ಭವಾನಿ ರೇವಣ್ಣ ಕಾರಿಗೆ ಬೈಕ್ ಡಿಕ್ಕಿ ಪ್ರಕರಣ: ಭವಾನಿ ರೇವಣ್ಣ ಅವರ ದರ್ಪಕ್ಕೆ ಸಾರ್ವಜನಿಕರ ಆಕ್ರೋಶ

Mysore: ಮೈಸೂರು (Mysore) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದ ಬಳಿ ಶಾಸಕ ಹೆಚ್‌ಡಿ ರೇವಣ್ಣ (Public Against Bhavani Revanna) ಅವರ ಪತ್ನಿ, ಜೆಡಿಎಸ್‌ ನಾಯಕಿ

ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಸ್ಥಳದಲ್ಲಿ ಭವಾನಿ ರೇವಣ್ಣ (Bhavani Revanna) ದರ್ಪ ಮೆರೆದಿದ್ದಾರೆ. ಅವರ ಬೈಕ್ ಸವಾರನ ಜೊತೆಗೆ

ನಡೆದುಕೊಂಡಿರುವ ರೀತಿಗೆ ಎಲ್ಲೆಡೆ ಭಾರೀ (Public Against Bhavani Revanna) ಆಕ್ರೋಶ ವ್ಯಕ್ತವಾಗಿದೆ.

ಭವಾನಿ ರೇವಣ್ಣ ಪ್ರಯಾಣಿಸುತ್ತಿದ್ದ KA-03-NK-5 ನಂಬರಿನ ಕಾರಿಗೆ ಶಿವಣ್ಣ (Shivanna) ಎಂಬಾತನ ಬೈಕ್‌ ಡಿಕ್ಕಿ ಹೊಡೆಯಿತು ಆದರೆ ಇದು ಆಕಸ್ಮಿಕ ಘಟನೆಯಾಗಿದ್ದು, ಬೈಕ್ ಸವಾರನ ವಿರುದ್ಧ

ಭವಾನಿ ರೇವಣ್ಣ ಅವಾಚ್ಯವಾಗಿ ನಿಂದಿಸಿದ್ದಾರೆ.

ಬೋರ್ಡ್‌ (Board) ಎಲ್ಲಾ ಸಖತ್ ಡ್ಯಾಮೇಜ್‌ ಆಗಿದೆ, ಎಲ್ಲಿಗೆ ನುಗ್ಗಿಸ್ತೀಯಾ ಸುಟ್ಟ ಹಾಕ್ರೋ…. ಈ ಗಾಡಿ ಎಷ್ಟು ಡ್ಯಾಮೇಜ್‌ ಆಗಿದೆ, ಹೆಂಗೆ ರೆಡಿ ಮಾಡ್ಸೋದು? ಎಲ್ಲಾ ಹೋಗಿದೆ, ನೀನ್ ಫೋನ್

ತಗೋಬೇಡ, ನಡಿ ಆಚೆಗೆ ಯಾವನು ಸೀಝ್ ಮಾಡಿ ಗಾಡಿ. ಅವನಿಗೆ ಬೈಕ್ (Bike) ಮುಟ್ಟಬೇಡ ಅಂತ ಹೇಳು. ಸಾಲಿಗ್ರಾಮ ಎಸ್‌ಐ ಬರಲು ಹೇಳು. ಒಂದುವರೆ ಕೋಟಿ ರೂಪಾಯಿ ಗಾಡಿ ಅದು,

ಅದನ್ನು ಡ್ಯಾಮೇಜ್ (Damage) ಮಾಡಿ ಬಿಟ್ಟಿದ್ದಾನೆ. ಏನ್ ಅರ್ಜೆಂಟ್ ಇತ್ತು? ಏನ್ ದೇಶ ಮುಳುಗಿ ಹೋಗಿತ್ತಾ ಎಂದೆಲ್ಲಾ ಹಿಗ್ಗಾ ಮುಗ್ಗ ಬೈದಿದ್ದಾರೆ.

ಇನ್ನು ಅದೇ ವೇಳೆ ಅಕ್ಕ ಗಾಡಿ ತೆಗೀರಿ, ಹೋಗೋಣ ಎಂದು ಸ್ಥಳದಲ್ಲಿ ಇದ್ದವರು ಹೇಳಿದಾಗ ಅದಕ್ಕೆ ಗಾಡಿ ತಗಂಡು ಏನ್ ಮಾಡೋಣ? ಕೊಡ್ತಿಯಾ 50 ಲಕ್ಷ ರಿಪೇರಿ ಮಾಡುವುದಕ್ಕೆ ಎಂದು ಅವರನ್ನೇ

ಪ್ರಶ್ನಿಸಿದ್ದಾರೆ. ನಿಂತಿದ್ದವರು ದುಡ್ಡು ಕೊಡುವ ಹಾಗಿದ್ದರೆ ನ್ಯಾಯ ಮಾತನಾಡಲು ಬನ್ನಿ ಎಂದು ಕೂಗಾಡಿದ್ದಾರೆ.

ಒಂದುವರೆ ಕೋಟಿ ರೂಪಾಯಿ ಗಾಡಿ, ಬೋರ್ಡ್ (Board) ಎಲ್ಲಾ ಏನು ಇಲ್ಲ. ಸಾಯಂಗಿದ್ರೆ ನೀನು ಸಾಯಬೇಕಿತ್ತು ಬಸ್‌ಗೆ ಸಿಗಾಕಂಡು, ನನ್ನ ಕಾರು ಡ್ಯಾಮೇಜ್ ಮಾಡಕೆ ನೀನ್ ಯಾವನು?

ಒಂದುವರೆ ಕೋಟಿ ರೂಪಾಯಿ ಡ್ಯಾಮೇಜ್ ಯಾವನ್ ಕಟ್ಟೋನು? ಎಂದು ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ನಿಂದಿಸಿದ್ದಾರೆ.

ಬೈಕ್ ಸವಾರನ ವಿರುದ್ಧ ದೂರು
ಭವಾನಿ ರೇವಣ್ಣ ಕಾರಿಗೆ ಡಿಕ್ಕಿ ಹೊಡೆದ ಬೈಕ್ ಸವಾರನ ವಿರುದ್ಧ ದೂರು ದಾಖಲಾಗಿದೆ. ಬೈಕ್ ಸವಾರ ಶಿವಣ್ಣ ಎಂಬಾತನ ಮೇಲೆ ಭವಾನಿ ಕಾರು ಚಾಲಕ ಮಂಜುನಾಥ್ (Manjunath)

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬೈಕ್ ಸವಾರನ ಮೇಲೆ ಸಿಆರ್‌ಪಿಸಿ ಸೆಕ್ಷನ್ (CRPC Section) 157 ರಡಿ ಪ್ರಕರಣ ದಾಖಲಿಸಿಕೊಂಡಿದ್ದು,

ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

ಭವಾನಿ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ
ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವ್ಯಾಪಕವಾಗಿ ವೈರಲ್‌ (Viral) ಆಗಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಬಳಕೆದಾರರು ಭವಾನಿ ರೇವಣ್ಣ ವಿರುದ್ಧ

ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಪಘಾತದ ಬಳಿಕ ಬೈಕ್‌ ಸವಾರನ ಆರೋಗ್ಯ ವಿಚಾರಿಸದೆ ಭವಾನಿ ತಮ್ಮ ಕಾರಿನ ಬಗ್ಗೆ ತಲೆಕೆಡಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.ಆಕಸ್ಮಿಕವಾಗಿ ನಡೆಯುವ

ಘಟನೆಗೆ ಈ ರೀತಿಯ ವರ್ತನೆ ಸರಿಯಲ್ಲ. ಇದು ದುರಹಂಕಾರ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ ಮಾಡಿದ್ದು, ನಿಮ್ಮ ವಾಹನಕ್ಕೆ ವಿಮೆ ಕ್ಲೈಮ್‌ ಮಾಡಬಹುದು. ಬೈಕ್‌ ಸವಾರನ ಪ್ರಾಣಕ್ಕೆ

ಏನಾದರೂ ಆದರೆ ಯಾರು ಹೊಣೆ? ಅಹಂಕಾರದ ಮಾತುಗಳನ್ನು ಸ್ವಲ್ಲ ಕಡಿಮೆ ಮಾಡಿ ಎಂದು ಬರೆದುಕೊಂಡಿದ್ದಾರೆ.

ಅವ್ಯಾಚ ಪದಗಳನ್ನು ಬಳಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಇವರ ಒಂದೂವರೆ ಕೋಟಿ ಕಾರಿಗೆ ಏನು ಆಗಬಾರದು, ದೊಡ್ಡ ಗೌಡರ ಮನೆಗೆ

ದೊಡ್ಡತನ ನೋಡಿ, ಅಕ್ಕೋ ಸಮಾಧಾನ ಮಾಡ್ಕೊಳಿ ಎಂದೆಲ್ಲಾ ನೆಟ್ಟಿಗರು ಬರೆದುಕೊಂಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ರಾ.ಚಿಂತನ್‌ (Ra.Chinthan), ಸಾಲಿಗ್ರಾಮದ ಬಳಿ ಬಡ ಬೈಕ್ ಸವಾರ ತಮ್ಮ ಕಾರಿಗೆ ಆಕಸ್ಮಿಕವಾಗಿ ಗುದ್ದಿದ್ದಕ್ಕೆ ಭವಾನಿ ರೇವಣ್ಣ ಅವರ

ಪ್ರತಿಕ್ರಿಯೆ ಇದು. ಬಡವ ನೀನು ಬೇಕಾದ್ರೆ ಸಾಯಿ, ನನ್ನ ಕಾರು ಡ್ಯಾಮೇಜ್ ಆಗಿದ್ದು ಸಹಿಸಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಿದ ಇವರು ರೈತ ನಾಯಕ, ಮಣ್ಣಿನ ಮಗ ದೇವೇಗೌಡರ (Devegowda)

ಸೊಸೆ. ಶಾಸಕ ರೇವಣ್ಣ ಅವರ ಪತ್ನಿ, ಸಂಸದ ಪ್ರಜ್ವಲ್ ಅವರ ತಾಯಿ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಯವರ ಅತ್ತಿಗೆ!

ಇದನ್ನು ಓದಿ: ಕ್ಯಾರೆಟ್ ತಿನ್ನುವ ಮೂಲಕ ಆರೋಗ್ಯದ ಲಾಭಗಳನ್ನ ಪಡೆಯಿರಿ.

Exit mobile version