ಆರ್‌ಸಿಬಿ ತಂಡ ಸೇರಿದ ಇಂಗ್ಲೆಂಡ್‌ ಸ್ಟಾರ್‌ ಬೌಲರ್‌!

Kochi: ಇಂಡಿಯನ್ ಪ್ರೀಮಿಯರ್ ಲೀಗ್(IPL) ಮಿನಿ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬೌಲರ್ ಆದ ರೀಸ್‌ ಟೋಪ್ಲಿ(Reece Topley) ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು(reecetopley selected to rcb) ತಂಡದ ಪಾಲಾಗಿದ್ದಾರೆ. ಎಡಗೈ ವೇಗದ ಬೌಲರ್ ಎಂದೇ ಪ್ರಸಿದ್ಧಿಯಾಗಿರುವ ಇಂಗ್ಲೆಂಡ್ ತಂಡದ ಆಟಗಾರ. ಇವರು ಆರ್‌ಸಿಬಿ ತಂಡಕ್ಕೆ ಆಯ್ಕೆಯಾದ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಥ್ಯಾಂಕ್ಯೂ ಆರ್‌ಸಿಬಿ ಎಂದು ಪೋಸ್ಟ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು(reecetopley selected to rcb) ಮೊದಲು ರೂಪಾಯಿ 75 ಲಕ್ಷಕ್ಕೆ ಬಿಡ್ಡಿಂಗ್‌ ತೆರೆಯಿತು ಆದರೆ ಬಿಡ್ಡಿಂಗ್‌ ಗೆ ಪ್ರವೇಶಿಸಿದ ಆರ್‌ಸಿಬಿ ತಂಡ ಅವರನ್ನು ಅಂತಿಮವಾಗಿ 1.90 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಅವರು ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ನಲ್ಲಿ ಎಂದಿಗೂ ಭಾಗವಹಿಸಿಲ್ಲ ಹಾಗೂ ಐಪಿಎಲ್ 2023 ಆರ್‌ಸಿಬಿ ಯೊಂದಿಗೆ ಅವರ ಮೊದಲ ಐಪಿಎಲ್ ಪಂದ್ಯ ಆಗಿದೆ.

http://ಇದನ್ನೂ ನೋಡಿ:https://fb.watch/hBjkvHQhFF/

ರೀಸ್‌ ಟೋಪ್ಲಿ ಅವರ ಹಿನ್ನೆಲೆ

2018ರಲ್ಲಿ ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ(Australia) ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ಇವರು 10 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಪಡೆದಿದ್ದರು ,2016ರಲ್ಲಿ ತಂಡದಿಂದ ಹೊರ ಬಿದ್ದರು ಆದರೆ ಐರ್ಲೆಂಡ್ ವಿರುದ್ಧದ ಪಂದ್ಯದ ಮೂಲಕ 2012ರಲ್ಲಿ ಮತ್ತೆ ಕಮ್‌ಬ್ಯಾಕ್‌  ಮಾಡಿ ಉತ್ತಮ ಪ್ರದರ್ಶನ ನೀಡಿದ್ದರು.

https://vijayatimes.com/tajmahal-received-tax-notice/

ಟಿ20(T20) ಸರಣಿಯಲ್ಲಿ ಭಾರತೀಯ ಬ್ಯಾಟರ್‌ಗಳಿಗೆ ಕೊನೆ ಪಂದ್ಯದಲ್ಲಿ ಪ್ರದರ್ಶನ ತೋರಿದ ಇವರು 2022 ರಲ್ಲಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಎಡಗೈವೇಗಿ ಆದ ಇವರು 9.5 ಓವರ್ ಗಳಲ್ಲಿ 24 ರನ್‌ ನೀಡಿ ಆರು ವಿಕೆಟ್‌ಗಳನ್ನು ಪಡೆದು ನೂರು ರನ್ನುಗಳ ಮೂಲಕ ಟೀಮ್ ಇಂಡಿಯಾ(Team India) ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು ಹಾಗೂ ಇಂಗ್ಲೆಂಡ್ ಪರ ಇದ್ದ 17 ವರ್ಷದ ಹಳೆಯ ದಾಖಲೆಯೊಂದನ್ನು ಮುರಿದಿದ್ದರು

Exit mobile version