ನನ್ನ ಸಿಡಿ ಹಿಂದಿದ್ದ ಆ `ಮಹಾನಾಯಕನೇ’ ಸಂತೋಷ್ ಆತ್ಮಹತ್ಯೆಯ ಹಿಂದಿದ್ದಾನೆ : ರಮೇಶ್ ಜಾರಕಿಹೊಳಿ!

ramesh jarkiholi

ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತರಾಗಿದ್ದ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಇಂದು ರಾಜ್ಯದ ಪ್ರಮುಖ ಚರ್ಚೆಯಾಗಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಹೇರಿದ 40% ಕಮಿಷನ್ ಎಂದು ಹೇಳಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಸೇರಿದಂತೆ ನಾಯಕರು ಇಂದು ಸಚಿವ ಸ್ಥಾನದಿಂದ ಈಶ್ವರಪ್ಪ ರಾಜೀನಾಮೆಯನ್ನು ನೀಡಬೇಕು ಎಂದು ಆಗ್ರಹಿಸಿ ಕಛೇರಿ ಮುಂದೆ ಧರಣಿ ನಡೆಸಲಾಯಿತು.

ಈ ಪ್ರಕರಣ ಕುರಿತು ಪೊಲೀಸರು ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಸಂತೋಷ್ ಪಾಟೀಲ್ ಸಹೋದರ ಮತ್ತು ಕುಟುಂಬದವರು ಸಚಿವ ಸ್ಥಾನದಿಂದ ಮಾತ್ರ ಈಶ್ವರಪ್ಪನನ್ನು ಇಳಿಸಿ ಸುಮ್ಮನಾದರೆ ನಾವು ಸಹಿಸೊದಿಲ್ಲ, ಆತನನ್ನು ಜೈಲಿನಲ್ಲಿರಿಸಿ ಶಿಕ್ಷೆ ವಿಧಿಸಬೇಕು ಎಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಮೃತ ಸಂತೋಷ್ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದೆ, ಸಂತೋಷ್ ಅವರು ನನ್ನ ಹಳೆಯ ಕಾರ್ಯಕರ್ತ.

ನನ್ನ ಸಿಡಿ ಮಾಡಿ ಬಿಡುಗಡೆ ಮಾಡಿದ `ಮಹಾನಾಯಕ’ನ ತಂಡ ಸಂತೋಷ್ ಕೇಸಿನಲ್ಲೂ ಇದ್ದಾನೆ ಎಂದು ಪರೋಕ್ಷವಾಗಿ ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ. ಈ ಕುರಿತು ಸೋಮವಾರ 11 ಗಂಟೆ ಸಮಯಕ್ಕೆ ಸರಿಯಾಗಿ ನಾನು ಸುದ್ದಿಗೋಷ್ಠಿ ಮಾಡುತ್ತೇನೆ. ಆ ಸಮಯಕ್ಕೆ ಸರಿಯಾಗಿ ನಾನು ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

Exit mobile version