ಬಾಲಿವುಡ್‌ ಹಾರರ್ ಚಿತ್ರದಲ್ಲಿ ತುಪ್ಪದ ಬೆಡಗಿ ; ಮನಬಿಚ್ಚಿ ಮಾತನಾಡಿದ ರಾಗಿಣಿ

Bengaluru : ಕನ್ನಡ ಚಿತ್ರರಂಗದಲ್ಲಿ ʼತುಪ್ಪಾ ಬೇಕು ತುಪ್ಪಾʼ ಹಾಡಿನ ಮೂಲಕ ಸಿನಿಪ್ರೇಕ್ಷಕರ ಮನಸೆಳದ ನಟಿ ರಾಗಿಣಿ ದ್ವಿವೇದಿ (Ragini Dwivedi Bollywood film) ಇದೀಗ ಬಾಲಿವುಡ್‌ ಚಿತ್ರರಂಗಕ್ಕೆ ಹಾರರ್‌ ಚಿತ್ರದ ಮುಖೇನ ಪದಾರ್ಪಣೆ ಮಾಡುತ್ತಿದ್ದಾರೆ.

ನಟಿ ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ೩೦ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ (Ragini Dwivedi Bollywood film) ಮಿಂಚಿದ್ದಾರೆ.

ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್‌ (Kicha sudeep) ಅವರಿಗೆ ಜೋಡಿಯಾಗಿ ವೀರ ಮದಕರಿ (Veera madakari) ಸಿನಿಮಾದಲ್ಲಿ ನಟಿಸಿದ ರಾಗಿಣಿ,

ಈ ಚಿತ್ರದ ಮೂಲಕ ಕನ್ನಡಿಗರಿಗೆ ಚಿರಪರಿಚಿತಗೊಂಡು, ಹೆಚ್ಚು ಖ್ಯಾತಿಯನ್ನು ಗಳಿಸಿದರು. ಆದ್ರೆ, ಇತ್ತೀಚಿನ ದಿನಗಳಲ್ಲಿ ನಟಿ ರಾಗಿಣಿ ದ್ವಿವೇದಿ ನಟನೆಯ ಯಾವ ಸಿನಿಮಾಗಳು ಅಷ್ಟಾಗಿ ಸದ್ದು ಮಾಡದಿದ್ದರೂ,

ನಟಿ ರಾಗಿಣಿ ತಮ್ಮ ಮುಂದಿನ ಚಿತ್ರಗಳಿಗೆ ಬೇಕಾದ ತಯಾರಿಕೆಗಳನ್ನು ಎಂದಿನಂತೆ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ನಟಿ ರಾಗಿಣಿ ಅವರ ಇರುವಿಕೆ ಕೊಂಚ ಕಡಿಮೆಯಾಗಿರುವ ಬಗ್ಗೆ, ಅವರ ಅಭಿಮಾನಿಗಳಲ್ಲಿ ಇಂದಿಗೂ ಒಂದು ಪ್ರಶ್ನೆಯಾಗಿಯೇ ಉಳಿದಿದೆ ಎಂದು ಹೇಳಬಹುದು.

ಸದ್ಯ ಇತ್ತೀಚಿನ ಮಾಹಿತಿಯ ಅನುಸಾರ, ನಟಿ ರಾಗಿಣಿ ಬಾಲಿವುಡ್‌ (Bollywood) ಚಿತ್ರರಂಗಕ್ಕೆ ನಾಯಕಿ ನಟಿಯಾಗಿ ಹೆಜ್ಜೆ ಇಡಲಿದ್ದಾರೆ. ಹೌದು, ಈ ಹಿಂದೆ ೨೦೧೩ ರಲ್ಲಿ ತೆರೆಕಂಡ

ಆರ್‌. ರಾಜ್‌ಕುಮಾರ್‌ (R Rajkumar) ಎಂಬ ಹಿಂದಿ ಚಿತ್ರದಲ್ಲಿ ಕದ್ದು ಕಾಟೇಗಾ (Kaddu katega) ಹಾಡಿನಲ್ಲಿ ಕುಣಿದು ಕುಪ್ಪಳಿಸಿ, ಸಿನಿಪ್ರೇಕ್ಷಕರನ್ನು ಮನರಂಜಿಸಿದ್ದರು.

ಇದೀಗ ಪೂರ್ಣಪ್ರಮಾಣದಲ್ಲಿ ನಟಿಸುತ್ತಿದ್ದು, ʼವಾಕ್ರೋ ಹೌಸ್‌ʼ(Walkrow house) ಎಂಬ ಹಾರರ್‌ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: https://vijayatimes.com/rakhi-sawant-statement/

ಆಯುರ್‌ ಶರ್ಮಾ(Ayur Sharma) ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಹಾರರ್‌-ಥ್ರಿಲರ್‌ ಚಿತ್ರ ಇದಾಗಿದ್ದು, ಈ ಸಿನಿಮಾ ಮುಖೇನ ನಟಿ ರಾಗಿಣಿ ಬಾಲಿವುಡ್‌ ಅಂಗಳಕ್ಕೆ ಡೆಬ್ಯೂ ಮಾಡಲಿದ್ದಾರೆ.

ನಟಿ ರಾಗಿಣಿ ಈಗಾಗಲೇ ಲಂಡನ್‌ಗೆ ತೆರಳಿದ್ದು (London), ಮೊದಲ ಹಂತದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ನಟಿ ರಾಗಿಣಿ, ಕನ್ನಡ ಚಿತ್ರರಂಗದಲ್ಲಿ ಉತ್ತಮ ಪಯಣ ದೊರೆತಿದೆ.

ಕಳೆದ ವರ್ಷ ನಾನು ಹಲವು ಕೆಲಸಗಳಲ್ಲಿ ಬ್ಯುಸಿಯಾಗಿದ್ದೆ! ಈ ಸಿನಿಮಾದಲ್ಲಿ ನಾನು ಲಂಡನ್‌ ಲೇಖಕಿ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಚಿತ್ರದ ಕಥೆ ಮತ್ತು ಕಥೆಗೆ ತಕ್ಕಂತೆ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಇಂದು ಎಲ್ಲಾ ಚಿತ್ರರಂಗದಲ್ಲೂ ಉತ್ತಮ ಸಿನಿಮಾಗಳು ಹೊರಹೊಮ್ಮುತ್ತಿವೆ. ಓಟಿಟಿ(OTT) ವೇದಿಕೆ ಬಂದ ನಂತರ ನಮ್ಮಂತ ಅನೇಕ ಕಲಾವಿದರಿಗೆ ಒಳ್ಳೆ ಅವಕಾಶಗಳು ದೊರೆಯುತ್ತಿವೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Exit mobile version