RCB ನೂತನ ಕ್ಯಾಪ್ಟನ್ ಆಗಿ ಫಾಫ್ ಡು ಪ್ಲೆಸಿಸ್!

rcb

ಟಾಟಾ ಐಪಿಎಲ್ 2022(TATA IPL 2022) 15ನೇ ಆವೃತ್ತಿ(Season) ಪ್ರಾರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಈ ಬಾರಿಯ ಐಪಿಎಲ್ ನ ಪಂದ್ಯಗಳು ಭಾರತದಲ್ಲೇ ನಡೆಯಲ್ಲಿದ್ದು, ಕ್ರಿಕೆಟ್(Cricket) ಅಭಿಮಾನಿಗಳಿಗೆ ಮನರಂಜನೆಯ ಮಹಾಪೂರವೇ ಹರಿದು ಬರಲಿದೆ. ಸದ್ಯ ಐಪಿಎಲ್ ತಂಡಗಳಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ನಾಯಕನ ಕೊರೆತೆ ಕಾಣುತ್ತಿತ್ತು.

ಈ ಗೊಂದಲಕ್ಕೆ ಈಗ ತೆರೆ ಎಳೆದಾಗಿದೆ. ಹೌದು, ಮಾರ್ಚ್ 26 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನ(Indian Premiere League) ಮುಂಬರುವ ಸೀಸನ್‌ಗೆ ಫಾಫ್ ಡು ಪ್ಲೆಸಿಸ್(Faf Duplessis) ಅವರನ್ನು ಕ್ಯಾಪ್ಟನ್ ಆಗಿ ನೇಮಿಸಿದೆ. ಈ ವಿಷಯವನ್ನು ಫ್ರಾಂಚೈಸಿ ಇಂದು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತು. 2022ರ ಐಪಿಎಲ್ ಹರಾಜಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ಆರ್‌ಸಿಬಿ 7 ಕೋಟಿ ರೂಪಾಯಿಗೆ ಖರೀದಿಸಿತು.

ಕಳೆದ ಸೀಸನ್ ವರೆಗೂ ಡು ಪ್ಲೆಸಿಸ್ ಸಿಎಸ್‌ಕೆ ಪರ ಆಕರ್ಷಕ ಆಲ್ ರೌಂಡರ್ ಆಗಿ ಪ್ರದರ್ಶನ ನೀಡುತ್ತಿದ್ದರು. ಇದುವರೆಗೆ ಐಪಿಎಲ್‌ನಲ್ಲಿ ಅದ್ಬುತ ಆಟಗಾರರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಐಪಿಎಲ್ 2021ರ ಸೀಸನ್ ನಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡುವ ಮೂಲಕ CSK ಜಯಭೇರಿಗೆ ಸಾಕ್ಷಿಯಾದರು. ನಾಯಕನಾಗಿ ಡು ಪ್ಲೆಸಿಸ್ ಅವರು ಬೆಂಗಳೂರು ತಂಡವನ್ನು ಮುನ್ನಡೆಸುವ ಶಕ್ತಿ ಅವರಿಗಿದೆ ಎಂಬುದನ್ನು ಗಮನಿಸಿ, ಅವರನ್ನು ಅಧಿಕೃತವಾಗಿ ಆರ್.ಸಿ.ಬಿ ತಂಡದ ಕ್ಯಾಪ್ಟನ್ ಆಗಿ ಘೋಷಣೆ ಮಾಡಿದೆ ಆರ್ ಸಿಬಿ ಫ್ರಾಂಚೈಸಿ.

Exit mobile version