ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಸೋಮವಾರ, ಕರ್ನಾಟಕದಲ್ಲಿ ಬಿಜೆಪಿಯು(BJP) ಭ್ರಷ್ಟಾಚಾರ(Corruption) ಎಂದು ನೇರ ಗುರಿ ಮಾಡಿ ಆರೋಪಿಸಿದ್ದಾರೆ.
ಪೊಲೀಸ್ ನೇಮಕಾತಿ ಹಗರಣದಲ್ಲಿ(PSI Scam) ನ್ಯಾಯಯುತ ತನಿಖೆ ನಡೆಯಬೇಕಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರನ್ನು ಸಿಎಂ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

- ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಮೇಲ್ವಿಚಾರಣೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ ಎಂಬ ಪುನರಾವರ್ತಿತ ಪ್ರತಿಪಾದನೆಯ ಬಗ್ಗೆ ವಾಗ್ದಾಳಿ ನಡೆಸಿದರು.
- “ನಾ ಖಾವೂಂಗಾ, ನಾ ಖಾನೆ ಡುಂಗಾ” ಎಂದು ಹೇಳುವರು, ಬೊಮ್ಮಾಯಿ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದ್ದಾರೆ. “ಬಿಜೆಪಿಯ ನಿರ್ಲಜ್ಜ ಭ್ರಷ್ಟಾಚಾರ ಮತ್ತು ಉದ್ಯೋಗ ಮಾರಾಟ, ಕರ್ನಾಟಕದ ಸಾವಿರಾರು ಯುವಕರ ಕನಸುಗಳನ್ನು ನಾಶಪಡಿಸಿದೆ”.
- ಯಾವುದೇ ನ್ಯಾಯಯುತ ತನಿಖೆಗಾಗಿ ಆಗ ಗೃಹ ಮಂತ್ರಿಗಳಾಗಿದ್ದ ಸಿಎಂ ಅವರನ್ನು ವಜಾಗೊಳಿಸಬೇಕು” ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಹೇಳಿದ್ದಾರೆ.
“ಪ್ರಧಾನಿ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ? ಇದು ಬಿಜೆಪಿ ಸರ್ಕಾರದ ‘ಸಬ್ ಖೇಂಗೆ, ಸಬ್ಕೋ ಖಿಲಾಂಗೆ’ ಕ್ಷಣವೇ” ಎಂದಿದ್ದಾರೆ. ಕರ್ನಾಟಕದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಪ್ರತ್ಯೇಕವಾಗಿ ಉಲ್ಲೇಖಿಸಿ ತಮ್ಮ ಆರೋಪವನ್ನು ವ್ಯಕ್ತಪಡಿಸಿದ್ದಾರೆ.
ಹಗರಣದಲ್ಲಿ ಹಿರಿಯ ಐಪಿಎಸ್ ಅಧಿಕಾರಿಯನ್ನೂ ಬಂಧಿಸಲಾಗಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಂಡಿರುವ ಸಿಐಡಿಗೆ ಸರ್ಕಾರ ಮುಕ್ತ ಹಸ್ತವನ್ನು ನೀಡಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಸೋಮವಾರ ಹೇಳಿದ್ದಾರೆ.

“ಅವರು ಎಷ್ಟೇ ಪ್ರಬಲರಾಗಿದ್ದರೂ, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನಾನು ಈಗಾಗಲೇ ಹೇಳಿದ್ದೆ, ನಮ್ಮ ಸರ್ಕಾರದಿಂದಾಗಿ ಹಿರಿಯ ಅಧಿಕಾರಿಯನ್ನು ಈಗ ಬಂಧಿಸಲಾಗಿದೆ” ಎಂದು ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು. https://vijayatimes.com/siddaramaiah-slams-bjp-over-psi-scam/
ಇನ್ನು ಕರ್ನಾಟಕ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ಬೊಮ್ಮಾಯಿ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದು, "ಪಿಎಸ್‌ಐ ಹಗರಣದಲ್ಲಿ ಭ್ರಷ್ಟಾಚಾರದ ಪದರಗಳು ಬಯಲಾಗುತ್ತಿದ್ದಂತೆ, ಎರಡು ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗಿದೆ.
ಬಿಜೆಪಿಯಲ್ಲಿ ರಾಜಕೀಯ ಯಜಮಾನರ ಸಹಾಯವಿಲ್ಲದೆ ಪಿಎಸ್‌ಐ ಹಗರಣ ನಡೆಯಬಹುದೇ? ಹಗರಣದ ಸಮಯದಲ್ಲಿ ಗೃಹ ಸಚಿವರಾಗಿದ್ದವರು ಯಾರು? ಉತ್ತರ : ಬಸವರಾಜ ಬೊಮ್ಮಾಯಿ. ‘‘ಪಿಎಸ್‌ಐ ಹಗರಣದ ಹೊಣೆ ಅಂದಿನ ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು. ಉತ್ತರ ಮನೆ ಬಾಗಿಲಲ್ಲಿದೆ, ಹೆಚ್ಚೇನೂ ಇಲ್ಲ, ಎಡಿಜಿಪಿ ಬಂಧನ ಸಾಕಾಗುವುದಿಲ್ಲ.