Madhya Pradesh: ಉಜ್ಜಯಿನಿಯಲ್ಲಿ ನಡೆದ ಬಾಲಕಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು (rape case in madhya pradesh) ಆರೋಪಿಗಳನ್ನು ಪತ್ತೆ
ಮಾಡಿದ್ದಾರೆ. ಈ ಕಾರ್ಯಚರಣೆ ಕುರಿತು ಅಧಿಕಾರಿಗಳು ಹಂಚಿಕೊಂಡಿದ್ದು, ಆಟೋ ಚಾಲಕ ಭರತ್ ಸೋನಿಯ (Bharth Sony) ತಂದೆ ರಾಜು ಸೋನಿ (Raju Sony) ಅವರು ಈ ಘಟನೆ
ಬಗ್ಗೆ ತುಂಬಾ (rape case in madhya pradesh) ನೋವು ವ್ಯಕ್ತಪಡಿಸಿದ್ದಾರೆ.
ಆತನ ತಂದೆ ಗಲ್ಲುಶಿಕ್ಷೆ ನೀಡುವಂತೆ ಹೇಳಿದ್ದಾರೆ. ಒಂದು ವೇಳೆ ಆತನಿಗೆ ಮರಣದಂಡನೆ ನೀಡದಿದ್ದರೆ, ನಾನೇ ಅವನನ್ನು ಕೊಲ್ಲುವೆ ಎಂದು ಹೇಳಿದ್ದಾರೆ. ಮಧ್ಯಪ್ರದೇಶದ (Madhya Pradesh)
ಉಜ್ಜಯಿನಿಯಲ್ಲಿ ನಡೆದ ಮನಕಲಕುವ ಘಟನೆ ಇಡೀ ದೇಶವನ್ನೇ ಅಘಾತಗೊಳಿಸಿತ್ತು. ಅತ್ಯಾಚಾರವಾದ ಸ್ಥಿತಿಯಲ್ಲಿ ರಸ್ತೆಯಲ್ಲೆಲ್ಲ ಅಲೆದಾಡಿ ಸಹಾಯಕ್ಕಾಗಿ ಅಂಗಲಾಚಿದರು, ಯಾರು ಕೂಡ ಸಹಾಯ
ಮಾಡದೆ, ಮಾನವಕುಲಕ್ಕೆ ಅವಮಾನ ಎಂಬಂತೆ ಎಲ್ಲರೂ ನೋಡಿದ್ರೆ ಹೊರತು, ಆ ಬಾಲಕಿಯ ಸಹಾಯಕ್ಕೆ ಯಾರು ಮುಂದಾಗಲಿಲ್ಲ.
ಆ ಹುಡುಗಿಗೆ ತಾನು ಯಾವ ಸ್ಥಿತಿಯಲ್ಲಿದ್ದೇನೆ ಎಂಬ ಅರಿವು ಇರಲಿಲ್ಲ. ಆದರೆ ಆ ಬಾಲಕಿಯ ಸಹಾಯಕ್ಕೆ ಬಂದದ್ದು ಚರ್ಚಿನ ಒಬ್ಬ ಫಾದರ್ (Father) . ಆಗ ಫಾದರ್ ಪೊಲೀಸರಿಗೆ ಮಾಹಿತಿ ನೀಡುವ
ಮೂಲಕ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿಂದ ಆ ಬಾಲಕಿಯ ಜವಾಬ್ದಾರಿಯನ್ನು ಆ ಪೊಲೀಸರೇ ವಹಿಸಿಕೊಂಡಿದ್ದಾರೆ.
ಈ ನೀಚ ಕೃತ್ಯ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದ್ದು, ಆದರೆ ಈ ಪ್ರಕರಣವನ್ನು ಭೇದಿಸಬೇಕಾದರೆ ಪೊಲೀಸರು ತುಂಬಾ ಶ್ರಮಪಟ್ಟಿದ್ದಾರೆ. ಹೌದು ಈ ಬಗ್ಗೆ ಪೊಲೀಸ್ ಅಧಿಕಾರಿಗಳು
ಮಾಧ್ಯಗಳಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜ್ಜಯಿಸಿ ಪೊಲೀಸರು ನೂರಾರು ಕಡೆ ವಿಚಾರಣೆಯನ್ನು ನಡೆಸಿದ್ದಾರೆ. ಅಲ್ಲಿದ್ದ ಜನರನ್ನು ತನಿಖೆ ಕೂಡ ಮಾಡಿದ್ದಾರೆ.
ಘಟನೆ ನಡೆದ ಸ್ಥಳವನ್ನು ಮತ್ತು ಬಾಲಕಿ ಓಡಾಡಿದ ಪ್ರದೇಶಗಳಲ್ಲಿದ್ದ 700ಕ್ಕೂ ಹೆಚ್ಚು ಸಿಸಿಟಿವಿಗಳನ್ನು (CCTV) ಪರಿಶೀಲನೆ ಮಾಡಲಾಗಿದ್ದು, ತನಿಖಾ ವರದಿಯ ಪ್ರಕಾರ ಬಾಲಕಿಯನ್ನು ಈ ಆಟೋ
ಚಾಲಕ ಉಜ್ಜಯಿನಿನ ರೈಲು ನಿಲ್ದಾಣದಿಂದ ಕರೆದೊಯ್ದು ಅತ್ಯಾಚಾರವೆಸಗಿ, ಅರೆಬೆತ್ತಲೆ ಮಾಡಿ, ರಕ್ತ ಸ್ರಾವವಾಗಿಸಿ ಬಿಟ್ಟದ್ದಾನೆ ಎಂದು ಹೇಳಲಾಗಿದೆ.
ಈ ಘಟನೆ ನಡೆದ ದಿನದಿಂದ ಪೊಲೀಸ್ ಇಲಾಖೆಯ 30-35 ಅಧಿಕಾರಿಗಳು ಸೈಬರ್ (Cyber) ತನಿಖೆಯಲ್ಲಿ ತೊಡಗಿಕೊಂಡಿದ್ದು, ಈ ಆರೋಪಿಗಳನ್ನು ಪತ್ತೆ ಮಾಡುವವರೆಗೆ ನಿದ್ದೆ ಮಾಡಿಲ್ಲ ಎಂದು
ಹೇಳಿದ್ದಾರೆ. ಆರೋಪಿಯನ್ನು ಪತ್ತೆ ಮಾಡಿದಾಗ ಆತ ಅಲ್ಲಿಂದ ಓಡಿ ಹೋಗಲು ಮುಂದಾಗಿದ್ದಾನೆ. ಅದರೂ ಪೊಲೀಸರು ಆತನನ್ನು ಬೆನ್ನಟ್ಟಿ ಸೆರೆಹಿಡಿದ್ದಾರೆ.
ಆರೋಪಿಯನ್ನು ಭರತ್ ಸೋನಿ (Bharat Sony) ಎಂದು ಗುರುತಿಸಲಾಗಿದ್ದು,ಇನ್ನು ಈ ಘಟನೆಯಿಂದ ಆಟೋ ಚಾಲಕ ಭರತ್ ಸೋನಿ ತಂದೆ ರಾಜು ಸೋನಿ ತುಂಬಾ ನೋವು ವ್ಯಕ್ತಪಡಿಸಿದ್ದಾರೆ
ಆತನಿಗೆ ಗಲ್ಲುಶಿಕ್ಷೆ ನೀಡುವಂತೆ ಹೇಳಿದ್ದಾರೆ. ಒಂದು ವೇಳೆ ಆತನಿಗೆ ಮರಣದಂಡನೆ ನೀಡದಿದ್ದರೆ, ನಾನೇ ಅವನನ್ನು ಕೊಲ್ಲುವೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ಈ ಕೃತ್ಯಕ್ಕೆ ಸಹಾಯ ಮಾಡಿದ ಮತ್ತೊಬ್ಬ ಆಟೋಚಾಲಕ ರಾಕೇಶ್ ಮಾಳವಿಯಾ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಘಟನೆಯ ದಿನದಂದು
ಅನೇಕರ ಮನೆ ಬಾಗಿಲ ಮುಂದೆ ಹೋಗಿ ನನಗೆ ಸಹಾಯ ಮಾಡಿ ಎಂದು ಆ ಬಾಲಕಿ ಕೇಳಿಕೊಂಡಾಗ ಸಹ ಯಾರೂ ಸಹಾಯ ಮಾಡಿಲ್ಲ. ಅಂಥವರ ಮೇಲೆಯು ದೂರು ದಾಖಲಿಸಿಕೊಳ್ಳಲಾಗುವುದು
ಎಂದು ಹೇಳಿದ್ದಾರೆ.
ಇದನ್ನು ಓದಿ: ಬೆಂಗಳೂರಿನ ಮೊದಲ ಶತ್ರು ಬಿಬಿಎಂಪಿ ಎಂದು ಪಾಲಿಕೆ ವಿರುದ್ಧ ತೀವ್ರ ಅಸಮಾಧಾನ: ಕರ್ನಾಟಕ ಹೈಕೋರ್ಟ್
- ಭವ್ಯಶ್ರೀ ಆರ್.ಜೆ