧರ್ಮದ ಬುನಾದಿ ಮೇಲೆ ಇರುವ ದೇಶವಿದು. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ ಸಂಸ್ಕೃತಿಯ ಭಾಗ. ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version