ಕರ್ನಾಟಕದಲ್ಲಿ ಹಣದ ನೋಟು ಮುದ್ರಣಾಲಯ ಹೊಂದಿರುವ ಏಕೈಕ ನಗರ ‘ನಮ್ಮ ಮೈಸೂರು’

MYSURU

ಭಾರತದಲ್ಲಿ ಪ್ರಮುಖವಾಗಿ ನಾಲ್ಕು ನೋಟು ಮುದ್ರಣ ಕೇಂದ್ರಗಳಿವೆ. ಕರ್ನಾಟಕ(Karnataka), ಪಶ್ಚಿಮ ಬಂಗಾಳ(West Bengal), ಮಹಾರಾಷ್ಟ್ರ(Maharashtra) ಹಾಗೂ ಮಧ್ಯಪ್ರದೇಶದಲ್ಲಿ(MadhyaPradesh) ನೋಟು ಮುದ್ರಣ ಕೇಂದ್ರಗಳಿವೆ. ಪ್ರತಿ ಕೇಂದ್ರದಲ್ಲಿ ಎಷ್ಟು ಹಣ ಮುದ್ರಣಗೊಳ್ಳಬೇಕು ಎಂಬುದನ್ನು ಆರ್ಬಿಐ(RBI) ನಿರ್ಧಾರ ಮಾಡುತ್ತದೆ. ಮಧ್ಯಪ್ರದೇಶದಲ್ಲಿರುವ ಹೊಶಂಗಾಬಾದ್ ಹಾಗೂ ಮೈಸೂರಿನಲ್ಲಿರುವ ಮಿಲ್ಗಳಿಂದ ನೋಟು ಮುದ್ರಣಕ್ಕೆ ಪೇಪರ್ ಪೂರೈಕೆ ಮಾಡಲಾಗುತ್ತದೆ.

ಹೊಶಂಗಾಬಾದ್ ಮಿಲ್ 1967 ರಲ್ಲಿ ಸ್ಥಾಪನೆಗೊಂಡರೆ, ಮೈಸೂರಿನಲ್ಲಿ(Mysuru) 2015 ರಲ್ಲಿ ಸ್ಥಾಪನೆಗೊಂಡಿದೆ. ನೋಟು ಮುದ್ರಣ ಮಾಡುವ ಪೇಪರ್ನಲ್ಲಿ ಮೂರು ರೀತಿಯ ವಾಟರ್ ಮಾರ್ಕ್ ಇರುತ್ತದೆ. ಅದಕ್ಕೆ ಮೈಕ್ರೋ ಲೆಟರ್, ಭದ್ರತಾ ಎಳೆಗಳನ್ನು ಇಲ್ಲಿಯೇ ಸೇರ್ಪಡೆ ಮಾಡಲಾಗುತ್ತದೆ. ಭದ್ರತಾ ಅಂಶಗಳನ್ನು ಸೇರ್ಪಡೆ ಮಾಡಿದ ನಂತರ ಪೇಪರ್ ಮುದ್ರಣ ಕೇಂದ್ರಗಳಿಗೆ ರವಾನೆ ಮಾಡಲಾಗುತ್ತದೆ. ಅಲ್ಲಿ ನೋಟಿಗೆ ಬಣ್ಣ, ಹೆಚ್ಚಿನ ಭದ್ರತಾ ಅಂಶಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಒಂದು ಪೇಪರ್ನಲ್ಲಿ 2,000 ರೂ. ನೋಟುಗಳ 40 ಪ್ರತಿಗಳು ಮುದ್ರಣಗೊಳ್ಳುತ್ತವೆ.

ಅವನ್ನು ಸೂಕ್ಷ್ಮವಾಗಿ ಕತ್ತರಿಸಿ ಪ್ಯಾಕ್ ಮಾಡಲಾಗುತ್ತದೆ. ನಂತರ ಸ್ಥಳೀಯ ಆರ್ಬಿಐ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಎಟಿಎಂಗೆ ರವಾನೆ ಮಾಡಲಾಗುತ್ತದೆ. ಮೈಸೂರಿನಲ್ಲಿರುವ ನೋಟು ಮುದ್ರಣಾಲಯ ಅಧಿಕ ಭದ್ರತೆಯ ವಲಯವಾಗಿದ್ದು, ಇಲ್ಲಿಗೆ ಪ್ರತ್ಯೇಕವಾದ ರೈಲು ಹಳಿ ವ್ಯವಸ್ಥೆ ಹಾಗೂ ನೀರು ಸರಬರಾಜು ವ್ಯವಸ್ಥೆಯಿದೆ. ಎರಡು ದಶಕದಷ್ಟು ಹಳೆಯ ಈ ಮುದ್ರಣಾಲಯ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ನೋಟು ಮುದ್ರಣಾಲಯಗಳಲ್ಲೊಂದು.

Exit mobile version