ಎಲೆಕ್ಟ್ರಿಕ್,ಹೈಬ್ರಿಡ್ ವಾಹನಗಳ ಮಾರಾಟದಲ್ಲಿ ಬಾರಿ ಏರಿಕೆ: ಡೀಸೆಲ್ ವಾಹನ ಮಾರಾಟ 2% ಇಳಿಕೆ

New Delhi: ಇಂಧನ ಬೆಲೆಯು ಗಗನಕ್ಕೆ ಏರುತ್ತಿದ್ದು, ಈ ವೇಳೆ ಗ್ಯಾಸ್ ಮತ್ತು ಎಲೆಕ್ಟ್ರಿಕ್ (Electric) , ಹೈಬ್ರಿಡ್ ವೆಹಿಕಲ್ (Hybrid Vehicle) ಗಳಿಗೆ ಬೇಡಿಕೆ ಹೆಚ್ಚಾಗಿದೆ. ಏರುತ್ತಿರುವ ಇಂಧನ ಬೆಲೆ ಮತ್ತು ವಾಯುಮಾಲಿನ್ಯ ಕುರಿತು ಜಾಗೃತಿ ಹೆಚ್ಚುತ್ತಿರುವ ನಡುವೆ ಡೀಸೆಲ್ ವಾಹನಗಳ ಮಾರಾಟ ಇಳಿಕೆ ಆಗುತ್ತಿದೆ. ಕಳೆದ ಏಪ್ರಿಲ್- ಸೆಪ್ಟೆಂಬರ್ ಅವಧಿಯಲ್ಲಿ ಡೀಸೆಲ್ ವಾಹನಗಳ ಮಾರಾಟ ಶೇಕಡ ಎರಡರಷ್ಟು ಕುಸಿತಗೊಂಡಿದೆ.

ಇದೇ ವೇಳೆಯಲ್ಲಿ ಇತರ ವಾಹನಗಳ ಮಾರಾಟ ಸಂಖ್ಯಾ ದಾಖಲೆ ಸೃಷ್ಟಿಸುವ ನಿರೀಕ್ಷೆಯಲ್ಲಿದ್ದು, ದೇಶದಲ್ಲಿ ಕಳೆದ ಏಪ್ರಿಲ್ ಇಂದ ಸೆಪ್ಟೆಂಬರ್(September) ಅವಧಿಯಲ್ಲಿ ಮಾರಾಟ ಶೇಕಡ ಎರಡಕ್ಕೆ ಕುಸಿತಗೊಂಡಿದ್ದು, ಈ ಅವಧಿಯಲ್ಲಿ ಹಲವು SUV ಕಾರುಗಳು ಬಿಡುಗಡೆಯಾಗಿದೆ. ವಾಹನ ಮಾರಾಟ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಅವಧಿಯಲ್ಲಿ ಸಿಎನ್‌ಜಿ(CNG), ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ಮಾರಾಟ ಸಂಖ್ಯೆ ಹೆಚ್ಚುತ್ತಿದ್ದು,ಇಂಧನ ಬೆಲೆ ಹೆಚ್ಚುತ್ತಿರುವ ಕಾರಣ ಮತ್ತು ವಾಯು ಮಾಲಿನ್ಯವನ್ನು ನಿಯಂತ್ರಿಸಲು ಡೀಸೆಲ್ (Diesel) ವಾಹನಗಳ ಮಾರಾಟ ಇಳಿಕೆ ಆಗುತ್ತಿದೆ. ಒಟ್ಟಾರೆ ಏಪ್ರಿಲ್ ನಿಂದ ಸೆಪ್ಟಂಬರ್ ಅವಧಿಯಲ್ಲಿ 20,70,326 ಪ್ರಯಾಣಿಕ ವಾಹನಗಳು ದೇಶದಲ್ಲಿ ಮಾರಾಟವಾಗಿದೆ.

ಎಲೆಕ್ಟ್ರಿಕ್ ವೆಹಿಕಲ್ – 50,000 284 ಮಾರಾಟ – 112% ಹೆಚ್ಚಳ.
ಹೈಬ್ರಿಡ್ ವಾಹನ – 31686 ಮಾರಾಟ – 1,195 % ಹೆಚ್ಚಳ.
ಸಿ.ಎನ್.ಜಿ ವಾಹನ– 2,83,963 – ಮಾರಾಟ – 1% ಹೆಚ್ಚಳ.
ಡೀಸೆಲ್ ವಾಹನ – 366881 – 2% ಇಳಿಕೆ.

2027 ಕ್ಕೆ ಡಿಜೆ ಚಲಿತ ವಾಹನ ನಿಷೇಧ?
2030ರ ಒಳಗಾಗಿ ದೇಶದಲ್ಲಿ ಎಂಟು ಬ್ಯಾಟರಿಗಳನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡಲಾಗುವುದು ಎಂದು ಟಾಟಾ ಮೋಟರ್ಸ್ ಮಾಲಿಕತ್ವದ “ಜಾಗ್ವಾರ್ ಲ್ಯಾಂಡ್ ರೋವರ್ ” ಆಟೋಮೊಬೈಲ್ (Automobile) ಸಂಸ್ಥೆ ಘೋಷಿಸಿದೆ. ಸದ್ಯ ದೇಶದಲ್ಲಿ ಜಾಗ್ವಾರ್” ಹೈಫೇಸ್ “ಎಂಬ ಎಲೆಕ್ಟ್ರಿಕ್ ವಾಹನ ಮಾರಾಟ ಮಾಡುತ್ತಿದೆ.

ಇದರ ಕುರಿತು ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಲೆನಾಡ್ ಹುರ್ನಿಕ್ ” ಭಾರತ ಸೇರಿದಂತೆ ಎಲ್ಲಾ ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಬಿಡುವುದಾಗಿ ಯೋಜನೆಯನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎಲೆಕ್ಟ್ರಿಕ್ ವೆಹಿಕಲ್ ಗಳ ತಯಾರಿಕೆಗಾಗಿ ಸರ್ಕಾರಗಳು ಸಬ್ಸಿಡಿ ನೀಡುತ್ತಿವೆ.

ದಯಾನಂದ್

Exit mobile version