ಡಬಲ್ ಇಂಜಿನ್ ಸರ್ಕಾರದಲ್ಲಿ ಡ್ರಗ್ ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಯಾರು? : ರಾಹುಲ್‌ ಗಾಂಧಿ

Rahul Gandhi

ಡಬಲ್ ಇಂಜಿನ್ ಸರ್ಕಾರದಲ್ಲಿ ಕುಳಿತು ಡ್ರಗ್-ಲಿಕ್ಕರ್(Drug-Liquor) ಮಾಫಿಯಾಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವವರು ಯಾರು? ಗುಜರಾತಿನ(Gujarat) ಯುವಕರನ್ನು ಮಾದಕ ವ್ಯಸನಿಗಳಾಗಿ ಮಾಡುತ್ತಿರುವುದು ಏಕೆ? ಎಂದು ಕಾಂಗ್ರೆಸ್‌ ನಾಯಕ(Congress Leader) ರಾಹುಲ್‌ ಗಾಂಧಿ(Rahul Gandhi) ಕೇಂದ್ರ ಸರ್ಕಾರವನ್ನು(Central Government) ಪ್ರಶ್ನಿಸಿದ್ದಾರೆ. ಗುಜರಾತ್‌ ರಾಜ್ಯದ ಬಂದರಿನಲ್ಲಿ ಡ್ರಗ್ಸ್‌(Drugs) ವಶಪಡಿಸಿಕೊಂಡಿರುವ ಪ್ರಕರಣದ ಕುರಿತು ಟ್ವೀಟ್‌(Tweet) ಮಾಡಿರುವ ‌ಅವರು,

ಡಬಲ್ ಇಂಜಿನ್ ಸರ್ಕಾರದಲ್ಲಿ ಕುಳಿತು ಡ್ರಗ್ – ಲಿಕ್ಕರ್ ಮಾಫಿಯಾಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಿರುವವರು ಯಾರು? ಎಂದು ಪ್ರಶ್ನಿಸುವ ಮೂಲಕ ನೇರವಾಗಿ ಗುಜರಾತ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಇನ್ನು ಒಂದೇ ಬಂದರಿನಲ್ಲಿ 3 ಬಾರಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, ಹಾಗಿದ್ದರೂ ಡ್ರಗ್ಸ್ ನಿರಂತರವಾಗಿ ಒಂದೇ ಬಂದರಿಗೆ ಹೇಗೆ ಬಂದಿಳಿಯುತ್ತಿದೆ? ಗುಜರಾತಿನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ? ಮಾಫಿಯಾಗಳಿಗೆ ಕಾನೂನಿನ ಕನಿಷ್ಠ ಭಯವಿಲ್ಲವೇ? ಅಥವಾ ಈ ಸರ್ಕಾರವೇ ಮಾಫಿಯಾಗಳ ಸರ್ಕಾರವೇ?

ಗುಜರಾತ್ನ ಮುಂದ್ರಾ ಬಂದರಿನಲ್ಲಿ ಪತ್ತೆಯಾದ ಡ್ರಗ್ಸ್ ಸೆ.21 3000kg ₹ 21000 ಕೋಟಿ, ಮೇ.22 56kg ₹ 500 ಕೋಟಿ, ಜು.22 75kg ₹ 375 ಕೋಟಿ ಎಂದು ಅಂಕಿ-ಅಂಶಗಳನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದಕ್ಕೂ ಮುನ್ನ ಅದಾನಿ ಕಂಪನಿಗೆ(Adhani Company) ಸೇರಿದ ಬಂದರಿನಲ್ಲಿ ಅಪಾರ ಪ್ರಮಾಣದ ಡ್ರಗ್ಸ್‌ ಅನ್ನು ವಶಪಡಿಸಿಕೊಳ್ಳಲಾಗಿತ್ತು. ಕೇಂದ್ರ ಸರ್ಕಾರ ಡ್ರಗ್ಸ್‌ ಮಾಫಿಯಾದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಅದಾನಿಗೆ ಸೇರಿದ ಬಂದರಿನಲ್ಲಿ ಡ್ರಗ್ಸ್‌ ಪತ್ತೆಯಾದರು ಸರ್ಕಾರ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

Exit mobile version