ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಬೆಂಗಾವಲಿಗೆ 42 ಕಾರುಗಳು‌ ; ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

Chandigarh : ಪಂಜಾಬ್‌ನ (Punjab) ಆಮ್‌ಆದ್ಮಿ ಪಕ್ಷದ(Aam Aadmi Party) ನಾಯಕ ಮತ್ತು ಮುಖ್ಯಮಂತ್ರಿ ಭಗವಂತ್‌ ಮಾನ್‌(Bhagwant Mann) ಅವರು ತಮ್ಮ ಬೆಂಗಾವಲಿಗಾಗಿ ೪೨ ಸರ್ಕಾರಿ ಕಾರುಗಳನ್ನು ಬಳಸುತ್ತಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.

ಜನಸಾಮಾನ್ಯರ ಪಕ್ಷ ಎಂದೇ ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರು ಈ ರೀತಿಯಾಗಿ ಸಾಮಾನ್ಯ ಜನರ ತೆರಿಗೆ(Tax) ಹಣವನ್ನು ದುಂದುವೆಚ್ಚ ಮಾಡುತ್ತಿರುವುದು ಸಾರ್ವಜನಿಕರ (Punjab people against bhagwant Mann) ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಭಗವಂತ್ ಮಾನ್ ಅವರು ತಮ್ಮ ಬೆಂಗಾವಲಿಗಾಗಿ 42 ಸರ್ಕಾರಿ ಕಾರುಗಳನ್ನು ಬಳಸುತ್ತಿರುವ ಮಾಹಿತಿ ಆರ್ಟಿಐನಿಂದ ಬಹಿರಂಗವಾಗಿದೆ.

ಮುಖ್ಯಮಂತ್ರಿಗಳ ಈ ದುಂದುವೆಚ್ಚದ ಕ್ರಮವನ್ನು ಕಾಂಗ್ರೆಸ್‌(Congress) ಟೀಕಿಸಿದ್ದು, “ಇದು ಸಾಮಾನ್ಯ ಜನರ ಪಕ್ಷ ಎಂದು ಹೇಳಿಕೊಳ್ಳುವ ಆಮ್‌ ಆದ್ಮಿ ಪಕ್ಷದ ನಾಯಕರ ವಿವಿಐಪಿ ಸಂಸ್ಕೃತಿ” ಎಂದಿದೆ. ಇನ್ನು ಆರ್ಟಿಐ ಮಾಹಿತಿಯನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಪ್ರತಾಪ್ಸಿಂಗ್ ಬಾಜ್ವಾ,

https://youtu.be/ON7s2-NUA18 ಕನ್ನಡ ವಿದ್ಯಾರ್ಥಿಗಳಿಗೆ ಯಾಕೆ ಈ ದ್ರೋಹ?

ಮುಖ್ಯಮಂತ್ರಿ ಭಗವಂತ್ ಮಾನ್ ಅವರು ತಮ್ಮ ಬೆಂಗಾವಲಿಗಾಗಿ 42 ಸರ್ಕಾರಿ ಕಾರುಗಳನ್ನು ಹೊಂದಿದ್ದಾರೆ. ಇದು ಹಿಂದಿನ ಮುಖ್ಯಮಂತ್ರಿಗಳಾದ ಪ್ರಕಾಶ್ ಸಿಂಗ್ ಬಾದಲ್, ಅಮರೀಂದರ್ ಸಿಂಗ್ ಮತ್ತು ಚರಣ್ಜಿತ್ ಸಿಂಗ್ ಚನ್ನಿ ಅವರು ಬಳಸುತ್ತಿದ್ದದ್ದಕಿಂತ ಹೆಚ್ಚಿನದ್ದಾಗಿದೆ.

ಪ್ರಕಾಶ್ ಸಿಂಗ್ ಬಾದಲ್ 33, ಅಮರೀಂದರ್ ಸಿಂಗ್ 33, ಚರಣ್ಜಿತ್ ಸಿಂಗ್ ಚನ್ನಿ 39 ಸರ್ಕಾರಿ ಬೆಂಗಾವಲು ವಾಹನಗಳನ್ನು ಬಳಸುತ್ತಿದ್ದರು ಎನ್ನಲಾಗಿದೆ. ೪೨ ಸರ್ಕಾರಿ ವಾಹನಗಳನ್ನು ಬೆಂಗಾವಲಿಗಾಗಿ ಬಳಸುತ್ತಿರುವುದು ಮುಖ್ಯಮಂತ್ರಿಗಳ ವಿವಿಐಪಿ ಸಂಸ್ಕೃತಿಯನ್ನು ತೋರಿಸುತ್ತದೆ.

ಮುಖ್ಯಮಂತ್ರಿ ಆಗುವುದಕ್ಕಿಂತ ಮುಂಚೆ ಭಗವಂತ್ ಮಾನ್ (Punjab bhagwant Mann) ಅವರು ಉಪದೇಶ ಮಾಡುತ್ತಿದ್ದಕ್ಕೂ, ಈಗ ನಡೆದುಕೊಳ್ಳುತ್ತಿರುವುದಕ್ಕೂ ವ್ಯತ್ಯಾಸವಿದೆ. ನಾನು ಸಾಮಾನ್ಯ ಜನರ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಭಗವಂತ್ ಮಾನ್, ಸಾಮಾನ್ಯ ಜನರ ತೆರಿಗೆ ಹಣವನ್ನು ತಮ್ಮ ವಿವಿಐಪಿ ಸಂಸ್ಕೃತಿಗಾಗಿ ವೆಚ್ಚ ಮಾಡುತ್ತಿದ್ದಾರೆ.

ಇದನ್ನೂ ಓದಿ : https://vijayatimes.com/nia-court-sends-pfi-workers-to-custody/

ಸಾಮಾನ್ಯ ತೆರಿಗೆದಾರರ ಹಣವನ್ನೇಕೆ ಮನಬಂದಂತೆ ವ್ಯಯಿಸುತ್ತಿದ್ದಾರೆ? ಎಂದು ಪ್ರಶ್ನೆಗೆ ಆಪ್ ನಾಯಕರ ಬಳಿ ಉತ್ತರವಿದೇಯೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

Exit mobile version