EVMನಲ್ಲೇ ಅವರ ಆತ್ಮ ಅಡಗಿದೆ: EVM ಬಗ್ಗೆ ಮತ್ತೆ ತಕರಾರು ತೆಗೆದ ರಾಹುಲ್ ಗಾಂಧಿ

Mumbai: ಲೋಕಸಭಾ ಚುಣಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಇವಿಎಂ (EVM) ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮತಯಂತ್ರಗಳನ್ನು ದುರ್ಬಳಕೆ ಮಾಡಿಕೊಂಡು, ಅಧಿಕಾರದ ಸೂತ್ರ ಹಿಡಿಯಲು ಒರ್ವ ವ್ಯಕ್ತಿ ತಯಾರಿ ನಡೆಸಿದ್ದಾರೆ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮುಂಬಯಿನಲ್ಲಿ ನಡೆದ ಭಾರತ ಜೋಡೊ ಐಕ್ಯತಾ ನ್ಯಾಯ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಮತ ಯಂತ್ರಗಳನ್ನು ದುರ್ಬಳಕೆ ಮಾಡಿಕೊಳ್ಳದೇ ನರೇಂದ್ರ ಮೋದಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಜನಾಭಿಪ್ರಾಯದ ಮೇಲೆ ಯಾವ ಚುನಾವಣೆಯನ್ನೂ ಗೆಲ್ಲುವುದಿಲ್ಲ. ಮೋದಿ ಚುನಾವಣೆಗಳ ಗೆಲುವಿನ ಗುಟ್ಟು ಇವಿಎಂಗಳೇ ಎಂದು ವಾಗ್ದಾಳಿ ನಡೆಸಿದ್ದಾರೆ.

ಮತ ಯಂತ್ರಗಳ ಬಗ್ಗೆ ಜನರಲ್ಲಿ ಮೂಡಿರುವ ಅನುಮಾನಗಳ ಬಗ್ಗೆ ಚುನಾವಣಾ ಆಯೋಗದ ಬಳಿ ಉತ್ತರವೇ ಇಲ್ಲ. ವಿರೋಧ ಪಕ್ಷಗಳ ಪರಿಣತರ ಮುಂದೆ EVMಗಳನ್ನು ಪರೀಕ್ಷಿಸಲು ಚುನಾವಣಾ ಆಯೋಗ ಸಿದ್ಧವಿಲ್ಲ. ಮೋದಿ ಹಿತಾಸಕ್ತಿ ಕಾಪಾಡುವ ಸಿದ್ದತೆ ನಡೆಯುತ್ತಿದೆ. ಎಲ್ಲ ಸರ್ಕಾರ ಯಂತ್ರಗಳು ಅವರ ಪರವಾಗಿ ಕೆಲಸ ಮಾಡುತ್ತಿವೆ. ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷಗಳ ನಾಯಕರನ್ನು ಹೆದರಿಸಿ, ಬೆದರಿಸಿ ಬಿಜೆಪಿಗೆ (BJP) ಸೇರಿಸಿಕೊಳ್ಳಲಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಣ್ಣೀರಿಟ್ಟ ಮಹಾರಾಷ್ಟ್ರ (Maharashtra) ನಾಯಕ: ಕಾಂಗ್ರೆಸ್ ತೊರೆದ ಮಹಾರಾಷ್ಟ್ರದ ನಾಯಕರೊಬ್ಬರು ನನ್ನ ಅಮ್ಮನಿಗೆ ಕರೆ ಮಾಡಿ ಕಣ್ಣೀರು ಹಾಕಿದ್ದಾರೆ. ನಾನು ಕಾಂಗ್ರೆಸ್ನಲ್ಲಿ ಇದ್ದರೆ ಜೈಲು ಸೇರಬೇಕಾಗುತ್ತದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಬಿಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ರಾಹುಲ್ ಗಾಂಧಿ ತನಿಖಾ ಸಂಸ್ಥೆಗಳ ವಿರುದ್ಧ ಕಿಡಿಕಾರಿದ್ದಾರೆ.

ಪಾಕ್ನಲ್ಲಿ EVM ಇದ್ದಿದ್ದರೆ ಚುನಾವಣಾ ಅಕ್ರಮ ನಡೆಯುತ್ತಿರಲಿಲ್ಲ: ಇಮ್ರಾನ್ ಖಾನ್
ಪಾಕಿಸ್ತಾನದಲ್ಲಿ EVM ಮತಯಂತ್ರ ಬಳಕೆ ಮಾಡಿದ್ದರೆ ಯಾವುದೇ ರೀತಿಯ ಚುನಾವಣಾ ಅಕ್ರಮವೂ ನಡೆಯುತ್ತಿರಲಿಲ್ಲ ಎಂದು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪ್ರಕಾರ ಪಾಕಿಸ್ತಾನದಲ್ಲಿ (Pakistan) EVM ಮತಯಂತ್ರ ಬಳಕೆ ಕುರಿತು ಈ ಹಿನದೆಯೇ ಪ್ರಸ್ತಾಪವನ್ನು ಮಾಡಲಾಗಿತ್ತು. ಆದರೆ, ಪಾಕಿಸ್ತಾನ ಚುನಾವಣಾ ಆಯೋಗ ಹಾಗೂ ಕೆಲವು ರಾಜಕೀಯ ಪಕ್ಷಗಳು EVM ಬಳಕೆಯನ್ನು ವಿರೋಧಿಸಿದ್ದವು ವಿರೋಧಿಸಿದ್ದವು.

Exit mobile version