ಮಣಿಪುರ ಕ್ರೌರ್ಯಕ್ಕೆ ಕಾರಣ ಏನು? : ಸುಳ್ಳನ್ನು ನಂಬಿ ಪ್ರತೀಕಾರ ತೆಗೆದುಕೊಳ್ಳಲು ಹೋಗಿ ದುಷ್ಕೃತ್ಯ…. ಇಲ್ಲಿದೆ ಅಸಲಿ ಕಾರಣ..

Imphal : ಮಣಿಪುರದಲ್ಲಿ (Manipur) ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ನಡುವೆ ಇಬ್ಬರು ಕುಕಿ (Reason for Manipur Atrocity) ಸಮುದಾಯದ ಮಹಿಳೆಯರನ್ನು

ನಗ್ನವಾಗಿ ಪರೇಡ್‌ ಮಾಡಿದ ಘಟನೆಗೆ ದೇಶಾದ್ಯಂತ ದಿಗ್ಭ್ರಮೆ ಹಾಗೂ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದೆ. ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕಳೆದ ಕೆಲ ತಿಂಗಳುಗಳಿಂದ ಹಲವು

ಅಮಾಯಕ ಜೀವಗಳು ಬಲಿಯಾಗಿದೆ. ಇಡೀ ರಾಜ್ಯವನ್ನೇ ಕುಕಿ ಹಾಗೂ ಮೇಟಿ(Meti) ಸಮುದಾಯದ ನಡುವಿನ ಹೋರಾಟ ಸುಡುತ್ತಿದೆ. ಈ ಎಲ್ಲಾ ಘಟನೆಗಳ ಬೆನ್ನಲ್ಲೇ ಇದೀಗ ಇಬ್ಬರು ಕುಕಿ

ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿದ ಅಮಾನವೀಯ ಘಟನೆ ಭಾರತವನ್ನೇ ತಲೆ ತಗ್ಗಿಸುವಂತೆ (Reason for Manipur Atrocity) ಮಾಡಿದೆ.

ಮಣಿಪುರ ರಾಜ್ಯದಲ್ಲಿ ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ (Video) ಇಡೀ ದೇಶದಲ್ಲಿ ವೈರಲ್ (Viral) ಆದ ಎರಡು ದಿನಗಳ ನಂತರ ಪ್ರಮುಖ ಆರೋಪಿಗಳಲ್ಲಿ

ಒಬ್ಬನಾದ ಹ್ಯುರೆಮ್ ಹೆರೋದಾಸ್ ಮೈತೇಯಿ(Hyrum Herodas Maithei) ಎಂಬಾತನ ಮನೆಗೆ ಗುರುವಾರ(Thursday) ಬೆಂಕಿ ಹಚ್ಚಲಾಯಿತು.ಈ ವೀಡಿಯೊದಲ್ಲಿ, ಪ್ರತಿಭಟನಾಕಾರರ ಗುಂಪಿನಲ್ಲಿ

ಹೆಚ್ಚಾಗಿ ಮಹಿಳೆಯರು ಆರೋಪಿಯ ಮನೆಗೆ ಬೆಂಕಿ ಹಚ್ಚಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಬಾಂಬ್ ದಾಳಿಗೆ ಪ್ಲ್ಯಾನ್‌ : ಐವರು ಶಂಕಿತ ಭಯೋತ್ಪಾದಕರು ಅರೆಸ್ಟ್‌ !

ಮಣಿಪುರದ ಕಾಂಗ್‌ಪೊಕ್ಪಿ(Kongpokpi) ಜಿಲ್ಲೆಯಲ್ಲಿ ಮೇ 4 ರಂದು ನಡೆದ ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಇದು ದೇಶಾದ್ಯಂತ

ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ವೀಡಿಯೊದಲ್ಲಿ, ಕುಕಿ-ಜೋ ಸಮುದಾಯಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ, ಲೈಂಗಿಕ ಕಿರುಕುಳ ನೀಡುತ್ತಾ ಮೆರವಣಿಗೆ ಮಾಡಿಕೊಂಡು

ಮೈದಾನವೊಂದಕ್ಕೆ ಕರೆದುಕೊಂಡು ಹೋಗಿದ್ದು ವಿಡಿಯೋದಲ್ಲಿ ಬಹಿರಂಗವಾಗಿದೆ . ನಂತರ 21 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.

ಈ ವಿಕೃತ ಘಟನೆಗೆ ಕಾರಣ ಏನು? ಫೇಕ್ ನ್ಯೂಸ್ ಕಾರಣ ಎಂದ ಪೊಲೀಸರು

ಮೇ 3 ರಂದು ಮಣಿಪುರದಲ್ಲಿ ಫೋಟೋವೊಂದು(Photo) ವೈರಲ್‌ ಆಗಿತ್ತು. ಕುಕಿ ಸಮುದಾಯದ ಪುರುಷನೊಬ್ಬ ಚುರಚಂದ್‌ಪುರ್‌ದಲ್ಲಿ ಮೈತೇಯಿ ಸಮುದಾಯದ ಮಹಿಳೆಯನ್ನು ಅತ್ಯಾಚಾರ

ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಪ್ಲಾಸ್ಟಿಕ್‌ ಚೀಲದಲ್ಲಿ ಆಕೆಯ ದೇಹವನ್ನು ಹಾಕಿದ್ದಾನೆ ಎಂದು ವಿವರಿಸುವ ಫೋಟೋವೊಂದು ವೈರಲ್‌ ಆಗಿತ್ತು. ಮೈತೇಯಿ ಸಮುದಾಯದ ಜನರನ್ನು

ಇದು ಭಾರೀ ಆಕ್ರೋಶಕ್ಕೆ ತಳ್ಳಿತ್ತು.

ಮೈತೇಯಿ ಸಮುದಾಯದ ಜನರು ಇದರಿಂದ ಉದ್ತಿಕ್ತಗೊಂಡು ಕುಕಿ ಸಮುದಾಯದ ಹಳ್ಳಿಗಳ ಮೇಲೆ ಮಾರನೇ ದಿನ ದಾಳಿ ಮಾಡಿ ಮಹಿಳೆಯರನ್ನು ನಗ್ನ ಪರೇಡ್‌ ಮಾಡಿ ಸಾಮೂಹಿಕ

ಅತ್ಯಾಚಾರ ಎಸಗಿದ್ದರು. ಆ ನಂತರ ಘಟನೆಗೆ ಕಾರಣವಾದ ಆ ಫೋಟೋ ನಕಲಿ ಎಂದು ಪತ್ತೆಯಾಗಿತ್ತು.

ಘಟನೆಯ ಹಿನ್ನೆಲೆ

ಆಧುನಿಕ ಶಸ್ತ್ರಗಳೊಂದಿಗೆ ಬಿ. ಫೈನಮ್ ಗ್ರಾಮಕ್ಕೆ 800- 1000ದಷ್ಟಿದ್ದ ಜನರು ನುಗ್ಗಿದ್ದರು. ಅಲ್ಲಿ ಮನೆಗಳಿಗೆ ಬೆಂಕಿ ಹಚ್ಚಿ, ಆಸ್ತಿ ಪಾಸ್ತಿಗಳನ್ನು ಧ್ವಂಸಗೊಳಿಸಿ ದಾಂಧಲೆ ನಡೆಸಿ, ಲೂಟಿ ಮಾಡಿದ್ದರು.

ಮೈತೇಯಿ ಸಮುದಾಯಕ್ಕೆ ಈ ದುಷ್ಕರ್ಮಿಗಳು ಸೇರಿದವರು. ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಈ ದಾಳಿ ವೇಳೆ ಒಟ್ಟು ಐದು ಮಂದಿ ಸಮೀಪದ ಕಾಡಿಗೆ ಪರಾರಿಯಾಗಿ ಬಚ್ಚಿಟ್ಟುಕೊಂಡಿದ್ದರು.

ಇದನ್ನೂ ಓದಿ : 2 ತಿಂಗಳಲ್ಲಿ ರಾಜ್ಯದಲ್ಲಿ 42 ರೈತರ ಆತ್ಮಹತ್ಯೆ: ಜೀವ ಹಿಂಡುತ್ತಿದೆ ಸಾಲ ಬಾಧೆ !

ನಂತರ ನಾಂಗ್‌ಪೊಕ್ ಸೆಕ್ಮೈ ಪೊಲೀಸ್ ತಂಡವು ಆ 5 ಜನರನ್ನು ರಕ್ಷಿಸಿ ಠಾಣೆಗೆ ಕರೆದೊಯ್ಯುವ ವೇಳೆ ಆ ಗುಂಪು ಮತ್ತೆ ಅವರ ಮೇಲೆ ದಾಳಿ ನಡೆಸಿ ಅವರನ್ನು ಅಪಹರಿಸಿತ್ತು. ಅವರಲ್ಲಿ ಒಬ್ಬ ವ್ಯಕ್ತಿಯನ್ನು

ಈ ಕ್ರೂರಿಗಳು ಕೂಡಲೇ ಕೊಂದು ಹಾಕಿದ್ದರು. ನಂತರ ಬಲವಂತವಾಗಿ ಮೂವರೂ ಮಹಿಳೆಯರನ್ನು ವಿವಸ್ತ್ರಗೊಳಿಸಲಾಗಿತ್ತು. ನಂತರ ಸಾಮೂಹಿಕವಾಗಿ 21 ವರ್ಷದ ಒಬ್ಬ ಮಹಿಳೆಯನ್ನು

ಅತ್ಯಾಚಾರ ಮಾಡಲಾಗಿತ್ತು. ಅದನ್ನು ತಡೆಯಲು ಬಂದ ಆಕೆಯ 19 ವರ್ಷದ ಸಹೋದರನನ್ನು ಬರ್ಬರವಾಗಿ ಕೊಂದು ಹಾಕಲಾಗಿತ್ತು.

ರಶ್ಮಿತಾ ಅನೀಶ್

Exit mobile version