ಭಾರತ್ ಜೋಡೋ ಯಾತ್ರೆಯಲ್ಲಿ ‘ಮೋದಿ, ಮೋದಿ’ ಎಂದು ಕೂಗಿದವರಿಗೆ ಮುತ್ತು ಕೊಟ್ಟ ರಾಹುಲ್ ಗಾಂಧಿ

Rajasthan : ಪ್ರಸ್ತುತ ರಾಜಸ್ಥಾನದ ಮೂಲಕ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul gandhi), ಯಾತ್ರೆಯು ಮಧ್ಯಪ್ರದೇಶದ(Madhya Pradesh) ಅಂತ್ಯದಲ್ಲಿದ್ದ ವೇಳೆ ಅಲ್ಲೇ ನೆರದಿದ್ದ ಜನ ಸಮೂಹ ‘ಮೋದಿ, ಮೋದಿ’ ಎಂದು ಘೋಷಣೆಗಳನ್ನು ಕೂಗುತ್ತಿದ್ದನ್ನು ಆಲಿಸಿದ ರಾಹುಲ್ ಗಾಂಧಿ ಮುತ್ತು ನೀಡಿರುವ ದೃಶ್ಯ ಇದೀಗ ಭಾರಿ ವೈರಲ್ ಆಗಿದೆ.

ಭಾರತ್ ಜೋಡೋ ಯಾತ್ರೆಯು(Bharat jodo yatra) ಅಗರ್ ಮಾಲ್ವಾ ಜಿಲ್ಲೆಯ ಮೂಲಕ ಹಾದು ಹೋದಾಗ ಪ್ರಧಾನಿ ನರೇಂದ್ರ ಮೋದಿಯವರ(Narendra modi) ಪರ ಜೈಕಾರಗಳ ಘೋಷಣೆಗಳು ಯಾತ್ರೆಯಲ್ಲಿ ನೆರೆದಿದ್ದ ಜನ ಸಮೂಹ ಮೊಳಗಿಸಿದೆ.

ಜನ ಸಮೂಹ ಕೂಗುತ್ತಿದ್ದ ಜೈಕಾರಗಳನ್ನು ಆಲಿಸಿದ ರಾಹುಲ್ ಗಾಂಧಿ ಅವರ ಬಳಿ ಮೊದಲು ಕೈಬೀಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ. ರಾಹುಲ್ ಗಾಂಧಿ ಕೈಬೀಸಿ ಮುಂದೆ ಸಾಗಲು ಯತ್ನಿಸಿದರು ಮತ್ತೊಮ್ಮೆ ಘೋಷಣೆಗಳನ್ನು ಕೂಗಲು ಮುಂದಾದ ಸಮೂಹಕ್ಕೆ ತಮ್ಮ ಕೈ ಬಳಸಿ ಮುತ್ತನ್ನು ನೀಡುತ್ತಿರುವುದು ದೃಶ್ಯದಲ್ಲಿ ಕಂಡುಬಂದಿದೆ.

ಇದನ್ನೂ ಓದಿ : https://vijayatimes.com/case-filed-against-the-bull/

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಸೋಮವಾರ ಬೆಳಗ್ಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿದರು. ಝಾಲಾವರ್‌ನ ಝಲ್ರಾಪಟನ್‌ನಲ್ಲಿರುವ ಕಾಳಿ ತಲೈನಿಂದ ಪ್ರಾರಂಭಗೊಂಡ ಯಾತ್ರೆಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್(Ashok gehlot),

ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್(sachin pilot), ಸಚಿವರು, ಶಾಸಕರು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ರಾಹುಲ್ ಗಾಂಧಿಯೊಡನೆ ಹೆಜ್ಜೆ ಹಾಕಿದರು. ಈ ಯಾತ್ರೆಗೆ ರಾಜಸ್ಥಾನ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಕಾಂಗ್ರೆಸ್ ಸಂಸದರು ಚಂದ್ರಭಾಗ ಚೌರಾದಲ್ಲಿ ಕಾರ್ನರ್ ಮೀಟಿಂಗ್ ನಡೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸದ್ಯ ಯಾತ್ರೆಯನ್ನು ಜಾಲಾವರ್‌ನಲ್ಲಿ ರಾತ್ರಿ ತಂಗಲು ಯೋಜಿಸಲಾಗಿದೆ. ಕಾಂಗ್ರೆಸ್(Congress) ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಭಾನುವಾರ ಮಧ್ಯಪ್ರದೇಶ ಜಿಲ್ಲೆಯಿಂದ ರಾಜಸ್ಥಾನ ಪ್ರವೇಶಿಸಿದೆ.

Exit mobile version