Lucknow : ಉತ್ತರ ಪ್ರದೇಶ ಸೇರಿದಂತೆ ದೇಶದ ಅನೇಕ ಕಡೆ ಧಾರ್ಮಿಕ ಮತಾಂತರ ದಂಧೆ ನಡೆಸುತ್ತಿದ್ದ ಆರೋಪಿಯೊಬ್ಬನ ಮೊಬೈಲ್ ಫೋನ್ಗಳಲ್ಲಿ 30 ಪಾಕಿಸ್ತಾನಿ (Religious conversion racket)

ಪೋನ್ ನಂಬರ್ಗಳು ಪತ್ತೆಯಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ತಿಳಿಸಿದ್ದಾರೆ.
ಹೆಚ್ಚಿನ ತನಿಖೆಗಾಗಿ ಆರೋಪಿಯ ಎರಡು ಮೊಬೈಲ್ ಫೋನ್ಗಳು ಮತ್ತು ಕಂಪ್ಯೂಟರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಥಾಣೆಯ ಮುಂಬ್ರಾ ಟೌನ್ಶಿಪ್ನ ನಿವಾಸಿ ಶಹನವಾಜ್
ಖಾನ್ ಅಲಿಯಾಸ್ ಬಡ್ಡೋ ಕನಿಷ್ಠ ಆರು ಇ-ಮೇಲ್ ವಿಳಾಸಗಳನ್ನು ನಿರ್ವಹಿಸುತ್ತಿದ್ದನೆಂದು ಆರೋಪಿಸಲಾಗಿದೆ, ಅವುಗಳಲ್ಲಿ ಒಂದು ಇನ್ಬಾಕ್ಸ್ನಲ್ಲಿ ಪಾಕಿಸ್ತಾನದ ಕೆಲವು ಇ-ಮೇಲ್ಗಳನ್ನು ಹೊಂದಿದ್ದಾನೆ
ಎಂದು ಪೊಲೀಸ್ ಅಧಿಕಾರಿಗಳು (Religious conversion racket) ತಿಳಿಸಿದ್ದಾರೆ.
ಇದನ್ನು ಓದಿ: ‘ಶಕ್ತಿ’ಯೋಜನೆ ಉದ್ಘಾಟನೆಗೆ ಕ್ಷಣಗಣನೆ: ನಾಳೆ ಮಧ್ಯಾಹ್ನ 1 ಗಂಟೆ ನಂತರ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣ
ಆನ್ಲೈನ್ ಗೇಮಿಂಗ್ಗಾಗಿ ಎರಡು ಸೇರಿದಂತೆ ಆರು ಇ-ಮೇಲ್ ವಿಳಾಸಗಳನ್ನು ಖಾನ್ ನಿರ್ವಹಿಸುತ್ತಿದ್ದನು. ಆರೋಪಿಯನ್ನು ಗಾಜಿಯಾಬಾದ್ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಉತ್ತರ ಪ್ರದೇಶ ಪೊಲೀಸರ ಸೈಬರ್ ಕ್ರೈಂ ಸೆಲ್ ಶಹನವಾಜ್ ಖಾನ್ ಮೊಬೈಲ್ ಫೋನ್ಗಳಲ್ಲಿ ಸೇವ್ ಆಗಿರುವ 30 ಪಾಕಿಸ್ತಾನಿ ಫೋನ್ ಸಂಖ್ಯೆಗಳ ಹೆಚ್ಚಿನ ವಿವರಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಈ ಪ್ರಕರಣವು ಅಂತರಾಷ್ಟ್ರೀಯ ಸಂಪರ್ಕಗಳನ್ನು ಹೊಂದಿದ್ದು, ಹೆಚ್ಚಿನ ತನಿಖೆಗಾಗಿ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡುವ ಸಂಬಂಧ ಕೇಂದ್ರ ಗೃಹ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ
ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಪ್ರಸ್ತುತ ಗಾಜಿಯಾಬಾದ್ನ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಆತನನ್ನು ಜಿಲ್ಲಾ ನ್ಯಾಯಾಲಯದಿಂದ ವಶಕ್ಕೆ ಪಡೆಯಲಿದ್ದಾರೆ.

ಕವಿನಗರ ಪ್ರದೇಶದ ನಿವಾಸಿಯೊಬ್ಬರು ಮೇ 30 ರಂದು ಪೊಲೀಸರಿಗೆ ದೂರು ಸಲ್ಲಿಸಿದ್ದು, ಆನ್ಲೈನ್ ಗೇಮಿಂಗ್ ಅಪ್ಲಿಕೇಶನ್ ಮೂಲಕ ತನ್ನ ಮಗನನ್ನು ಇಸ್ಲಾಂಗೆ ಮತಾಂತರ ಆಗುವಂತೆ ಆಮಿಷ ಒಡ್ಡಿದ್ದಾರೆ
ಎಂದು ಆರೋಪಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ, ಪೊಲೀಸರು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಅಲಿಬಾಗ್ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಅಡಗಿದ್ದ ಖಾನ್ನನ್ನು ಪೊಲೀಸರು ಬಂಧಿಸಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಕೆಲವರು ತಲೆಮರಿಸಿಕೊಂಡಿದ್ದು, ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಧಾರ್ಮಿಕ ಮತಾಂತರ
ಜಾಲ ಭಾರತದಲ್ಲಿ ಅನೇಕ ಸಂಪರ್ಕಗಳನ್ನು ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.