ಬೆಂಗಳೂರು: ಪ್ರೆಸ್ಕ್ಲಬ್ ಆಫ್ ಬೆಂಗಳೂರು (Press Club Of Bengaluru) 2023ನೇ ಸಾಲಿನ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳನ್ನು (Press Club Award-DKS) ಪ್ರಕಟಿಸಿದ್ದು, 29 ಪತ್ರಕರ್ತರು
‘ಪ್ರೆಸ್ಕ್ಲಬ್ ಜೀವಮಾನ ಸಾಧನೆ’ ಪ್ರಶಸ್ತಿಗೆ (Press Club Award-DKS) ಭಾಜನರಾಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ @DKShivakumar ಅವರನ್ನು ‘ವರ್ಷದ ವ್ಯಕ್ತಿ ಪ್ರಶಸ್ತಿ’ಗೆ ಪ್ರೆಸ್ಕ್ಲಬ್ ಸದಸ್ಯರು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ
ಕಾಂಗ್ರೆಸ್ (Congress) ಸಾರಥ್ಯವಹಿಸಿದ್ದ ಡಿ.ಕೆ.ಶಿವಕುಮಾರ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ರಾಜಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ
ಕಾಂಗ್ರೆಸ್ನ ಹಿರಿಯ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ (Shamanuru Shivashankarappa) ಅವರಿಗೆ ‘ಪ್ರೆಸ್ಕ್ಲಬ್ ವಿಶೇಷ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ.
ಪತ್ರಿಕಾ ವಿತರಕರಿಗೆ ಅಪಘಾತ ವಿಮೆ ಯೋಜನೆ ಜಾರಿಗೆ ತಂದಿರುವ ಸಚಿವ ಸಂತೋಷ್ ಲಾಡ್ ಹಾಗೂ ಏಷ್ಯಾ ಬ್ಯಾಸ್ಕೇಟ್ ಬಾಲ್ ಫೆಡರೇಷನ್ ಅಧ್ಯಕ್ಷರಾಗಿ ಆಯ್ಕೆಗೊಂಡ ಮೊದಲ ಕನ್ನಡಿಗ
ಡಾ.ಗೋವಿಂದರಾಜುಗೆ ‘ಪ್ರೆಸ್ಕ್ಲಬ್ ಪ್ರಶಸ್ತಿ’ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಮಾಧ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ 29 ಪತ್ರಕರ್ತರಿಗೆ ‘ಪ್ರೆಸ್ಕ್ಲಬ್ ಜೀವಮಾನ ಸಾಧನೆ’
ಪ್ರಶಸ್ತಿ ನೀಡಲು ಬೆಂಗಳೂರು ಪ್ರೆಸ್ಕ್ಲಬ್ ನಿರ್ಧರಿಸಿದೆ.
ಜೀವಮಾನ ಸಾಧನೆ ಪ್ರಶಸ್ತಿ: ಸದಾಶಿವ ಶೆಣೈ ಕೆ, ಆರ್.ಶಂಕರ್ (R Shankar), ಡಾ.ಕೂಡ್ಲಿ ಗುರುರಾಜ್, ಕೆ.ಕೆ ಮೂರ್ತಿ (ಕಂ.ಕ ಮೂರ್ತಿ), ನಾಗರಾಜ್ ಎಂ. (ಪ್ರಜಾವಾಣಿ), ರೂಪಾ ಆರ್.ರಾವ್,
ಸತೀಶ್ ಕುಮಾರ್ ಬಿ.ಎಸ್, ರಾಕೇಶ್ ಪ್ರಕಾಶ್ (ಟೈಮ್ಸ್ ಆಫ್ ಇಂಡಿಯಾ), ರಮೇಶ್ ಬಿ.ಎನ್ (ಅಭಿಮನ್ಯು), ಕಿರಣ್ ಹೆಚ್.ವಿ (Kiran H V), ಚನ್ನಕೃಷ್ಣ ಪಿ.ಕೆ, ವಿಜಯ್ ಕುಮಾರ್ ಮಲಗಿಹಾಳ್,
ಮನೋಜ್ ಕುಮಾರ್ (Manoj Kumar), ಮುತ್ತು ಪಿ, ಶ್ರೀಕಂಠ ಶರ್ಮ. ಆರ್, ಸಿದ್ದೇಶ್ ಕುಮಾರ್ ಹೆಚ್.ಪಿ (ನ್ಯೂಸ್ಫಸ್ಟ್ ಕನ್ನಡ), ಅಫ್ಯಾನ್ ಯಾಸ್ಮಿನ್, ಚಂದ್ರಶೇಖರ್. ಎಂ, ಭಾಸ್ಕರ್ ಕೆ.ಎಸ್
(Bhaskar K S), ಸುಭಾಷ್ ಹೂಗಾರ್, ಪ್ರಸನ್ನಕುಮಾರ್ ಲೂಯಿಸ್ (Prasanna Kumar Luis), ಶಂಕರೇಗೌಡ ಹೆಚ್.ಡಿ, ಜನಾರ್ಧನಾಚಾರಿ ಕೆ.ಎಸ್, ಲಿಂಗರಾಜು ಡಿ.ನೋಣವಿನಕೆರೆ,
ಮೋಹನ್ ರಾವ್, ಸಾವಂತ್.ಜಿ (Savanth G), ಅನಂತರಾಮು ಸಂಕ್ಲಾಪುರ್.ಎಲ್, ಕೌಶಿಕ್.ಆರ್ (ಸ್ಪೋರ್ಟ್ಸ್), ಲಕ್ಷ್ಮಿಸಾಗರ ಸ್ವಾಮಿಗೌಡ , ಚಿದಾನಂದ ಪಟೇಲ್
ಯಾವಾಗ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ?
ಡಿಸೆಂಬರ್ (December 31) ರಂದು ಬೆಳಗ್ಗೆ 11.30ಕ್ಕೆ ಪ್ರೆಸ್ಕ್ಲಬ್ ಆವರಣದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಈ ಕಾರ್ಯಕ್ರಮಕ್ಕೆ
ಚಾಲನೆ ನೀಡಲಿದ್ದಾರೆ. ಸುಪ್ರೀಂ ಕೋರ್ಟ್ (Supreme Court) ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ‘ವರ್ಷದ ವ್ಯಕ್ತಿ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ. ವಸತಿ ಸಚಿವ ಜಮೀರ್ ಅಹ್ಮದ್ ಖಾನ್
(Zameer Ahmed Khan)ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ಇದನ್ನು ನೋಡಿ: ಕರವೇಯಿಂದ ಬೃಹತ್ ಪ್ರತಿಭಟನೆ: ಆಂಗ್ಲ ನಾಮಫಲಕಗಳನ್ನ ಕಿತ್ತು ಎಸೆದ ಕಾರ್ಯಕರ್ತರು
- ಭವ್ಯಶ್ರೀ ಆರ್ ಜೆ