India : ಭಾರತದಲ್ಲಿ ಚೀನಾ ಮೂಲದ ಪ್ರಸಿದ್ಧ ಶವೋಮಿ ಕಂಪನಿ ಕೆಲ ತಿಂಗಳ ಹಿಂದೆ ರೆಡ್ಮಿ 12 (Record breaking Redmi 12) ಸರಣಿಯ ಸ್ಮಾರ್ಟ್ಫೋನನ್ನು ಅನಾವರಣ ಮಾಡಿತ್ತು.
ಇದರಲ್ಲಿ ರೆಡ್ಮಿ12 4G ಮತ್ತು ರೆಡ್ಮಿ 12 5G ಎಂಬ ಎರಡು ಫೋನ್ ಇದೆ. ಇದೀಗ ಈ ಫೋನಿನ ಬಗ್ಗೆ ಶವೋಮಿ (Xiaomi) ಮಹತ್ವದ ವಿಚಾರ ಬಹಿರಂಗಪಡಿಸಿದ್ದು, ರೆಡ್ಮಿ 12 ಸರಣಿಯು ಭಾರತದಲ್ಲಿ
ಕೇವಲ 100 ದಿನಗಳಲ್ಲಿ ಬರೋಬ್ಬರಿ 3 ಮಿಲಿಯನ್ ಯುನಿಟ್‌ಗಳನ್ನು (Record breaking Redmi 12) ಮಾರಾಟ ಮಾಡಿದೆ ಎಂದು ಕಂಪನಿ ತಿಳಿಸಿದೆ.
ರೆಡ್ಮಿ 12 ಸರಣಿ 100 ದಿನಗಳಲ್ಲಿ 3 ಮಿಲಿಯನ್ ಯುನಿಟ್ (3 million units) ಮಾರಾಟವಾದ ಬಗ್ಗೆ ಸ್ವತಃ ಶವೋಮಿ ಕಂಪನಿ ತನ್ನ ಅಧಿಕೃತ X (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದೆ. ತನ್ನ ಗ್ರಾಹಕರಿಗೆ
ಧನ್ಯವಾದ ಸಲ್ಲಿಸಿದೆ. ಈ ಫೋನಿನ ಮಾರಾಟವಾದ ಮೊದಲ ದಿನ ಮೂರು ಲಕ್ಷ ಮಾರಾಟ ಕಂಡಿದ್ದು, ಬಳಿಕ 28 ದಿನಗಳಲ್ಲಿ ಹತ್ತು ಲಕ್ಷ ಯುನಿಟ್ (unit) ಮಾರಾಟ ಆಗಿತ್ತು. ಇದೀಗ 100 ದಿನಗಳಲ್ಲಿ 3
ಮಿಲಿಯನ್ಯು ನಿಟ್‌ಗೆ ತಲುಪಿದೆ. ಬಿಡುಗಡೆಯ ಸಮಯದಲ್ಲಿ, ರೆಡ್ಮಿ 12 5G ಸ್ನಾಪ್‌ಡ್ರಾಗನ್ 4 Gen 2 5G (Redmi 12 5G Snapdragon 4 Gen 2 5G) ಪ್ರೊಸೆಸರ್‌ನೊಂದಿಗೆ ಬಂದ ಭಾರತದ ಮೊದಲ
ಸ್ಮಾರ್ಟ್‌ಫೋನ್ ಆಗಿತ್ತು. ಈ ಫೋನಿಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.
ಬೆಲೆ ಮತ್ತು ಲಭ್ಯತೆ:
ನೀವು Mi.com, ಫ್ಲಿಪ್ಕಾರ್ಟ್, Mi Home, Mi Studio ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಈ ಫೋನನ್ನು ಪಡೆದುಕೊಳ್ಳಬಹುದಾಗಿದ್ದು, ರೆಡ್ಮಿ 124G 4GB+128GB ರೂಪಾಂತರಕ್ಕೆ ರೂ 8,999 ಮತ್ತು
6GB+ 128GB ರೂಪಾಂತರಕ್ಕೆ ರೂ 10,499 ಆಗಿದೆ. 5G ಅನುಭವವನ್ನು ಬಯಸುವವರಿಗೆ, ರೆಡ್ಮಿ 12 5G ಫೋನ್ ಖರೀದಿಸಬಹುದು.
ಫೀಚರ್ಸ್:
ಇದು ಪ್ರೀಮಿಯಂ ಲುಕ್ ಮತ್ತು ಅನುಭವವನ್ನು ನೀಡುತ್ತದೆ. ಮೇಲ್ಭಾಗದಲ್ಲಿ, ಕ್ಯಾಮೆರಾ ಲೆನ್ಸ್‌ಗಳನ್ನು (Camera lens) ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್ ಇದೆ. ರೆಡ್ಮಿ 12 4G ಗ್ಲಾಸ್ ಬ್ಯಾಕ್
ಪ್ಯಾನೆಲ್‌ನೊಂದಿಗೆ ಬರುತ್ತದೆ. ಈ ಫೋನ್ MIUI 14 (ಆಂಡ್ರಾಯ್ಡ್ 13 ಆಧಾರಿತ) ನಿಂದ ಚಾಲಿತವಾಗಿದೆ ಮತ್ತು MIUI ಡಯಲರ್‌ನೊಂದಿಗೆ ಬರುತ್ತದೆ. ಮೀಡಿಯಾಟೆಕ್ ಹಿಲಿಯೊ G88
(MediaTek Helio G88) ಪ್ರೊಸೆಸರ್‌ನಿಂದ ಚಾಲಿತವಾಗಿದೆ.
90Hz ರಿಫ್ರೆಶ್ ದರದೊಂದಿಗೆ 6.79-ಇಂಚಿನ FHD+ ಡಿಸ್ ಪ್ಲೇ ಇದೆ. ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. 5,000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 18W ವೇಗದ ಚಾರ್ಜಿಂಗ್ ಅನ್ನು
ಬೆಂಬಲಿಸುತ್ತದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, (Megapixel primary camera) 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು
ಹೊಂದಿದೆ. ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಆಗಿದೆ.
ಇದನ್ನು ಓದಿ: ಕಾಂಗ್ರೆಸ್ ಸರ್ಕಾರ ರಾಜಸ್ಥಾನದಲ್ಲಿ ಭಯೋತ್ಪಾದಕರ ಬಗ್ಗೆ ಸಹಾನುಭೂತಿ ಹೊಂದಿದೆ: ನರೇಂದ್ರ ಮೋದಿ
- ಭವ್ಯಶ್ರೀ ಆರ್ ಜೆ