‘ರೈತರಿಗೂ ಪ್ರತಿಭಟಿಸುವ ಹಕ್ಕಿದೆ, ಅದನ್ಯಾರು ಕಸಿದುಕೊಳ್ಳುವಂತಿಲ್ಲ’: ಸುಪ್ರಿಂ ಕೋರ್ಟ್

ನವದೆಹಲಿ, ಡಿ. 17: ಸುಪ್ರೀಂ ಕೋರ್ಟ್‌ನಲ್ಲಿ ರೈತರ ಪ್ರತಿಭಟನೆ ವಿರುದ್ಧ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೈತರ ಪ್ರತಿಭಟನೆಯನ್ನ ನಿಲ್ಲಿಸಲು ಹೇಳೋದಿಲ್ಲ. ಅದ್ಯಾರೇ ಆಗಲಿ ರೈತರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವುದೂ ಸರಿಯಲ್ಲ, ಏಕೆಂದರೆ ಸಮಾಜದಲ್ಲಿ ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ. ಆದ್ದರಿಂದ ರೈತರೂ ಪ್ರತಿಭಟಿಸಲಿ, ಅವರ ಹೋರಾಟ ಮುಂದುವರೆಯಬೇಕು. ಅಲ್ಲದೇ ಯಾವುದೇ ಕಾರಣಕ್ಕೂ ರೈತರನ್ನು ಕಣದಿಂದ ತೆರವುಗೊಳಿಸುವುದು ಸರಿಯಲ್ಲ’ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ.

ನಿನ್ನೆ ಅರ್ಜಿ ವಿಚಾರಣೆ ನಡೆಸುತ್ತಿದ್ದ ಮುಖ್ಯ ನ್ಯಾಯಾಧೀಶ ಎಸ್‌. ಎ. ಬೋಬ್ಡೆ ಅವ್ರು, ‘ರೈತರು ತಮ್ಮ ಪ್ರತಿಭಟನೆಯನ್ನ ನಡೆಸಬೋದು. ಆದ್ರೆ, ಇದರಿಂದ ಜನರ ನಿತ್ಯದ ಬದುಕಿಗೆ ಯಾವುದೇ ಸಮಸ್ಯೆಯಾಗಬಾರದು. ಇನ್ನು ನಾವು ರೈತರ ಸ್ಥಿತಿಯನ್ನ ಅರಿತಿದ್ದು, ಅವ್ರ ಬಗ್ಗೆ ನಮಗೆ ಸಹಾನುಭೂತಿ ಇದೆ. ಆದ್ರೆ, ಈ ಬದಲಾಯಿಸುವ ಪರಿಯನ್ನು ಬದಲಾಯಿಸಬೇಕಿದೆ, ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ’ ಎಂದಿದ್ದಾರೆ.

ಆದರೆ, ಇಂದು ರೈತರ ಹೋರಾಟದ ಕುರಿತು ಮಹತ್ವದ ತಿರ್ಪು ನೀಡಿರುವ ಸುಪ್ರೀಂ ಕೋರ್ಟ್‌“ ರೈತರಿಗೆ ಪ್ರತಿಭಟಿಸುವ ಹಕ್ಕಿದೆ. ಹಿಂಸಾಚಾರವಿಲ್ಲದೆ ಪ್ರತಿಭಟನೆಗಳು ಮುಂದುವರೆಯಬಹುದು, ಹೀಗಾಗಿ ಪೋಲೀಸರು ಈ ಹೋರಾಟವನ್ನು ನಿಗ್ರಹಿಸಲು ಮುಂದಾಗುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

Exit mobile version