Bilkis Bano ಪ್ರಕರಣದ ಅತ್ಯಾಚಾರಿಗಳು 1,000 ದಿನಗಳ ಕಾಲ ಪೆರೋಲ್ ಮೇಲೆ ಜೈಲಿನಿಂದ ಹೊರಗಿದ್ದರು : ವರದಿ

Bilkis Bano

New Delhi : ಬಿಲ್ಕಿಸ್ ಬಾನೋ (Report on Bilkis Bano Case) ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳು ಜೀವಾವಧಿ ಶಿಕ್ಷೆ,

(Life Imprisonment) ಅನುಭವಿಸುತ್ತಿರುವಾಗ ಪೆರೋಲ್ನಲ್ಲಿ ಸಾವಿರ ದಿನಗಳ ಕಾಲ ಜೈಲಿನಿಂದ ಹೊರಬಂದಿದ್ದರು ಎಂಬ ವರದಿ ಬಿಡುಗಡೆಯಾಗಿದೆ.

ಇದೇ ಸ್ವಾತಂತ್ರ್ಯ ದಿನದಂದು ಬಿಲ್ಕಿಸ್ ಬಾನೋ ಅವರ ಸಾಮೂಹಿಕ ಅತ್ಯಾಚಾರ ಮತ್ತು ಆಕೆಯ ಕುಟುಂಬವನ್ನು ಕೊಂದ 11 ಮಂದಿ ಅಪರಾಧಿಗಳು ಜೈಲಿನಿಂದ ಮುಕ್ತರಾಗಿದ್ದರು. ರಮೇಶಭಾಯ್,

ರೂಪಾಭಾಯ್ ಚಂದನಾ 1,198 ದಿನಗಳ ಪೆರೋಲ್ ರಜೆ ಮತ್ತು 378 ದಿನಗಳ ಫರ್ಲೋ (ಜೈಲಿನಿಂದ ಅಪರಾಧಿಗಳನ್ನು ಅಲ್ಪಾವಧಿಯ ತಾತ್ಕಾಲಿಕ ಬಿಡುಗಡೆ) ಆಗಿ ಬಿಡುಗಡೆಯಾಗಿದ್ದರು.

https://vijayatimes.com/rahul-gandhi-about-sun-screen/

ಜೈಲಿನ ಹೊರಗೆ ಒಟ್ಟು 1,576 ದಿನಗಳನ್ನು ಈತ ಕಳೆದಿದ್ದನು. ಅದೇ ರೀತಿ ಇತರ ಇಬ್ಬರು ಅಪರಾಧಿಗಳು ಕೂಡಾ 1,200 ದಿನಗಳಿಗಿಂತ ಹೆಚ್ಚು ಕಾಲ ಜೈಲಿನಿಂದ ಹೊರಗೆ ಇದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಕೇಂದ್ರದ ಅನುಮೋದನೆಯ ನಂತರ ಈ ವರ್ಷದ ಆರಂಭದಲ್ಲಿ ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ (Gujarat Government) ಸುಪ್ರೀಂ ಕೋರ್ಟ್ಗೆ ತಿಳಿಸಿದೆ.

https://youtu.be/j9JcNFBswz0 ಥೂ…..ಇದೂ ರಸ್ತೆನಾ? ಬೆಂಗಳೂರಿನ ಸುಂಕದಕಟ್ಟೆಯ ರಸ್ತೆ ದುಸ್ಥಿತಿ ನೋಡಿ.

ಆದರೆ ಕೇಂದ್ರೀಯ ತನಿಖಾ ದಳ ಮತ್ತು ವಿಶೇಷ ನ್ಯಾಯಾಲಯವು ಅವರ ಬಿಡುಗಡೆಯನ್ನು ವಿರೋಧಿಸಿದೆ. ಜುಲೈ 11 ರಂದು ರಾಜ್ಯ ಸರ್ಕಾರ ಅನುಮೋದನೆಯನ್ನು ಕೋರಿದ ಎರಡು ವಾರಗಳಲ್ಲಿ ಗೃಹ ಸಚಿವಾಲಯದ ಅನುಮತಿ ಬಂದಿದೆ ಎಂದು ವರದಿಯಾಗಿದೆ.

ಅಪರಾಧಿಗಳ ಬಿಡುಗಡೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೂರು ಅರ್ಜಿಗಳು ಈಗ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಗೆ ಬರುತ್ತಿವೆ.

ಅಪರಾಧಿಗಳು 14 ವರ್ಷಗಳ ಕಾಲ ಜೈಲಿನಲ್ಲಿದ್ದರು ಮತ್ತು ಅವರ ನಡವಳಿಕೆ ಉತ್ತಮವಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್ಗೆ ತನ್ನ ಅಫಿಡವಿಟ್ನಲ್ಲಿ ಹೇಳಿದೆ.

ಆದರೆ ಸಿಬಿಐ ಕಳೆದ ವರ್ಷ ಅವರ ಬಿಡುಗಡೆಯನ್ನು (Report on Bilkis Bano Case)ವಿರೋಧಿಸಿತು. ಅವರು “ಘೋರ ಮತ್ತು ಗಂಭೀರ” ಅಪರಾಧವನ್ನು ಮಾಡಿದ್ದಾರೆ ಎಂದು ವಾದಿಸಿತ್ತು.

ಇದೇ ವೇಳೆ ವಿಶೇಷ ನ್ಯಾಯಾಧೀಶರು ಬಿಡುಗಡೆಯನ್ನು ವಿರೋಧಿಸಿ, “ಇದು ದ್ವೇಷದ ಅಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧದ ಕೆಟ್ಟ ರೂಪವಾಗಿದೆ.

ಇದು ಸಮಾಜದ ಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ” ಎಂದು ವಿಶೇಷ ನ್ಯಾಯಾಧೀಶ ಆನಂದ್ ಎಲ್ ಯಾವಲ್ಕರ್, ಕಳೆದ ವರ್ಷ ಮಾರ್ಚ್ನಲ್ಲಿ ಗೋಧ್ರಾ ಉಪ ಕಾರಾಗೃಹದ ಅಧೀಕ್ಷಕರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
Exit mobile version