ಕೆಲಸದ ಅವಧಿ 8 ಗಂಟೆಗೆ ಇಳಿಸುವಂತೆ ಮನವಿ

ಬೆಂಗಳೂರು, ಫೆ. 05: ಈಗಾಗಲೇ ಕೆಲಸದ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸುವಂತೆ ಸರ್ಕಾರ ಹೇಳಿದ್ದರೂ ಇದು ಬರೀ ಪೇಪರ್‌ಗಳಲ್ಲೇ ಇದೆ. ಉದ್ಯೋಗ ಸಂಸ್ಥೆಗಳಲ್ಲಿ ಮಾತ್ರ ನಿರಂತರವಾಗಿ ಕೆಲಸಗಾರರನ್ನು 10 ಗಂಟೆ 12 ಗಂಟೆಗಳ ಕಾಲ ದರ್ಮಕ್ಕೇ ದುಡಿಸಿಕೊಳ್ಳುವುದು  ಸಾಮಾನ್ಯವಾಗಿ ಹೋಗಿದೆ.ಇದೀಗ ಮಹಿಳಾ ಕಂಡಕ್ಟರ್ ಅವರು  ತಮ್ಮ ಕೆಲಸದ ಅವಧಿಯನ್ನು ದಯವಿಟ್ಟು 8 ಗಂಟೆಗೆ ಇಳಿಸಿ ಎಂಬುದಾಗಿ  ರಾಜ್ಯದ ಮುಖ್ಯಮಂತ್ರಿ ಹಾಗು ಸಾರಿಗೆ ಸಚಿವರಿಗೆ ಕೈಮುಗಿದು ಮನವಿ ಮಾಡಿಕೊಂಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವವರು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದು, ಅದರಲ್ಲೂ ಬಹುತೇಕ ಮಂದಿ ಬೆಳಗ್ಗೆ ಕೆಲಸಕ್ಕಾಗಿ ಬಂದರೇ ರಾತ್ರಿ ಮಲಗೋ ಟೈಮ್‌ಗೆ ಮನೆಗೆ ಹೋಗುತ್ತಾರೆ.

ಇನ್ನೂ ಕೆಲವರು ಹಗಲು ರಾತ್ರಿ ಎನ್ನದೇ ಎರಡ್ಮೂರು ದಿವಸಕ್ಕೆ ಮನೆಗೆ ಹೋಗುವುದು ಕೂಡ ಉಂಟು. ಇದಲ್ಲದೇ ಹೆಚ್ಚು ಟ್ರಿಪ್‌ ಮಾಡದೇ ಹೋದರೇ, ಇಲ್ಲ ಹೆಚ್ಚು ಹಣವನ್ನು ತರದೇ ಹೋದರೇ ಮೇಲಾಧಿಕಾರಿಗಳಿಂದ ಕಿರುಕುಳಕ್ಕೆ  ಒಳಗಾಗುತ್ತಾರೆ.

ಅದರಲ್ಲೂ ಬಸ್ ಕಂಡಕ್ಟರ್​ಗಳಿಗೆ ಸರಿಯಾದ ಶೌಚಾಲಯಗಳ ಕೊರತೆ ಇದೆ. ನಾನಾ ಕಿರುಕುಳ ದಿನನಿತ್ಯ ನಡೆಯುತ್ತಲೇ ಇರುತ್ತದೆ. ಹೀಗಾಗಿ ಇದರಿಂದ ಮನ ನೊಂದಿರುವ ಮಹಿಳಾ ಬಸ್ ಕಂಡಕ್ಟರ್​ಗಳು ರಾಜ್ಯ ಸಿಎಂ ಹಾಗೂ ಸಾರಿಗೆ ಸಚಿವರಿಗೆ ಕೈ ಮುಗಿದು ಬೇಡಿಕೊಂಡಿದ್ದು, ಕೂಡಲೇ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಅಂತ ಮನವಿ ಮಾಡಿಕೊಂಡಿದ್ದಾರೆ. ಇದು ಬರೀ ಮಹಿಳಾ ಕಂಡಕ್ಟರ್‌ಗಳ ಸಮಸ್ಯೆಯಲ್ಲ ಕೆಲಸ ಮಾಡುವ  ಪ್ರತಿ ಮಹಿಳೆಯರಿಗೂ ಒಂದಲ್ಲ ಒಂದು ಕಷ್ಟಗಳು ಇದ್ದೇ ಇರುತ್ತವೆ. ಕೆಲಸದ ಅವಧಿ 8 ಗಂಟೆ ಅಂತ ಕಡ್ಡಾಯಗೊಳ್ಳಬೇಕು.

Exit mobile version