ಬಾಡಿಗಾರ್ಡ್ಸ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಭೇಟಿ ಕೊಟ್ಟ ರತನ್ ಟಾಟಾ ; ನೆಟ್ಟಿಗರಿಂದ `ಸರಳತೆ ನಮಸ್ಕಾರ’!

Rathan

ನವದೆಹಲಿ: ರತನ್ ಟಾಟಾ(Ratan Tata) ಅವರು ಭಾರತದ ಅತ್ಯಂತ ಪ್ರಸಿದ್ಧ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು. ಅವರ ಕೀರಿಟದ ಮೇಲಿರುವ ಅನೇಕ ಗರಿಗಳ ಪೈಕಿ ಟಾಟಾ ನ್ಯಾನೋ(Tata Nano) ಕಾರು, 1 ಲಕ್ಷ ರೂಪಾಯಿ ಬೆಲೆಯ ಕಾರಾಗಿತ್ತು.

ಮತ್ತು ಅನೇಕ ಭಾರತೀಯರು ತಮ್ಮ ಸ್ವಂತ ಕಾರು ಹೊಂದುವ ಕನಸನ್ನು ನನಸಾಗಿಸಲು ಈ ಕಾರು ಅವಕಾಶ ಮಾಡಿಕೊಟ್ಟಿತು. ಇದೀಗ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾದ ರತನ್ ಟಾಟಾ ಅವರು ನ್ಯಾನೋದಲ್ಲಿ ಮುಂಬೈನ ಹೋಟೆಲ್‌ಗೆ ಆಗಮಿಸುವ ಮೂಲಕ ಸಾಮಾಜಿಕ ಜಾಲತಾಣ ಸೇರಿದಂತೆ ಸಾಕಷ್ಟು ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದಿದ್ದಾರೆ. ನ್ಯಾನೊ ಕಾರಿನಲ್ಲಿ ರತನ್ ಟಾಟಾ ಅವರು ತಾಜ್ ಹೋಟೆಲ್‌ಗೆ ಆಗಮಿಸಿದ್ದಾರೆ.

ಯಾವ ಬಾಡಿಗಾರ್ಡ್ಸ್ ಅನ್ನು ಕರೆದುಕೊಳ್ಳದೆ ಒಬ್ಬರೇ ಸರಳವಾಗಿ ಆಗಮಿಸಿದ್ದಾರೆ. ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ರತನ್ ಟಾಟಾ ಅವರು ಸರಳತೆಗೆ ಹಿಡಿದ ಕನ್ನಡಿಯಿದ್ದಂತೆ ಎಂದು ಹಲವರು ತಮ್ಮ ಅಭಿಪ್ರಾಯಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವಾರು ಜನರು ರತನ್ ಟಾಟಾ ಅವರ ಬಗ್ಗೆ ಗೌರವ ಮತ್ತು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಾವು ರತನ್ ಟಾಟಾ ಅವರಿಂದ ಕಲಿಯಬೇಕಾದದ್ದು ತುಂಬ ವಿಷಯವಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಸುರಿಮಳೆಯೇ ತುಂಬಿದೆ. ಕೆಲವು ದಿನಗಳ ಹಿಂದೆ, ರತನ್ ಟಾಟಾ ಅವರಿಗೆ ಟಾಟಾ ನ್ಯಾನೋ ಎಂದರೆ ಏನು ಎಂಬುದರ ಕುರಿತು ಟಿಪ್ಪಣಿ ಬರೆದಿದ್ದರು. ಸದ್ಯ ರತನ್ ಟಾಟಾ ಅವರ ಸರಳತೆಗೆ ನೆಟ್ಟಿಗರು ಮನಸೋತಿದ್ದು, ಮುಂದಿನ ದಿನಗಳಲ್ಲಿ ನಾವು ಅವರಂತೆಯೇ ಸರಳವಾಗಿ, ಆದರ್ಶವಾಗಿ ಬದುಕಬೇಕು ಎಂದು ಕಮೆಂಟ್ ನಲ್ಲಿ ತಿಳಿಸಿದ್ದಾರೆ.

Exit mobile version