ಸರ್ವಂ ಖಾಸಗೀಕರಣ ಮಯಂ !

ಇತ್ತೀಚಿನ ದಿನಗಳಲ್ಲಿ ಮಾತೆತ್ತಿದರೆ ಖಾಸಗೀಕರಣ ಎಂಬ ಮಾತು ಕೇಂದ್ರ ಸರ್ಕಾರದಿಂದ ಕೇಳಿ ಬರುತ್ತಿದೆ.  ಹಿಂದೆಲ್ಲಾ ಹಂತ ಹಂತವಾಗಿ ಒಂದೊಂದೋ ಕ್ಷೇತ್ರವನ್ನು ಖಾಸಗಿಯವರಿಗೆ ಒಪ್ಪಿಸಿರುವ ಕೇಂದ್ರ ಸರ್ಕಾರ ಈ ಬಾರಿ ಎಲ್ಲವನ್ನೂ ಒಂದೇ ಬಾರಿ ಮಾರಿಬಿಡುವ ಸಾಹಸಕ್ಕೆ ಕೈ ಹಾಕಿದೆ. ಸರ್ಕಾರಿ ಆಸ್ತಿ ‘ಮುದ್ರೀಕರಣ’ ಅನ್ನೋ ಹೆಸರಿನಲ್ಲಿ ನಮ್ಮ ದೇಶದ ಹೆಚ್ಚಿನ ಅಂದ್ರೆ ಆರು ಲಕ್ಷ ಕೋಟಿ ಮೌಲ್ಯದ  ಸರ್ಕಾರಿ ಆಸ್ತಿಯನ್ನು ಖಾಸಗಿಯವರ ಪದತಲಕ್ಕೆ ಇಟ್ಟಿದ್ದಾರೆ. 

ಕೇಂದ್ರ ಸಚಿವೆ ನಿಮರ್ಲಾ ಸೀತಾರಾಮನ್ ಘೋಷಿಸಿರುವಂತೆ ಮುಂದಿನ 4 ವರ್ಷದಲ್ಲಿ ರಸ್ತೆ, ರೈಲು, ವಿಮಾನ ನಿಲ್ದಾಣಗಳು, ಕಲ್ಲಿದ್ದಲ ಗಣಿ, ಕ್ರೀಡಾಂಗಣ, ಟೆಲಿಕಾಂ, ಜನತಾ ಕಾಲೋನಿಗಳು, ಗ್ಯಾಸ್ ಪೈಪ್‍ಲೈನ್‍ಗಳನ್ನು ಖಾಸಗಿ ಬಳಕೆಗೆ ಅವಕಾಶ ಕೊಡುತ್ತೇವೆ ಎಂದಿದ್ದಾರೆ.  ಸರ್ಕಾರಿ ಆಸ್ತಿಯ ನಗದೀಕರಣದಿಂದ ಹೊಸ ಮೂಲಸೌಕರ್ಯ ಸೃಷ್ಟಿಯಾಗುತ್ತೆ. ಅಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಇದು ಅಗತ್ಯವಾಗಿದೆ. ಆ ಮೂಲಕ ಹೆಚ್ಚಿನ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡಲಾಗುತ್ತದೆ ಎಂಬುವುದು ಸರ್ಕಾರದ ಸ್ಪಷ್ಟನೆಯಾಗಿದೆ.

ಏನಿದು ಖಾಸಗೀಕರಣ ?

ಸರಕಾರಕ್ಕೆ ಹೊಸ ಆದಾಯ ಮೂಲವನ್ನು ಸೃಷ್ಟಿಸಲು ಸರಕಾರದ ನಾನಾ ಇಲಾಖೆಯಲ್ಲಿ ಬಳಕೆಯಾಗದೆ ಉಳಿದಿರುವ ಅಥವಾ ಭಾಗಶಃ ಬಳಕೆಯಲ್ಲಿರುವ ಆಸ್ತಿಗಳ ಸಂಪೂರ್ಣ ಬಳಕೆ ಹಾಗೂ ಇದು ಸಾರ್ವಜನಿಕ ಆಸ್ತಿಯ ಬಂಡವಾಳ ಹಿಂತೆಗೆತವೇ ಆಸ್ತಿ ನಗದೀಕರಣ ಎಂದು ಸರ್ಕಾರ ಹೇಳುತ್ತಿರುವ ಮಾತಾಗಿದೆ. ನೇರವಾಗಿ ಹೇಳಬೇಕೆಂದರೆ ಉಚಿತವಿದ್ದ ಸೌಲಭ್ಯಗಳನ್ನು ಸಾರ್ವಜನಿಕರು ದುಡ್ಡುಕೊಟ್ಟು ಬಳಸುವುದು ಎಂದರ್ಥ.

ಕೇಂದ್ರ ಸರ್ಕಾರ ಹೇಳುವಂತೆ ಈಗ ಇದನ್ನೆಲ್ಲಾ ಖಾಸಗಿಯವರಿಗೆ ನೀಡಿದರೂ ಮಾರಾಟ ಮಾಡುವುದಿಲ್ಲ.ಇವೆಲ್ಲವೂ ಕೂಡ ಸರ್ಕಾರದ ಸ್ವಾಧೀನದಲ್ಲೇ ಇರುತ್ತದೆ. ಖಾಸಗೀಕರಣದಿಂದ ಬರುವ ಹಣವನ್ನು ಮೂಲಭೂತ ಸೌಕರ್ಯಕ ಕ್ಷೇತ್ರಕ್ಕೆ ಬಳಸಲಾಗುತ್ತದೆ ಎಂಬುವುದು ಸರ್ಕಾರದ ವಾದವಾಗಿದೆ.

ಈ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ (ಎನ್ಎಂಪಿ) ಪ್ರಕಾರ 160 ಕಲ್ಲಿದ್ದಲು ಗಣಿ, 25  ವಿಮಾನ ನಿಲ್ದಾಣ,  15 ರೈಲ್ವೇ ಸ್ಟೇಡಿಯಂಗಳನ್ನು ಖಾಸಗಿ ಬಳಕೆಗೆ ನೀಡಲಾಗುತ್ತಿದೆ.

ಅಲ್ಲದೆ ದೇಶಾದ್ಯಂತ ಇರುವ ರಸ್ತೆಗಳಲ್ಲಿ ಸುಮಾರು 26,700 ಕಿ.ಮೀ. ಉದ್ದದ ರಸ್ತೆಯನ್ನು ಖಾಸಗೀಕರಣಗೊಳಿಸಸುವ ಯೋಜನೆಯಿದ್ದು  ಅದರಿಂದ 1.60 ಲಕ್ಷ ಕೋಟಿ ರೂ. ಗಳಿಸುವ ನಿರೀಕ್ಷೆಇದೆ. ಇದಕ್ಕೂ ಮೊದಲು 1400 ಕಿ.ಮೀ ಉದ್ದದ ಹೆದ್ದಾರಿಯನ್ನು 1700 ಕೋಟಿ ರೂ.ಗೆ ಖಾಸಗೀಕರಣಗೊಳಿಸಲಾಗಿದೆ. ಇನ್ನು ಪವರ್ ಗ್ರಿಡ್ ನ 5 ಆಸ್ತಿಗಳನ್ನು 7,700 ಕೋಟಿ ರೂ. ಕೂಡ ಸರ್ಕಾರ ಹಿಂದೆಯೇ ಖಾಸಗೀಕರಣಗೊಳಿಸಲಾಗಿದೆ

ವಲಯವಾರು ಖಾಸಗೀಕರಣ

ಖಾಸಗೀಕರಣಕ್ಕೆ 5 ವಲಯಗಳನ್ನಾಗಿ ವಿಭಜಿಸಲಾಗಿದೆ  ಒಟ್ಟು ಎನ್ಎಂಪಿ ಯ ಮೌಲ್ಯದ ಶೇ.83 ಅನ್ನು ಪಡೆಯುತ್ತದೆ. ಈ ಪ್ರಮುಖ 5 ವಲಯಗಳಲ್ಲಿ: ರಸ್ತೆಗಳು (ಶೇ27) ನಂತರ ರೈಲ್ವೆ (ಶೇ.25), ವಿದ್ಯುತ್ (ಶೇ.15), ತೈಲ ಮತ್ತು ಅನಿಲ ಕೊಳವೆ ಮಾರ್ಗಗಳು (ಶೇ.8) ಮತ್ತು ಟೆಲಿಕಾಂ (ಶೇ.6) ಸೇರಿವೆ.

ಸಾರ್ವಜನಿಕರಿಗೆ ಇದರಿಂದ ಉಪಯೋಗಕ್ಕಿಂತ ಅನಾನೂಕುವೇ ಹೆಚ್ಚಿದ್ದು, ಇದರಿಂದಾಗಿ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸಬೇಕಾದವರು ಸಾರ್ವಜನಿಕರೇ ಹೊರತು ಸರ್ಕಾರವಲ್ಲ.

1.     ಕಾಲೋನಿ ಮಾರಟ : ಬಡವಾಣೆಗಳನ್ನು ಖಾಸಗೀಕರಣಗೊಳಿಸುತ್ತಿರುವುದರಿಂದ ಕಾಲೋನಿಗಳನ್ನು ತೆಗೆದುಕೊಂಡವನ್ನು ಹೇಳಿದಂತೆ ಕೇಳುವ ಪರಿಸ್ಥಿತಿ ನಿರ್ಮಾಣವಾದರೂ ಆಗಬಹುದು.

2.     ರಸ್ತೆಗಳಲ್ಲಿ ನಾಯಿಕೊಡೆಗಳಂತೆ ಟೋಲ್ ಗಳು ತಲೆಯೆತ್ತಬಹುದು

3.     ವಿದ್ಯುತ್ ಖಾಸಗೀಕರಣಗೊಂಡು ವಿದ್ಯುತ್ ಬಿಲ್‌ಗಳ ದರಗಳು ಹೆಚ್ಚಾಗಬಹುದು

4.     ಟೆಲಿಕಾಂ ಖಾಸಗೀಕರಣದಿಂದ 1ಜಿಬಿ ಡಾಟಗಳಿಗೆ ಮುಂದಿನ ದಿನಗಳಲ್ಲಿ 500 ರೂ ಆದರೂ ಕೂಡ ಅತಿಶಯೋಕ್ತಿ ಇಲ್ಲ.

ಹಿಂದೆಯೂ ಕೂಡ ಹಲವು ಯೋಜನೆಗಳು ಖಾಸಗೀಕರಣವಾಗಿದ್ದವು ಇದರಿಂದ ಸಾಮಾನ್ಯ ಜನರಿಗೆ ಏನು ಉಪಯೋಗವಾಗಿದೆ ಎಂದು ಸರ್ಕಾರವೇ ಹೇಳಬೇಕು.  ಇರುವುದೆಲ್ಲವ ಮಾರಿ ಕೊನೆಗೊಂದು ದಿನ ಭಾರತೀಯರು ಬಂಡವಾಳ ಶಾಹಿಗಳ ಗುಲಾಮರಾಗಿ ಬದುಕಬೇಕಾದ ಪರಿಸ್ತಿತಿ ಬಂದರೂ ಬರಬಹುದಾಗಿದೆ. ಅದಕ್ಕೂ ಮುನ್ನ ಭಾರತೀಯರು ಎಚ್ಚೆತ್ತುಕೊಳ್ಳಬೇಕಿರುವುದು ಅನಿವಾರ್ಯವಾಗಿದೆ.

ಲಾಸ್ಟ್‌ ಪಂಚ್‌:  ಪೊಲೀಸ್ ಇಲಾಖೆ ಮತ್ತು ಮಿಲಿಟರಿಯೂ ಖಾಸಗೀಕರಣ ಆಗುತ್ತಾ?

Exit mobile version