ಸೇನಾ ಪಡೆಗಳಲ್ಲೂ ಧಾರ್ಮಿಕ ಗಣತಿಗೆ ಕಾಂಗ್ರೆಸ್ ಯತ್ನಿಸಿತ್ತು: ರಕ್ಷಣಾ ಸಚಿವ ರಾಜನಾಥ್ ಸಿಂಗ್

Vishakapattanam (Andrapradesh): ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದ ಅವಧಿಯಲ್ಲಿ ದೇಶದ ಸೇನಾ ಪಡೆಗಳಲ್ಲಿ ಕೂಡ ಧಾರ್ಮಿಕ ಜಾತಿ ಗಣತಿಗೆ ಕಾಂಗ್ರೆಸ್ನಿಂದ (Congress) ಯತ್ನ ನಡೆದಿತ್ತು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಹೊಸ ಬಾಂಬ್ ಸಿಡಿಸಿದ್ದಾರೆ.

ವಿಶಾಖಪಟ್ಟಣಂನಲ್ಲಿ (Vishakapattanam) ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಯುಪಿಎ ಆಡಳಿತಾವಧಿಯಲ್ಲಿ ಸಾಚಾರ್ ಸಮಿತಿ ಮೂಲಕ, ಸೇನಾ ಪಡೆಗಳಲ್ಲೂ ಧರ್ಮ ಆಧಾರಿತ ಜಾತಿ ಗಣತಿ ನಡೆಸಲು ಕಾಂಗ್ರೆಸ್ ಪಕ್ಷ ಮುಂದಾಗಿತ್ತು. ಇದು ಪರೋಕ್ಷವಾಗಿ ದೇಶವನ್ನು ಒಡೆಯುವ ದುಷ್ಕೃತ್ಯದ ಯೋಜನೆಯಾಗಿತ್ತು. 2006ರಲ್ಲಿಯೇ ಈ ಕೃತ್ಯಕ್ಕೆ ಯುಪಿಎ ಸರಕಾರ ತೆರೆಮರೆಯಲ್ಲಿ ಸಂಚು ನಡೆಸಿತ್ತು ಎಂದು ಆರೋಪಿಸಿದ್ದಾರೆ.

ಇನ್ನು ಈ ಬಾರಿಯ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕೂಡ ಕಾಂಗ್ರೆಸ್ (Congress) ಅಲ್ಪಸಂಖ್ಯಾತರ ಮೀಸಲು ಬಗ್ಗೆ ಉಲ್ಲೇಖಿಸಿದೆ. ಮುಂದಿನ ದಿನಗಳಲ್ಲಿ ಇದೇ ಯೋಜನೆ ದೇಶದ ಸೇನಾ ಪಡೆಗಳಿಗೂ ವಿಸ್ತರಣೆಗೊಂಡರೆ ಅಚ್ಚರಿಪಡಬೇಕಿಲ್ಲ. ಇಂತ ಯೋಜನೆಗಳು ದೇಶದ ಏಕತೆ ಮತ್ತು ಸಮಗ್ರತೆಗೆ ಮಾರಕವಾಗಿವೆ.

ಯುಪಿಎ (UPA) ಆಡಳಿತದ ಅವಧಿಯಲ್ಲಿ ಸಾಚಾರ್ ಕಮಿಷನ್ ವರದಿ ಹಾಗೂ ರಂಗನಾಥ್ ಮಿಶ್ರಾ ಕಮಿಷನ್ ರಚಿಸುವ ಮೂಲಕ ಅಲ್ಪಸಂಖ್ಯಾತರ ಅದರಲ್ಲೂ ಮುಸ್ಲಿಂಮರ (Muslim) ಕಲ್ಯಾಣದ ನೆಪವೊಡ್ಡಿ ನಿರ್ದಿಷ್ಟ ಧರ್ಮದವರ ಓಲೈಕೆಗೆ ಕಾಂಗ್ರೆಸ್ ಪಕ್ಷ ಮುಂದಾಗಿತ್ತು ಎಂದು ಸಿಂಗ್ ಗುಡುಗಿದ್ದಾರೆ.

ಧರ್ಮ ಆಧಾರಿತ ಮೀಸಲಾತಿ ವಿಷಯವನ್ನು ಚುನಾವಣಾ ಪ್ರಕ್ರಿಯೆಗೆ ನುಸುಳಿಸಲು ಕಾಂಗ್ರೆಸ್ ಪಕ್ಷ ಹುನ್ನಾರ ನಡೆಸಿದೆ. ಈ ಮೂಲಕ ಹಿಂದೂ ಸಮಾಜವನ್ನು ಒಡೆಯುವುದು ಕಾಂಗ್ರೆಸ್ನ ಚುನಾವಣಾ ತಂತ್ರ. ಅಲ್ಪಸಂಖ್ಯಾತರ ಓಲೈಕೆಯು ಕಾಂಗ್ರೆಸ್ ಪಕ್ಷದ ಡಿಎನ್ಎ (DNA)ನಲ್ಲಿದೆ. ಕಳೆದ 75 ವರ್ಷಗಳಿಂದಲೂ ಕಾಂಗ್ರೆಸ್ ಇದನ್ನೇ ಮಾಡುತ್ತಾ ಬಂದಿದೆ. ಕೇವಲ ಒಂದು ಧರ್ಮದ ಜನರಿಗೆ ನಿರಂತರವಾಗಿ ಬೆಂಬಲ ನೀಡುತ್ತಾ, ಹಿಂದೂ ಸಮಾಜವನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಈ ಕುತಂತ್ರಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

Exit mobile version