ಪೋರ್ನ್ ಆಪ್ ಪ್ರಕರಣ ; ಬಿಡುಗಡೆ ಕೋರಿ ರಾಜ್‌ಕುಂದ್ರಾ ಅರ್ಜಿ ಸಲ್ಲಿಕೆ

Raj Kundra

ಮುಂಬೈ : ಆ್ಯಪ್ಗಳ(App) ಮೂಲಕ ಪೋರ್ನ್(Porn) ಚಿತ್ರಗಳನ್ನು ನಿರ್ಮಿಸಿ, ವಿತರಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಿಂದ ತಮ್ಮನ್ನು ಬಿಡುಗಡೆಗೊಳಿಸುವಂತೆ ಕೋರಿ ಬಾಲಿವುಡ್‌(Bollywood) ನಟಿ(Actress) ಶಿಲ್ಪಾ ಶೆಟ್ಟಿ(Shilpa Shetty) ಪತಿ ಮತ್ತು ಉದ್ಯಮಿ ರಾಜ್ ಕುಂದ್ರಾ(Raj Kundra) ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಸದ್ಯ ರಾಜ್‌ಕುಂದ್ರಾ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ವಕೀಲ ಪ್ರಶಾಂತ್ ಪಾಟೀಲ್ ಅವರು ಜುಲೈ 20 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ರಾಜ್ ಕುಂದ್ರಾ ಅವರು ಆಪಾದಿತ ಅಪರಾಧದಿಂದ ಯಾವುದೇ ಹಣ ಅಥವಾ ಇತರ ರೀತಿಯ ಲಾಭವನ್ನು ಗಳಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಪೊಲೀಸರಿಗೆ ಕಂಡುಬಂದಿಲ್ಲ ಮತ್ತು ಪ್ರಾಸಿಕ್ಯೂಷನ್ ಅವರು ಅಪರಾಧ ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದಿದೆ.

ಇದನ್ನೂ ಓದಿ : https://vijayatimes.com/bilkis-bano-case-supremecourt/

ಹೀಗಾಗಿ ಈ ಪ್ರಕರಣದಿಂದ ಅವರನ್ನು ಕೈಬಿಡಬೇಕೆಂದು ಮನವಿ ಮಾಡಿದ್ದಾರೆ. ಆದರೆ ಸೆಪ್ಟೆಂಬರ್ 8 ರಂದು ಇದಕ್ಕೆ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಪ್ರಾಸಿಕ್ಯೂಷನ್ಗೆ ತಿಳಿಸಿದೆ. ಮಹಿಳೆಯೊಬ್ಬರು ಮುಂಬೈ ಪೊಲೀಸರನ್ನು ಸಂಪರ್ಕಿಸಿ ಕೆಲವು ಆರೋಪಗಳನ್ನು ಮಾಡಿದ ನಂತರ ರಾಜ್ ಕುಂದ್ರಾ ಮತ್ತು ಇತರರ ವಿರುದ್ಧ ಎಫ್ಐಆರ್(FIR) ದಾಖಲಿಸಲಾಗಿತ್ತು.

ನಂತರ ಈ ಪ್ರಕರಣವನ್ನು ಮುಂಬೈ ಕ್ರೈಂ ಬ್ರಾಂಚ್ಗೆ(Mumbai Crime Branch) ವರ್ಗಾಯಿಸಲಾಗಿತ್ತು. ರಾಜ್ ಕುಂದ್ರಾ ವಿರುದ್ಧ ಭಾರತೀಯ ದಂಡ ಸಂಹಿತೆ 420 (ವಂಚನೆ), 292 (ಅಶ್ಲೀಲ ಮತ್ತು ಅಸಭ್ಯ ಜಾಹೀರಾತುಗಳು ಮತ್ತು ಪ್ರದರ್ಶನಗಳಿಗೆ ಸಂಬಂಧಿಸಿದೆ) ಮತ್ತು 293 (ಮಾಹಿತಿ ತಂತ್ರಜ್ಞಾನ ಕಾಯಿದೆ ಮತ್ತು ಮಹಿಳೆಯರ ಅಸಭ್ಯ ಪ್ರಾತಿನಿಧ್ಯ ನಿಷೇಧ ಕಾಯ್ದೆಯ) ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Exit mobile version