ಕೇಂದ್ರ ಸರ್ಕಾರದಿಂದ ವಿದ್ಯುತ್ ಖಾಸಗೀಕರಣಕ್ಕೆ ಸಿದ್ಧತೆ

ನವದೆಹಲಿ, ಆ. 10: ಸರ್ಕಾರದ ವ್ಯಾಪ್ತಿಯಲ್ಲಿರು ವಿದ್ಯುತ್ ಇಲಾಖೆಯನ್ನು ಕೂಡ ಖಾಸಗೀಕರಣ ಮಾಡಿವತ್ತ ಕೇಂದ್ರ ಸರ್ಕಾರ ಹಜ್ಜೆ ಇಟ್ಟಿದ್ದು, ಈ ಬಾರಿಯ ಅಧಿವೇಶನದಲ್ಲಿ ವಿದ್ಯುತ್ ಮಸೂದೆ 2021 ಮಂಡನೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಈ ಮಸೂದೆಗೆ ಅಂಗೀಕಾರ ದೊರೆತರೆ ರಾಜ್ಯದಲ್ಲೂ ವಿದ್ಯುತ್‌ ಸರಬರಾಜು ವ್ಯವಸ್ಥೆ ಖಾಸಗಿಯವರಿಗೆ ವಹಿಸಲು ಅವಕಾಶ ದೊರೆಯಲಿದೆ. ಪ್ರಸ್ತುತ ಕರ್ನಾಟಕದಲ್ಲಿ 50 ಸಾವಿರ ಕೋಟಿ ರೂ ಸಾಲವಿದ್ದು, ಒಂದು ವೇಳೆ ಖಾಸಗೀಕರಣಕ್ಕೆ ನೀಡುವುದಾದರೆ ಈ ಎಲ್ಲಾ ಸಾಲಗಳನ್ನು ಪಾವತಿಸಿ ನಂತರ ಖಾಸಗೀಕರಣಕ್ಕೆ ನೀಡಬೇಕಾಗುತ್ತದೆ.

ಖಾಸಗೀಕರಣಕ್ಕೆ ವಿರೋಧಿಸಿ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಅಧಿಕಾರಿಗಳ ಅಸೋಸಿಯೇಷನ್‌ಗಳ ಒಕ್ಕೂಟ ಆಗಸ್ಟ್‌ 10 ರಂದು ಒಂದು ದಿನ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಮಸೂದೆಯನ್ನು ಹಿಂತೆಗೆದುಕೊಳ್ಳದಿದ್ದಲಿ ಮುಂದಿನ ಹಂತಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಒಕ್ಕೂಟ ತಿಳಿಸಿದೆ. ಎಲ್ಲಾ ಉಹಾಪೋಹಗಳಿಗೂ ಈ ಬಾರಿಯ ಅಧಿವೇಶನದಲ್ಲಿ ಉತ್ತರ ದೊರೆಯಲಿದೆ.

Exit mobile version