ಪಟಿದರ್ ಅಬ್ಬರಕ್ಕೆ ತತ್ತರಿಸಿದ ಕೆ.ಎಲ್ ರಾಹುಲ್ ಪಡೆ ; ಕ್ವಾಲಿಫೈರ್ 2ಗೆ ಪ್ರವೇಶಿಸಿದ RCB!

RCB

ಟಾಟಾ ಐಪಿಎಲ್ 2022 : ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers IPL) ಕೋಲ್ಕತ್ತಾದ(Kolkata) ಈಡನ್ ಗಾರ್ಡನ್ಸ್‌ನಲ್ಲಿ(Eden Gardens) ಲಕ್ನೋ ಸೂಪರ್ ಜೈಂಟ್ಸ್(Luknow Super Giants) ತಂಡವನ್ನು 14 ರನ್‌ಗಳಿಂದ ಸೋಲಿಸಿ, ರಾಜಸ್ಥಾನ ರಾಯಲ್ಸ್(Rajasthan Royals) ವಿರುದ್ಧ ಕ್ವಾಲಿಫೈಯರ್ 2ಗೆ ಪ್ರವೇಶಿಸಿದೆ.

ಕ್ವಾಲಿಫೈಯರ್ 1 ರಲ್ಲಿ ರಾಯಲ್ಸ್ ವಿರುದ್ಧ ಜಯಗಳಿಸಿ ಫೈನಲ್‌ಗೆ ಪ್ರವೇಶಿಸಿದ ಗುಜರಾತ್ ಟೈಟಾನ್ಸ್(Gujarat Titans) ವಿರುದ್ಧ ಟ್ರೋಫಿ ಹಣಾಹಣಿಯಲ್ಲಿ ಸ್ಥಾನಕ್ಕಾಗಿ ಆರ್‌ಸಿಬಿ ಶುಕ್ರವಾರ ಸಂಜು ಸ್ಯಾಮಸನ್(Sanju Samson) ನೇತೃತ್ವದ RR ತಂಡದ ವಿರುದ್ಧ ಸೆಣಸಾಡಲಿದೆ. 208 ರನ್ ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಓವರ್‌ನಲ್ಲಿ ಕ್ವಿಂಟನ್ ಡಿ ಕಾಕ್(Qwinton D Cock) ಅವರನ್ನು ಆರಂಭದಲ್ಲೇ ಕಳೆದುಕೊಂಡಿತು.

ಆದ್ರೆ, ನಾಯಕ ಕೆ.ಎಲ್ ರಾಹುಲ್(KL Rahul) (58 ಎಸೆತಗಳಲ್ಲಿ 79) ಮತ್ತು ದೀಪಕ್ ಹೂಡಾ (26 ಎಸೆತಗಳಲ್ಲಿ 45) ರನ್ ನೀಡುವ ಮೂಲಕ ತಂಡಕ್ಕೆ ಕೊಡುಗೆ ನೀಡಿದರು. ಆದ್ರೆ 15 ನೇ ಓವರ್‌ನಲ್ಲಿ ಹೂಡಾ ಅವರ ವಿಕೆಟ್ ಪತನದ ಬೆನ್ನಲ್ಲೇ ಬೆಂಗಳೂರು ತಂಡಕ್ಕೆ ಮತ್ತಷ್ಟು ಭರವಸೆ ಹೆಚ್ಚಿತು ಮತ್ತು ಲಕ್ನೋ ಯಾವುದೇ ಭರವಸೆ ಮೂಡಿಸದೇ 19 ನೇ ಓವರ್‌ನಲ್ಲಿ ನಾಯಕ ಕೆಎಲ್ ರಾಹುಲ್ ಮತ್ತು ಕೃನಾಲ್ ಪಾಂಡ್ಯ ಜೋಶ್ ಹ್ಯಾಜಲ್‌ವುಡ್ ಅವರ ಬೋಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದರು.

ಕೊನೆಯ ಓವರ್ ನಲ್ಲಿ ಪಂದ್ಯ ನಿರ್ಣಾಯಕವಾಗಿತ್ತು, ಆದ್ರೆ ಲಕ್ನೋ ತಂಡಕ್ಕೆ ಆಸರೆಯಾಗಲು ಮುಖ್ಯ ಬ್ಯಾಟ್ಸ್‌ಮನ್‌ ಯಾರೂ ಕ್ರೀಸ್ ನಲ್ಲಿ ಇರಲಿಲ್ಲ. ಕಡೆಯ ಓವರ್ನಲ್ಲಿ ಆರ್ಸಿಬಿ(RCB) ತಂಡ ಪಂದ್ಯವನ್ನು ಭರ್ಜರಿ ಸಂಭ್ರಮದಿಂದ ಗೆಲ್ಲುವ ಮುಖೇನ ಶುಕ್ರವಾರದ ಕ್ವಾಲಿಫೈರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸೆಣಸಾಡಲು ಮುಂಗಡವಾಗಿ ಸಜ್ಜಾಗಿದೆ. ಒಟ್ಟಾರೆ ಈ ಪಂದ್ಯ ಗೆದ್ದದ್ದು ಆರ್ಸಿಬಿ ಅಭಿಮಾನಿಗಳಿಗೆ ಹಬ್ಬದೂಟ ತಿಂದಷ್ಟೇ ಖುಷಿಯಾಗಿದೆ.

Exit mobile version