ರಾಷ್ಟ್ರೀಯವಾದಿಯಾಗಿದ್ದವನು ಮಾತ್ರ ನೈಜ ಮುಸ್ಲಿಮನಾಗಲು ಸಾಧ್ಯ : ರಹೀಂ ಉಚ್ಚಿಲ್!

Rahim uchil

ರಾಷ್ಟ್ರೀಯವಾದಿಯಾಗಿದ್ದವನು ನೈಜ ಮುಸ್ಲಿಮನಾಗುತ್ತಾನೆ. ತನ್ನ ನೆಲವನ್ನು ಗೌರವಿಸದವನು ಮುಸ್ಲಿಮನಾಗಲು ಸಾಧ್ಯವಿಲ್ಲ. ಪವಿತ್ರ ಕುರಾನ್‍ನಲ್ಲೇ ಹೇಳಿದಂತೆ ‘ಇಸ್ಲಾಂ ಧರ್ಮವನ್ನು ಅನುಸರಿಸುವವರು ತಾವು ವಾಸಿಸುವ ನೆಲದ ಕಾನೂನನ್ನು ಪಾಲಿಸಬೇಕು.’ ಎನ್ನುತ್ತದೆ. ಹೀಗಾಗಿರುವಾಗ ಭಾರತದಲ್ಲಿ ರಾಷ್ಟ್ರೀಯವಾದಿಯಾದವನು ಮಾತ್ರ ನೈಜ ಮುಸ್ಲಿಮನಾಗುತ್ತಾನೆ ಎಂದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್(Rahim Ucchil) ಹೇಳಿದ್ದಾರೆ.

ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ(BJP Government) ಆಡಳಿತಕ್ಕೆ ಬಂದ ನಂತರ ಮುಸ್ಲಿಮರು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾರೆ. ನಮ್ಮ ಮನೆಗಳ ಮೇಲೆ ಕಲ್ಲು ಬೀಳುತ್ತಿಲ್ಲ. ಅಲ್ಪಸಂಖ್ಯಾತರ ಅಭಿವೃದ್ದಿಗಾಗಿ ಬಿಜೆಪಿ ಸಾಕಷ್ಟು ಕೆಲಸಗಳನ್ನು ಮಾಡಿದೆ. ಆದರೆ ಅಲ್ಪಸಂಖ್ಯಾತರು ಬಿಜೆಪಿಗೆ ನಿರೀಕ್ಷಿತ ಬೆಂಬಲ ನೀಡುತ್ತಿಲ್ಲ. ಆದರೆ ನನಗೆ ಉಳ್ಳಾಳ ವಿಧಾನಸಭಾ ಕ್ಷೇತ್ರದಲ್ಲಿ ಟಿಕೇಟ್ ನೀಡಿದ್ರೆ ನನ್ನ ಸಾಮಥ್ರ್ಯವನ್ನು ಸಾಭೀತುಪಡಿಸುತ್ತೇನೆ.

ನನಗೆ ಅವಕಾಶ ನೀಡದೆ ನನ್ನ ಸಾಮಥ್ರ್ಯದ ಬಗ್ಗೆ ಮಾತನಾಡುವುದು ತರವಲ್ಲ. ಆದರೆ ನಾನು ಟಿಕೇಟ್ ನೀಡಿ ಎಂದು ಕೇಳುವುದಿಲ್ಲ. ಪಕ್ಷ ನನ್ನ ಸಾಮಥ್ರ್ಯವನ್ನು ಗುರುತಿಸಿ ಟಿಕೇಟ್ ನೀಡಿದ್ರೆ ಸ್ಪರ್ಧೆ ಮಾಡುತ್ತೇನೆ ಎಂದರು. ಇನ್ನು ನನಗೆ ಇಸ್ಲಾಂ ಮೊದಲು ನಂತರ ಬಿಜೆಪಿ ಪಕ್ಷ. ಬಿಜೆಪಿ ಪಕ್ಷದಲ್ಲಿ ಎಲ್ಲ ಜಾತಿ-ಧರ್ಮದವರು ಇದ್ದಾರೆ. ಹಾಗೆಯೇ ಎಲ್ಲ ಧರ್ಮದವರು ಎಲ್ಲ ರಾಜಕೀಯ ಪಕ್ಷಗಳಲ್ಲೂ ಇರಬೇಕು. ಹೀಗಾಗಿಯೇ ನಾನು ಬಿಜೆಪಿಯಲ್ಲಿಯೂ ಮುಸ್ಲಿಮರು ಇರಬೇಕೆಂದು ಹೇಳಿದ್ದೇನೆ. ಇನ್ನು ಹಲಾಲ್ ವಿಚಾರಕ್ಕೆ ಬರುವುದಾದರೆ ಇವತ್ತು ಸುಮಾರು ನಲವತ್ತು ಸಾವಿರ ಪದಾರ್ಥಗಳಿಗೆ ಹಲಾಲ್ ಸರ್ಟಿಫಿಕೆಟ್ ನೀಡಲಾಗುತ್ತಿದೆ.

ಇದನ್ನು ನಾನು ಖಂಡಿಸುತ್ತೇನೆ. ಹಲಾಲ್ ಹೆಸರಿನಲ್ಲಿ ಇಡೀ ದೇಶದ ಆರ್ಥಿಕ ವ್ಯವಹಾರವನ್ನು ಒಂದು ಕೋಮಿನವರಿಗೆ ಕೊಡುವುದನ್ನು ನಾನು ಖಂಡಿಸುತ್ತೇನೆ. ವ್ಯಾಪಾರ ಎನ್ನುವುದು ಎಲ್ಲರಿಗೂ ಸೇರಿದ್ದು. ಹೀಗಾಗಿಯೇ ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕುತ್ತಿರುವ ಕ್ರಮವನ್ನು ನಾನು ಒಪ್ಪುವುದಿಲ್ಲ. ಹಲಾಲ್ ಹೆಸರಿನಲ್ಲಿ ಕದ್ದು ಹಣ ಮಾಡಿದರೆ ಇಸ್ಲಾಂನಲ್ಲಿ ಅದು ‘ಹರಾಮ್’ ಆಗುತ್ತದೆ.

ಇನ್ನು ಹಿಜಾಬ್ ಮತ್ತು ಹಲಾಲ್ ಗಲಾಟೆಗಳಿಂದ ಕರ್ನಾಟಕದಲ್ಲಿ ಎರಡು ಸಮುದಾಯಗಳ ನಡುವಿನ ಸಾಮರಸ್ಯ ಹಾಳಾಗಿದೆ. ಇದಕ್ಕೆ ಇಬ್ಬರೂ ಹೊಣೆಗಾರರು. ಕೆಲವರು ಮಾಡಿದ ಕುತಂತ್ರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಉಡುಪಿಯ ಆರು ಜನ ವಿದ್ಯಾರ್ಥಿನಿಯರು ಮಾಡಿದ ತಪ್ಪಿನಿಂದ ಸಾವಿರಾರೂ ಹಿಜಾಬ್ ಧರಿಸುವ ವಿದ್ಯಾರ್ಥಿಯನಿಯರಿಗೆ ತೊಂದರೆಯಾಗಿದೆ ಎಂದರು.

Exit mobile version