ಪ್ರಧಾನಿಯಂತೆ ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ ಆಗಬಾರದಿತ್ತೆ – ನಟ ಕಿಶೋರ್

ಉಪಗ್ರಹಕ್ಕಿಂತ ಪರದೆಯ ಮೇಲೆ ಹೆಚ್ಚು ರಾರಾಜಿಸಿ ಮೆರೆದ ಪ್ರಧಾನಿಯಂತೆ (Prime Minister – Actor Kishore) ನಾನೂ ಕೂಡ ಸ್ವಾರ್ಥಿಯೂ, ಅಸೂಕ್ಷ್ಮಮತಿಯೂ, ಸಂವೇದನಾಹೀನನೂ

ಆಗಬಾರದಿತ್ತೆ. ಸಂಬಳವೂ ಇಲ್ಲದೆ ದುಡಿದ ನನ್ನ ದೇಶದ ವಿಜ್ಞಾನಿಗಳ ಬೆವರ ಫಲವನ್ನು ಸಂಭ್ರಮಿಸಲು..??? ಎಂದು ನಟ ಕಿಶೋರ್ (Kishore) ಪ್ರಧಾನಿ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ಚಂದ್ರನ ದಕ್ಷಿಣ ಧ್ರುವದ ಮೇಲೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಭಾರತದ ಉಪಗ್ರಹ ಅಡಿಯಿರಿಸಿದೆ,

ಹೆಮ್ಮೆಯಿದೆ, ಎದೆ ಬೀಗಿದೆ, ಆದರೆ, ಸಂಭ್ರಮಿಸಲೇ ಎನ್ನುತ್ತಿರುವಂತೆಯೇ ನನ್ನ ಕಣ್ಣ ಮುಂದೆ, ನನ್ನ ದೇಶದ ಕುತಂತ್ರಿ ರಾಜಕಾರಿಣಿಗಳು ನನ್ನ ಮನೆಯ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಬೆತ್ತಲೆ

ಚಂದಿರನಂಗಳಕ್ಕೆ 3 ವಿಕ್ರಮ: ಚಂದ್ರಯಾನ ಗೆಲುವಿಗೆ ಕಾರಣವಾಗಿರುವ ಪ್ರಮುಖ ದಿಗ್ಗಜರುಗಳು

ಮೆರವಣಿಗೆ ಮಾಡಿ ಅತ್ಯಾಚಾರ ಮಾಡುತ್ತಿರುವ ಚಿತ್ರ ಬಂದು ನಿಲ್ಲುತ್ತದೆ. ನನ್ನ ರೈತ ಸಹೋದರರ ಮೇಲೆ ಜೀಪು ಹರಿಸಿ ಕೊಲ್ಲುತ್ತಿರುವ ಚಿತ್ರ ಹಿಂದೂ ಮುಸ್ಲಿಂ ಮೂಲಭೂತವಾದಿಗಳಿಗೆ ಕುಮ್ಮಕ್ಕು

ಕೊಟ್ಟು ದೇಶವನ್ನು ಒಡೆಯುತ್ತಿರುವ ಚಿತ್ರ ನನ್ನ ಮುಸ್ಲಿಂ ಕ್ರಿಶ್ಚಿಯನ್ ಸಹೋದರ ಸಹೋದರಿಯರ ಮನೆ, ಹೊಟ್ಟೆಪಾಡಿನ ಅಂಗಡಿಗಳನ್ನು ಧರ್ಮಾಂಧ ಬುಲ್ಡೊಜರುಗಳು ಪುಡಿ ಪುಡಿ ಮಾಡುತ್ತಿರುವ

ಚಿತ್ರ. ರಾಜಕೀಯ ದಾಳಗಳಾಗಿ ಸಾಯುತ್ತಲೇ ಇರುವ ಕಶ್ಮೀರದ ಜನತೆಯ ಚಿತ್ರ ಇಂದಿಗೂ ದಲಿತರ, ಆದಿವಾಸಿಗಳ ಮೇಲೆ ಎಸಗುತ್ತಿರುವ ಹೇಸಿಗೆ ದೌರ್ಜನ್ಯದ ಚಿತ್ರ, ದೇಶದ ಯೋಧರನ್ನು

ರಾಜಕಾರಿಣಿಗಳೇ ತಯಾರು ಮಾಡಿದ ಸಾವಿನ ಕೂಪಕ್ಕೆ ತಳ್ಳುವ ಚಿತ್ರ ಹೀಗೇ (Prime Minister – Actor Kishore) ನೂರಾರು ಎಂದಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ಇನ್ಸ್ಟಾಗ್ರಾಮಿನ (Instagram) ಈ ನಿಯಮಗಳು ನನ್ನ ನೊಂದು ಬೆಂದ ಮಣಿಪುರಕ್ಕೆ , ಕಾಶ್ಮೀರಕ್ಕೆ , ಗುಜರಾತಿಗೆ, ನೂಹ್ ಗೆ, ಹಾಥರಸ್ ಗೆ, ಸಿಂಘು ಬಾರ್ಡ್ರರಿಗೆ,

ಲಖೀಮ್ ಪುರ್ ಖೀರಿಗೆ, ಧರ್ಮಸ್ಥಳಕ್ಕೆ, ದೇಶದ ಉದ್ದಗಲಕ್ಕೆ ಅನ್ವಯಿಸಿಬಿಟ್ಟಿದ್ದರೆ ಎಷ್ಟು ಚೆಂದ. ಇವರು ಹೇಳುವ “ADULT SEXUAL EXPLOITATION“ ಅನ್ನು ನನ್ನ ದೇಶದ

ಮನಃಪಟಲದಿಂದ ನನ್ನ ಪೋಸ್ಟಿನ ಹಾಗೆ ಅಳಿಸಿಬಿಡಲು ಸಾಧ್ಯವಿದ್ದಿದ್ದರೆ ಎಷ್ಟು ಚೆಂದ. ನಾನೋ, ನಾನು ಹಾಕುವ ಪೋಸ್ಟೊ, ಮೋದಿಯೋ, ಗೋದಿಯೋ ಮುಖ್ಯವೇ ಅಲ್ಲ . ಈ ದೇಶವನ್ನು,

ಕುವೆಂಪು ಗಾಂಧಿ ಅಂಬೇಡ್ಕರ್ ಬುದ್ಧ ಬಸವರ ಕನಸಿನ ಸರ್ವ ಸಮಾನತೆಯ ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಉಳಿಸಿಕೊಳ್ಳುತ್ತೇವೆಯಾ ಎನ್ನುವುದಷ್ಟೇ ಮುಖ್ಯ ಎಂದಿದ್ದಾರೆ.

Exit mobile version