ಕಲಾಪಗಳನ್ನು ರೆಕಾರ್ಡ್‌ ಮಾಡಿದ ಹಿನ್ನೆಲೆ ಕಾಂಗ್ರೆಸ್‌ ಸಂಸದೆ ರಜನಿ ಪಾಟೀಲ್ ಅಮಾನತು

New delhi : ಸದನದಲ್ಲಿ ಹಾಜರಿದ್ದು, ನಡೆಯುತ್ತಿದ್ದ ಕಲಾಪಗಳನ್ನು ರೆಕಾರ್ಡ್‌ ಮಾಡಿದ ಹಿನ್ನೆಲೆ ಕಾಂಗ್ರೆಸ್‌ನ(Congress) ಸಂಸದೆ ರಜನಿ ಪಾಟೀಲ್(Rajani Patil) ಅವರನ್ನು ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ!

ಸದನದ ಕಲಾಪಗಳನ್ನು ದಾಖಲಿಸಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಅಶೋಕರಾವ್ ಪಾಟೀಲ್ ಅವರನ್ನು ಶುಕ್ರವಾರ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದ್ದು, ರಾಜ್ಯಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಜಗದೀಪ್ ಧಂಖರ್(Jagadeep Dankhar) ಅವರು ಶುಕ್ರವಾರ ಸದನದಲ್ಲಿದ್ದು, ಸದನದಲ್ಲಿ ನಡೆಯುತ್ತಿದ್ದ ಕಲಾಪಗಳ ದೃಶ್ಯಾವಳಿಗಳನ್ನು ಹರಿಬಿಟ್ಟ ಕಾರಣ, ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರನ್ನು ಬಜೆಟ್ ಅಧಿವೇಶನದ ಉಳಿದ ಭಾಗಕ್ಕೆ ಅಮಾನತುಗೊಳಿಸಿದ್ದಾರೆ!

ಸದನದ ಒಳಾಂಗಣದಿಂದ ಅವರು ವೀಡಿಯೊವನ್ನು ಟ್ವೀಟ್(Tweet) ಮಾಡಿದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ, ರಾಜ್ಯಸಭೆಯ ಅಧ್ಯಕ್ಷ ಜಗದೀಪ್ ಧಂಖರ್ ಅವರು ಈ ವಿಷಯದ ಬಗ್ಗೆ ಗಂಭೀರ ದೃಷ್ಟಿಕೋನ ಎಂದು ವ್ಯಕ್ತಪಡಿಸಿದ್ದಾರೆ ಮತ್ತು ಇದು ಅವರ ಕಡೆಯಿಂದ ಅಹಿತಕಾರಿ ಚಟುವಟಿಕೆ ಎಂದು ನೇರವಾಗಿ ಹೇಳಿದ್ದಾರೆ. ನಿನ್ನೆ ಸಾರ್ವಜನಿಕ ವಲಯದಲ್ಲಿ, ಟ್ವಿಟರ್‌ನಲ್ಲಿ, ಈ ಸದನದ ಕಲಾಪಕ್ಕೆ ಸಂಬಂಧಿಸಿದ ವೀಡಿಯೊವನ್ನು ಪ್ರಸಾರ ಮಾಡಲಾಗಿತ್ತು. ರಜನಿ ಅಶೋಕರಾವ್ ಪಾಟೀಲ್ ಅವರು ಈ ಅಹಿತಕರ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬುದು ನಮಗೆ ಸ್ಪಷ್ಟವಾದ ಬಳಿಕ ನಾವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜಗದೀಪ್ ಧನಖರ್‌ ಅವರು ಹೇಳಿದ್ದಾರೆ.

ವಿಶೇಷಾಧಿಕಾರ ಸಮಿತಿಯು ಈ ಬಗ್ಗೆ ತನಿಖೆ ನಡೆಸಲಿದೆ ಮತ್ತು ಸಮಿತಿಯು ತನ್ನ ವರದಿಯನ್ನು ಸಲ್ಲಿಸುವವರೆಗೆ ರಜನಿ ಅಶೋಕರಾವ್ ಪಾಟೀಲ್ ಅವರನ್ನು ಅಮಾನತುಗೊಳಿಸಲಾಗುವುದು ಎಂದು ಧನಖರ್ ಹೇಳಿದರು, ಸಂಸತ್ತಿನ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ವಿಷಯವನ್ನು ಯಾವುದೇ ಹೊರಗಿನ ಏಜೆನ್ಸಿಗೆ ಹಸ್ತಾಂತರಿಸುವುದಿಲ್ಲ ಎಂದು ಹೇಳಿದ್ದಾರೆ.ಇಡೀ ವಿಷಯವನ್ನು ವಿಶೇಷಾಧಿಕಾರ ಸಮಿತಿಯಿಂದ ತನಿಖೆ ನಡೆಸಲಾಗುವುದು ಮತ್ತು ಈ ಆಗಸ್ಟ್‌ನಲ್ಲಿ ಸದನದಲ್ಲಿ ಪರಿಗಣನೆಗೆ ವಿಶೇಷಾಧಿಕಾರ ಸಮಿತಿಯ ಶಿಫಾರಸಿನ ಪ್ರಯೋಜನವನ್ನು ನಾವು ಪಡೆಯುವವರೆಗೆ, ಕಾಂಗ್ರೆಸ್‌ ಸಂಸದೆ ರಜನಿ ಅಶೋಕರಾವ್ ಪಾಟೀಲ್ ಅವರನ್ನು ಪ್ರಸ್ತುತ ಅಧಿವೇಶನಕ್ಕೆ ಅಮಾನತುಗೊಳಿಸಲಾಗಿದೆ ಎಂದು ಜಗದೀಪ್ ಧನಖರ್‌ ಅವರು ಒತ್ತಿ ಹೇಳಿದ್ದಾರೆ. ಸದ್ಯ ಈ ಒಂದು ವಿಷಯ ಮುನ್ನೆಲೆಗೆ ಬರುತ್ತಿದ್ದಂತೆ, ತೀವ್ರ ಚರ್ಚೆಗೆ ಗ್ರಾಸವಾಗಿದೆ, ರಾಜಕೀಯ ವಲಯದಲ್ಲಿ ಆರೋಪ-ಪ್ರತ್ಯಾರೋಪಗಳು ಭುಗಿಲೆದ್ದಿವೆ.

Exit mobile version