ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಲು ಪ್ರಮುಖ ಕಾರಣವೇನು? ಇಲ್ಲಿದೆ ಉತ್ತರ!

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿದ್ದು, ಹಿಂದೆಂದೂ ಕೇಳದ ರೀತಿ ಕಂಡರಿಯದ ಪರಿಣಾಮ ಎದುರಿಸಬೇಕಾಗುತ್ತಾ, ಹೊರ ರಾಷ್ಟ್ರಗಳು ಎಂಬ ಪ್ರಶ್ನೆಗಳು ಉದ್ಬವಗೊಂಡಿವೆ. ಹಾಗಾದ್ರೆ ಉಕ್ರೇನ್ ಮೇಲೆ ರಷ್ಯಾ ದ್ವೇಷ ಸಾಧಿಸಲು ಕಾರಣವಾದರು ಏನು? ಉಕ್ರೇನ್ ನ ಪ್ರದೇಶಗಳಿಗಾಗಿ ರಷ್ಯಾ ಯುದ್ಧ ಸಾರಿದ್ದಾದ್ರೂ ಯಾಕೆ? 2021ರಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ರೆಮ್ಲಿನ್ ವೆಬ್ಸೈಟ್ ಗಾಗಿ ಬರೆದಂತಹ ಲೇಖನಿಯಲ್ಲಿ ರಷ್ಯಾ- ಉಕ್ರೇನ್ ನಿಂದ ಬಯಸುವುದೇನೆಂದು ವಿವರಿಸಿದ್ದರು. ರಷ್ಯನ್ನರು ಮತ್ತು ಯುಕ್ರೇನಿಯನ್ನರು ಒಂದೇ ರಾಷ್ಟ್ರವಾಗಬೇಕು ಎಂಬುದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉದ್ದೇಶವಾಗಿದೆ.

ರಷ್ಯಾ-ಉಕ್ರೇನ್ ಯುದ್ಧಕ್ಕಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಬೆಳಿಗ್ಗೆ ಪೂರ್ವ ಉಕ್ರೇನ್ ನಲ್ಲಿ ಪ್ರತ್ಯೇಕವಾದಿ ನಿಯಂತ್ರಿತ ಪ್ರದೇಶಗಳಿಗೆ ತೆರಳಲು ರಷ್ಯಾದ ವಿಶೇಷ ಪಡೆಗಳಿಗೆ ಆದೇಶವನ್ನು ನೀಡಿದ್ದರು. ರಷ್ಯಾದ ಆಕ್ರಮಣದ ವಿರುದ್ಧ ಉಕ್ರೇನ್ ಗೆ “ರಕ್ಷಣಾತ್ಮಕ” ಶಾಸ್ತ್ರಾಸ್ತ್ರಗಳನ್ನ ಪೂರೈಸುವುದನ್ನು ಮುಂದುವರಿಸುವುದಾಗಿ ಯುನೈಟೆಡ್ ಸ್ಟೇಟ್ಸ್ ಹೇಳಿತ್ತು. ರಷ್ಯಾ ಕೂಡ ಯುಕ್ರೇನಿಯಸ್ ಸೈನಿಕರನ್ನ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಲು ಕರೆ ನೀಡಿತು. ಆದರೇ ಉಕ್ರೇನ್ ಪೂರ್ವದಲ್ಲಿ “ಜನಾಂಗೀಯ ಹತ್ಯೆ”ಯನ್ನ ಪ್ರತಿಪಾದಿಸುವ ಮೂಲಕ ಆಕ್ರಮಣವನ್ನ ಸಮರ್ಥಿಸಿತು. ಆದರೆ ಉಕ್ರೇನ್ ಗೆ ಸಹಾಯ ಮಾಡಲು ಮುಂದಾಗುವ ರಾಷ್ಟ್ರಗಳಿಗೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಡವು ನೀಡಿದ್ದರು ಎನ್ನಲಾಗುತ್ತಿದೆ.

ಉಕ್ರೇನ್ ವಿರುದ್ಧ ರಷ್ಯಾದ ಯುದ್ಧ ಘೋಷಣೆ ನಡುವೆಯೇ ಬಾಂಬ್ ದಾಳಿ ಶುರುವಾಗಿದ್ದು, ರಷ್ಯಾ ಇದೀಗ ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನ ಪ್ರಾರಂಭಿಸಿದೆ. ಉಕ್ರೇನ್ ನಗರಗಳನ್ನ ರಷ್ಯಾ ಪಡೆಗಳು ಆವರಿಸಿಕೊಂಡಿವೆ ಎನ್ನಲಾಗುತ್ತಿದೆ.
ಉಕ್ರೇನ್ ನ ರಾಜಧಾನಿ ಕೀವ್ ಸೇರಿದಂತೆ ಹಲವು ನಗರಗಳಲ್ಲಿ ಭಾರಿ ಸ್ಪೋಟಕವಾಗಿದೆ. ಉಕ್ರೇನ್ ಮೇಲೆ ರಷ್ಯ ತನ್ನ ದಾಳಿಯನ್ನ ತೀವ್ರಗೊಳಿಸಿದ ರಷ್ಯಾ ಅಂತರರಾಷ್ಟ್ರೀಯ ನಿಯಮವನ್ನ‌ ಉಲ್ಲಂಘಿಸಿದೆ ಎಂದು ನ್ಯಾಟೋದ ಪ್ರಾದೇಶಿಕ ಕಾರ್ಯದರ್ಶಿ ಜೆನ್ಸ್ ಸ್ಟೋಲನ್ ಬರ್ಗ್ ಹೇಳಿಕೆ ನೀಡಿದ್ದಾರೆ.

Exit mobile version