ಹೆಚ್ಚುತ್ತಿರುವ ಹಿಂದುಗಳ ಹತ್ಯೆಗಳು(Hindu Murder) ನಿಲ್ಲುವುದು ಯಾವಾಗ ಎಂದು ಸಂಸದ(MP) ತೇಜಸ್ವಿ ಸೂರ್ಯ(Tejaswi Surya) ಕೇಳಿದ್ದಾರೆ. ಮುಖ್ಯಮಂತ್ರಿಗಳು, ಗೃಹ ಸಚಿವರು ಅಸಮರ್ಥರು ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಹೇಳಿದ್ದಾರೆ.
ಹಿಂದುಗಳ ಹತ್ಯೆಗಳು ನಿಲ್ಲುವುದು ಯಾವಾಗ ಎಂದು ಬಿಜೆಪಿ ಕಾರ್ಯಕರ್ತರೂ ಕೇಳುತ್ತಿದ್ದಾರೆ, ಉತ್ತರಿಸಿ ಎಂದು ಕಾಂಗ್ರೆಸ್ ನಾಯಕ(Congress MLA) ಪ್ರಿಯಾಂಕ್ ಖರ್ಗೆ(Priyank Kharghe) ತಿಳಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್(Tweet) ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು(BJP Workers), ಗೃಹ ಮಂತ್ರಿಗಳು ಹಾಗೂ ಸಿಎಂ ರಾಜೀನಾಮೆಗೆ ಪಟ್ಟು ಹಿಡಿದಾಗ, ಬಿಜೆಪಿ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಜನ ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ.
ಪ್ರವೀಣ್ ಅವರ ಪತ್ನಿಯೇ ಈ ಸರ್ಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ. ಸಚಿವರಾದ ಸುನಿಲ್ ಕುಮಾರ್(Sunil Kumar) ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಘೇರಾವ್ ಮಾಡಿದಾಗ ಈ ಸರ್ಕಾರಕ್ಕೆ ಜ್ಞಾನೋದಯವಾಗಿದೆ.
ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ಮುಂದಾದಾಗ ಜ್ಞಾನೋದಯವಾಗಿದೆ. ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿದೆ. ಪ್ರವೀಣ್ ಅವರ ಸಾವಿನಿಂದ ಮನನೊಂದು ರದ್ದು ಮಾಡಿದ್ದಾಗಿ ಕಾರಣ ಕೊಟ್ಟಿದ್ದಾರೆ.
ಆದರೆ ಸತ್ಯಾಂಶ ಏನೆಂದರೆ, ಪ್ರವೀಣ್ ಅವರ ಹತ್ಯೆಯಾಗಿದ್ದು, ಜುಲೈ 23ರಂದು. ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು, ಜುಲೈ 28 ಬೆಳಗಿನ ಜಾವ 12:30 ರಂದು ಎಂದು ಲೇವಡಿ ಮಾಡಿದ್ದಾರೆ.

ಇನ್ನು ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯಬೇಕು. ಇದುವರೆಗೂ ಆಗಿರುವ ಕೋಮು ಗಲಭೆ ಹಾಗೂ ಕೋಮು ಹತ್ಯೆಗಳ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು.