ಯಾರಾದರೂ ಸಹಾಯ ಮಾಡಬಹುದೇ? ; ಎಸ್‌ಸಿಒ ಶೃಂಗಸಭೆಯಲ್ಲಿ ಪಾಕ್ ಪ್ರಧಾನಿಯ ಬೇಡಿಕೆ

Samarkhand : ಉಜ್ಬೇಕಿಸ್ತಾನ್ನ(Uzbekisthan) ಸಮರ್ಕಂಡ್ನಲ್ಲಿ ನಡೆಯುತ್ತಿರುವ ಶಾಂಘೈ(Shangai) ಸಹಕಾರ ಸಂಘಟನೆಯ(NCO) ಶೃಂಗಸಭೆಯ ಸಂದರ್ಭದಲ್ಲಿ ಪಾಕಿಸ್ತಾನದ(Pakistan) ಪ್ರಧಾನಿ ಶೆಹಬಾಜ್ ಷರೀಫ್(Shebaz Shareef) ಅವರು ರಷ್ಯಾ(Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್(Vladimar Putin) ಅವರೊಂದಿಗೆ ಸಭೆ ನಡೆಸುವಾಗ ನಡೆದ ಹಾಸ್ಯ ಪ್ರಸಂಗವೊಂದು ಎಲ್ಲರ ಗಮನ ಸೆಳೆದಿದೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಸಭೆ ನಡೆಸುವುದ್ಕಕಿಂತ ಮುಂಚೆ, ಷರೀಫ್ ಅವರು ತಮ್ಮ ಇಯರ್ಫೋನ್(Earphone) ಅನ್ನು ಪ್ಲಗ್ ಮಾಡಲು ಪ್ರಯತ್ನಿಸಿದಾಗ ಹಾಸ್ಯ ಕ್ಷಣ ಸೃಷ್ಟಿಯಾಗಿದೆ.

ಶರೀಫ್ ತನ್ನ ಇಯರ್ಫೋನ್ಗಳನ್ನು ಜೋಡಿಸಲು ತೊಂದರೆಯಾದ ನಂತರ ಸಹಾಯಕ್ಕಾಗಿ ಮನವಿ ಮಾಡಿ, “ಯಾರಾದರೂ ನನಗೆ ಸಹಾಯ ಮಾಡಬಹುದೇ?” ಎಂದು ಕೇಳಿದರು. ಈ ಮಾತನ್ನು ಕೇಳಿದ ಪುಟಿನ್‌ ಪಕ್ಕದಲ್ಲೇ ನಿಂತು ನಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್‌(Viral) ಆಗಿದೆ.

https://twitter.com/ShireenMazari1/status/1570395491371974656?s=20&t=A7zpYFbhJBUCnmnaDRg5Aw

ಇನ್ನು ವೀಡಿಯೊದಲ್ಲಿ, ಷರೀಫ್ಗೆ ಸಹಾಯ ಮಾಡಲು ಯಾರೋ ಬಂದ ನಂತರವು ಅವರ ಇಯರ್ಫೋನ್ ಮತ್ತೆ ಕೆಳಗೆ ಬೀಳುತ್ತದೆ. ಅಂತಿಮವಾಗಿ ಸಭೆ ಪ್ರಾರಂಭವಾಗುವ ಮೊದಲು ಪುಟಿನ್ ನಗುವಿನೊಂದಿಗೆ ಮಾತು ಪ್ರಾರಂಭಿಸುತ್ತಾರೆ. ಇನ್ನು ಪಾಕಿಸ್ತಾನ “ರಷ್ಯಾದಿಂದ ಪಾಕಿಸ್ತಾನಕ್ಕೆ ಪೈಪ್ಲೈನ್ ಮೂಲಕ ಅನಿಲ ಪೂರೈಕೆ ಸಮಸ್ಯೆಯಾಗಿದೆ, ಇದನ್ನು ಸಾಧ್ಯವಾದಷ್ಟು ಬೇಗ ನಿವಾರಿಸಬೇಕೆಂದು” ಮನವಿ ಮಾಡಿದೆ.

ಎಸ್‌ಸಿಒ – 2022 ಶೃಂಗಸಭೆ. ಎಸ್‌ಸಿಒ ಶೃಂಗಸಭೆಯನ್ನು ಎರಡು ವರ್ಷಗಳ ನಂತರ ಉಜ್ಬೇಕಿಸ್ತಾನ್ನ ರಾಜಧಾನಿ ಸಮರ್ಕಂಡ್ನಲ್ಲಿ ನಡೆಯುತ್ತಿದೆ. ಈ ಶೃಂಗಸಭೆಯು ಸೆಪ್ಟೆಂಬರ್ 15 ರಿಂದ 16 ರವರೆಗೆ ಎರಡು ದಿನಗಳ ಕಾಲ ನಡೆಯಲಿದೆ. ಎಸ್ಸಿಒ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಸಮರ್ಕಂಡ್ಗೆ ತೆರಳಿರುವ ಭಾರತದ ಪ್ರಧಾನಿ ಮೋದಿ(Narendra Modi), ನಿನ್ನೆ ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.

ಶಾಂಘೈ ಸಹಕಾರ ಸಂಘಟನೆಯನ್ನು ಜೂನ್ 2001ರಲ್ಲಿ ಶಾಂಘೈನಲ್ಲಿ ಪ್ರಾರಂಭಿಸಲಾಯಿತು. ಎಸ್ಸಿಒ ಆರು ಸ್ಥಾಪಕ ಸದಸ್ಯರನ್ನು ಒಳಗೊಂಡಂತೆ ಎಂಟು ಪೂರ್ಣಕಾಲಿಕ ಸದಸ್ಯರನ್ನು ಹೊಂದಿದೆ. ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ರಷ್ಯಾ, ತಜಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸ್ಥಾಪಕ ಸದಸ್ಯರಾಗಿದ್ದು, ಭಾರತ ಮತ್ತು ಪಾಕಿಸ್ತಾನ 2017 ರಲ್ಲಿ ಪೂರ್ಣಕಾಲಿಕ ಸದಸ್ಯರಾಗಿ ಸೇರಿಕೊಂಡಿವೆ.

Exit mobile version