• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಚಂದಿರನಂಗಳಕ್ಕೆ 3 ವಿಕ್ರಮ: ಚಂದ್ರಯಾನ ಗೆಲುವಿಗೆ ಕಾರಣವಾಗಿರುವ ಪ್ರಮುಖ ದಿಗ್ಗಜರುಗಳು

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಚಂದಿರನಂಗಳಕ್ಕೆ 3 ವಿಕ್ರಮ: ಚಂದ್ರಯಾನ ಗೆಲುವಿಗೆ ಕಾರಣವಾಗಿರುವ ಪ್ರಮುಖ ದಿಗ್ಗಜರುಗಳು
0
SHARES
205
VIEWS
Share on FacebookShare on Twitter

ಬಹುನಿರೀಕ್ಷಿತ ಚಂದ್ರಯಾನ-3ರ (Chandrayaan-3) ವಿಕ್ರಮ ಲ್ಯಾಂಡರ್ (Vikram Lander) ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿಯುವುದನ್ನು ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತುರದಿಂದ ಕಾಯುತ್ತಿತ್ತು. ಚಂದ್ರನಿಗೆ ಮುತ್ತಿಕ್ಕಲು ವಿಕ್ರಂ ಕೆಲವೇ ದೂರದಲ್ಲಿ ಭಾರಿ ಜಾಗ್ರತೆಯಿಂದ ಬುಧವಾರ ಸಂಜೆ 6.4 ರ ಸಿಗ್ನಲ್ಗೋಸ್ಕರ ಕಾಯುತ್ತಿದ್ದ ಬಳಿಕ ಚಂದ್ರನನ್ನು ಸ್ಪರ್ಶಿಸಿಯೇ ಬಿಟ್ಟ ಚಂದ್ರನೂರಿನ ಕೌತುಕ ಜಗತ್ತಿಗೆ ಲ್ಯಾ೦ಡರ್ ಲ್ಯಾಂಡ್ ಆಗುವ ಹಿಂದೆ ನೂರಾರು ವಿಜ್ಞಾನಿಗಳ ಶ್ರಮ ಇದ್ದು, ಅವರ ನಿರಂತರ ಪ್ರಯತ್ನ, ಹಗಲಿರುಳೆನ್ನದೆ ಪಡುತ್ತಿರುವ ಪರಿಶ್ರಮದಿಂದ ಚಂದಿರನಂಗಳಕ್ಕೆ ವಿಕ್ರಮ ಕಾಲಿಡುವ ಅಪೂರ್ವ ಕ್ಷಣ ನಮ್ಮದಾಗಿತ್ತು. ಹಾಗಾದ್ರೆ ಬನ್ನಿ ಈ ಚಂದ್ರಯಾನದ ಹಿಂದಿರೋ ಪ್ರಮುಖ ಹೀರೋಗಳು ಯಾರು ಅನ್ನೋದನ್ನು ತಿಳಿದುಯೋಣ.

chandrayaan3

ಎಸ್ ಸೋಮನಾಥ್ (ಇಸ್ರೋ ಅಧ್ಯಕ್ಷ):
ಎಸ್ ಸೋಮನಾಥ್ (S Somanath) ಅವರು ಭಾರತದ ಚಂದ್ರಯಾನ ಮಿಷನ್ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರು. ಇವರು ಇಸ್ರೋ ಅಧ್ಯಕ್ಷರಾಗಿದ್ದಾರೆ. ಇವರು ಕಳೆದ ವರ್ಷದ ಜನವರಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಂಡವರು. ಇನ್ನು ವಿಕ್ರಮ್ ಸಾರಾಭಾಯ್ (Vikram Sarabhai) ಬಾಹ್ಯಾಕಾಶ ಕೇಂದ್ರ ಮತ್ತು ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇವೆರಡು ಸಂಸ್ಥೆ ISRO ಗಾಗಿ ರಾಕೆಟ್ ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರಾಥಮಿಕ ಕೇಂದ್ರಗಳು. ಎಸ್ ಸೋಮನಾಥ್ ಅವರು ಚಂದ್ರಯಾನ-3 ಹಾಗೆಯೇ ಆದಿತ್ಯ-L1 ಟು ಸನ್ (Aditya-L1 to Sun) ಮತ್ತು ಗಗನ್ಯಾನ್ (Gaganyaan) ನಂತಹ ಇತರ ಮಹತ್ವದ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿದ ಮಹಾನ್ ವಿಜ್ಞಾನಿ ಎನಿಸಿಕೊಂಡಿದ್ದಾರೆ.

ಎಸ್ ಉನ್ನಿಕೃಷ್ಣನ್ ನಾಯರ್ (ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ನಿರ್ದೇಶಕ)
ಕೇರಳದ (Kerala) ತಿರುವನಂತಪುರಂನ ಸಮೀಪವಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಾರ್ಕ್-III ಅನ್ನು (Geosynchronous Satellite Launch Vehicle Mark-III) ಅಭಿವೃದ್ಧಿಪಡಿಸಿತ್ತು. ನಂತರ ಅದನ್ನು ಲಾಂಚ್ ವೆಹಿಕಲ್ ಮಾರ್ಕ್-III (Launch Vehicle Mark-III) ಎಂದು ಮರುನಾಮಕರಣ ಮಾಡಲಾಯಿತು. ವಿಎಸ್‌ಎಸ್‌ಸಿಯ (VSSC) ಉಸ್ತುವಾರಿ ವಹಿಸಿರುವ ಎಸ್ ಉನ್ನಿಕೃಷ್ಣನ್ ನಾಯರ್ (S Unnikrishnan Nair) ಚಂದ್ರಯಾನ 3 ಮಿಷನ್ನ ಹಲವಾರು ಪ್ರಮುಖ ಕಾರ್ಯಗಳ ಉಸ್ತುವಾರಿ ವಹಿಸಿದ್ದಾರೆ.

ಪಿ ವೀರಮುತ್ತುವೇಲ್ (ಚಂದ್ರಯಾನ 3 ಯೋಜನಾ ನಿರ್ದೇಶಕ)
2019 ರಲ್ಲಿ ಚಂದ್ರಯಾನ-3 ಯೋಜನೆಯ ಚುಕ್ಕಾಣಿ ಹಿಡಿಯುವ ಮೊದಲು ಪಿ ವೀರಮುತ್ತುವೆಲ್ (P Weeramuthuvel ಅವರು ಇಸ್ರೋದ (ISRO) ಬಾಹ್ಯಾಕಾಶ ಮೂಲಸೌಕರ್ಯ ಕಾರ್ಯಕ್ರಮ ಕಚೇರಿಯ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಇವರು ಚಂದ್ರಯಾನ-2 (Chandryaan-2) ಯೋಜನೆಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದು, ಭಾರತದ ಎರಡನೆಯ ಮೂನ್-ಮಿಷನ್ (Moon-Mission) ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ (IIT-M)ನಲ್ಲಿ (Indian Institute of Technology Madras (IIT-M) ಪದವಿ ಪಡೆದ ಪಿ ವೀರಮುತ್ತುವೇಲ್ ತಮಿಳುನಾಡಿನ (Tamilnadu) ವಿಲ್ಲುಪುರಂನಿಂದ ಬಂದಿದ್ದಾರೆ.

success makers

ಎಂ ಶಂಕರನ್ (ಯು.ಆರ್ ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ)
ಎಂ ಶಂಕರನ್ (M Shankaran) ಅವರನ್ನು ಜೂನ್ 2021 ರಲ್ಲಿ ಯು.ಆರ್ ರಾವ್ (U.R.Rao) ಉಪಗ್ರಹ ಕೇಂದ್ರದ (URSC) ನಿರ್ದೇಶಕರಾಗಿ ನೇಮಿಸಲಾಯಿತು. ಭಾರತದ ಎಲ್ಲಾ ಉಪಗ್ರಹಗಳನ್ನು ಈ ಕೇಂದ್ರದಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ನಿರ್ಮಿಸಲಾಗಿದೆ. ಸಂವಹನ, ನ್ಯಾವಿಗೇಷನ್ (Navigation), ರಿಮೋಟ್ ಸೆನ್ಸಿಂಗ್, ಹವಾಮಾನ ಮುನ್ಸೂಚನೆ ಮತ್ತು ಗ್ರಹಗಳ ಅನ್ವೇಷಣೆಯಲ್ಲಿ ರಾಷ್ಟ್ರದ ಅವಶ್ಯಕತೆಗಳನ್ನು ಪೂರೈಸಲು ಉಪಗ್ರಹಗಳನ್ನು ರಚಿಸುವ ಗುಂಪಿನ ಜವಾಬ್ದಾರಿಯನ್ನು ಪ್ರಸ್ತುತ ಎಂ ಶಂಕರನ್ ಹೊಂದಿದ್ದಾರೆ.

ಎ ರಾಜರಾಜನ್ (ಉಡಾವಣಾ ಅಧಿಕಾರ ಮಂಡಳಿ ಮುಖ್ಯಸ್ಥ)
ಎ ರಾಜರಾಜನ್ (A Rajarajan) ಅವರು ಪ್ರಸಿದ್ಧ ವಿಜ್ಞಾನಿಯಾಗಿದ್ದು, ಶ್ರೀಹರಿಕೋಟಾದ (Sriharikota) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ಶಾರ್ (SDSC SHAR) ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು LAB ಯ ಅಧ್ಯಕ್ಷರೂ ಆಗಿದ್ದು, ಇದು ಉಡಾವಣೆಗೆ ಗ್ರೀನ್ ಸಿಗ್ನಲ್ ನೀಡುತ್ತದೆ. ಗಗನ್ಯಾನ್ ಮತ್ತು ಎಸ್‌ಎಸ್‌ಎಲ್‌ವಿ (SSLV) ಸೇರಿದಂತೆ ಇಸ್ರೋದ ವಿಸ್ತರಣೆಯ ಉಡಾವಣಾ ಬೇಡಿಕೆಗಳಿಗೆ ಘನ ಮೋಟಾರ್‌ಗಳು ಮತ್ತು ಉಡಾವಣಾ ಮೂಲಸೌಕರ್ಯಗಳು ಸಿದ್ಧವಾಗಿವೆ ಎಂದು ಎ ರಾಜರಾಜನ್ ಖಚಿತಪಡಿಸಿಕೊಂಡಿದ್ದಾರೆ ಮತ್ತು ಇದರ ಸಂಯೋಜಿತ ವಸ್ತುಗಳಲ್ಲಿ ಪರಿಣತರಾಗಿದ್ದಾರೆ.

ಈ ಅದ್ಬುತ ವಿಜ್ಞಾನಿಗಳ ಜೊತೆ ಜೊತೆಗೆ ಚಂದ್ರಾಯಣ 3 ತಂಡದ ಜೊತೆ ಮೋಹನ್ ಕುಮಾರ್ (Mohan Kumar) ಮತ್ತು ಬಿಜು ಸಿ ಥಾಮಸ್ (Biju C Thomas) ಅವರನ್ನು ಒಳಗೊಂಡಿತ್ತು. ಸುಮಾರು 54 ಮಹಿಳಾ ಎಂಜಿನಿಯರ್‌ಗಳು/ವಿಜ್ಞಾನಿಗಳು ಈ ಕಾರ್ಯಾಚರಣೆಯಲ್ಲಿ ನೇರವಾಗಿ ಕೆಲಸ ಮಾಡಿದ್ದರು. ಅಲ್ಲದೆ ಚಂದ್ರಯಾನ 3 ಯಶಸ್ವಿಯಾಗಲು ದೇಶಾದ್ಯಂತ ಪೂಜೆ, ಹವನಗಳನ್ನೂ ನೆರವೇರಿಸಲಾಯಿತು.

ಭವ್ಯಶ್ರೀ ಆರ್. ಜೆ

Tags: chandrayaan-3IsrossomanathstarsSuccesswon

Related News

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ
ಪ್ರಮುಖ ಸುದ್ದಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ: 144 ಸೆಕ್ಷನ್ ನಿಷೇಧಾಜ್ಞೆ ಜಾರಿ

October 2, 2023
ಗಾಂಧಿ ಜಯಂತಿ: ರಾಷ್ಟ್ರಪಿತರಾದ ಬಾಪು ರವರ ಜನ್ಮದಿನದ ಕುರಿತಾದ ಮಾಹಿತಿ ಇಲ್ಲಿದೆ.
ದೇಶ-ವಿದೇಶ

ಗಾಂಧಿ ಜಯಂತಿ: ರಾಷ್ಟ್ರಪಿತರಾದ ಬಾಪು ರವರ ಜನ್ಮದಿನದ ಕುರಿತಾದ ಮಾಹಿತಿ ಇಲ್ಲಿದೆ.

October 2, 2023
ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ
Sports

ಏಷ್ಯನ್ ಗೇಮ್ಸ್ – 2023 : ಮಿಶ್ರ ಡಬಲ್ಸ್ ಟೆನಿಸ್ನಲ್ಲಿ ಚಿನ್ನ ತಂದ ಬೋಪಣ್ಣ-ರುತುಜಾ ಜೋಡಿ

September 30, 2023
ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ
ದೇಶ-ವಿದೇಶ

ಏಕರೂಪ ನಾಗರಿಕ ಸಂಹಿತೆ ವ್ಯಾಪ್ತಿಯೊಳಗೆ ಸಲಿಂಗ ವಿವಾಹಕ್ಕೆ ಅವಕಾಶವಿಲ್ಲ: ಕಾನೂನು ಆಯೋಗ ವರದಿ

September 30, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
Menu
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.