- ರೆವಿನ್ಯೂ ಸೈಟ್ ಸಕ್ರಮ. ರೆವಿನ್ಯೂ ಸೈಟ್ದಾರರಿಗೆ ಗುಡ್ ನ್ಯೂಸ್.
- ಅಕ್ರಮವನ್ನು ಸಕ್ರಮ ಮಾಡಲು ಮುಂದಾಗಿದೆ ಸರ್ಕಾರ.
- ಸರ್ಕಾರದ ನಿರ್ಧಾರದಿಂದ ಲಾಭ ಯಾರಿಗೆ? ನಷ್ಟ ಯಾರಿಗೆ?
ಹೌದು, ರಾಜ್ಯದ ರೆವಿನ್ಯೂ ಸೈಟ್ ಓನರ್‌ಗಳಿಗೆ ಗುಡ್ ನ್ಯೂಸ್.
ರಾಜ್ಯದ ಎಲ್ಲಾ ಪ್ರಮುಖ ನಗರ ಕೇಂದ್ರಗಳಲ್ಲಿನ ರೆವಿನ್ಯೂ ಸೈಟ್‌ಗಳನ್ನು ಸಕ್ರಮಗೊಳಿಸುವ ಮಹತ್ತರವಾದ ನಿರ್ಧಾರವನ್ನು ಸರ್ಕಾರ ಮಾಡಿದೆ. ಇದರಿಂದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಲಕ್ಷಾಂತರ ಸೈಟ್ ಓವರ್‌ಗಳು ನಿಟ್ಟುಸಿರು ಬಿಡುವಂತಾಗಿದೆ.
ಸರ್ಕಾರದ ನಿರ್ಧಾರದಿಂದ ಬರೀ ಸೈಟ್ ಓನರ್‌ಗಳಿಗೆ ಮಾತ್ರವಲ್ಲ ಸರ್ಕಾರದ ಬೊಕ್ಕಸಕ್ಕೂ ಭರ್ಜರಿ ಆದಾಯ ಬರಲಿದೆ.

ರೆವಿನ್ಯೂ ಸೈಟ್ ಅಂದ್ರೇನು? ನಮ್ಮ ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಯಾರಿಗೆ ಲಾಭ? ಯಾರಿಗೆ ನಷ್ಟ ಅನ್ನೋ ಲೆಕ್ಕಾಚಾರ ಮಾಡೋ ಮುನ್ನ ನಾವು ರೆವಿನ್ಯೂ ಸೈಟ್ ಅಂದ್ರೇನು ಅನ್ನೋದನ್ನು ಮೊದಲು ತಿಳಿದುಕೊಳ್ಳೋಣ. ಸರಳವಾಗಿ ಹೇಳ್ಬೇಕು ಅಂದ್ರೆ, ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕಾಗಿ ಅಥವಾ ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವುದಿದ್ದರೆ ಅದನ್ನು ಸರ್ಕಾರದ ಅನುಮತಿ ಪಡೆದು ಕನ್ವರ್ಟ್ ಮಾಡಿಕೊಳ್ಳಬೇಕು.
ಒಂದು ವೇಳೆ ಭೂಮಿಯನ್ನು ಪರಿವರ್ತಿಸಿಕೊಳ್ಳದೆ, ಆ ಜಮೀನಿನಲ್ಲಿಸೈಟ್ಮಾಡಿದ್ರೆ, ಅದನ್ನು ರೆವಿನ್ಯೂ ಸೈಟ್ ಅಂತ ಕರೀತಾರೆ. ಇಂತಹ ಸೈಟ್ಗಳಿಗೆ ಸರ್ಕಾರದ ಅಧಿಕೃತ ಮಾನ್ಯತೆ ಇಲ್ಲದ ಕಾರಣ ರಸ್ತೆ, ಇನ್ನಿತರ ಸೌಲಭ್ಯಗಳು ಸರಿಯಾಗಿ ಇರುವುದಿಲ್ಲ.ಆದ್ರೆ ವಿನ್ಯೂ ಸೈಟ್ ಡಿಮೆಬೆಲೆಯಲ್ಲಿಸಿಗುತ್ತೆ ಅಂತ ಬಡ ಹಾಗೂ ಮಧ್ಯಮ ವರ್ಗದವರು ವಸತಿಗಾಗಿ ಹಾಗೂ ಶ್ರೀಮಂತರುಬಂಡವಾಳ ಹೂಡಿಕೆಗಾಗಿ ಇದನ್ನು ಖರೀದಿಸುತ್ತಾರೆ.

ಐದು ಲಕ್ಷಕ್ಕೂ ಹೆಚ್ಚು ರೆವಿನ್ಯೂ ಸೈಟ್ಸ್ : ಸರ್ಕಾರದ ಲೆಕ್ಕಾಚಾರದ ಪ್ರಕಾರ ಬೆಂಗಳೂರು ನಗರ ಒಂದರಲ್ಲೇ ಆರು ಲಕ್ಷಕ್ಕೂ ಹೆಚ್ಚು ರೆವಿನ್ಯೂ ಸೈಟ್‌ಗಳಿವೆ ಅಂತ ಅಂದಾಜಿಸಲಾಗಿದೆ. ಇತ್ತೀಚೆಗೆ ರೆವಿನ್ಯೂ ಸೈಟ್‌ಗಳ ನೋಂದಣಿ ಪ್ರಕ್ರಿಯೆಯನ್ನು ನಿಲ್ಲಿಸಿರುವುದರಿಂದ ಲಕ್ಷಾಂತರ ಜನ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸೋ ಸಲುವಾಗಿ ರೆವಿನ್ಯೂ ಸೈಟ್ ಮಾಲೀಕರಿಂದ ಹೆಚ್ಚುವರಿ ಶುಲ್ಕ ಪಡೆದು ಸಕ್ರಮ ಮಾಡಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿರ್ಧಾರಕ್ಕೆ ಜನಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದ್ದಾರೆ.
ಬೊಕ್ಕಸಕ್ಕೆ ಬರುತ್ತೆ 2500 ಕೋಟಿ : ರೆವಿನೂ ಸೈಟ್‌ಗಳನ್ನು ಸಕ್ರಮಗೊಳಿಸೋದ್ರಿಂದ ಬರೀ ಸೈಟ್ ಮಾಲೀಕರಿಗೆ ಮಾತ್ರವಲ್ಲ ಸರ್ಕಾರಕ್ಕೆ ಭರ್ಜರಿ ಲಾಭ ಇದೆ. ಅದೇನಂದ್ರೆ ಈ ಅಕ್ರಮ ಸಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ 2500 ಕೋಟಿ ಆದಾಯ ಬರಲಿದೆ. ಮೊದಲೇ ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಈ ಯೋಜನೆ ಸಾಕಷ್ಟು ಬಲ ತುಂಬಲಿದೆ.

ಎಲ್ಲಾ ಸೈಟ್‌ಗಳು ಸಕ್ರಮವಾಗುತ್ತವಾ? : ಸರ್ಕಾರದ ಈ ಯೋಜನೆಯಿಂದ ರಾಜ್ಯದ ಎಲ್ಲಾ ರೆವಿನ್ಯೂ ಸೈಟ್‌ಗಳು ಸಕ್ರಮವಾಗಲಿದೆಯಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಕನಿಷ್ಟ ವ್ಯತ್ಯಾಸಗಳು ಅಂದ್ರೆ ಕಾನೂನಿನ ನಿಯಮಗಳನ್ನು ಕಡಿಮೆ ಉಲ್ಲಂಘನೆ ಮಾಡಿರುವ ಸೈಟ್‌ಗಳನ್ನು ಸಕ್ರಮಗೊಳಿಸಬಹದಾಗಿದೆ. ಹಾಗಾದ್ರೆ ಯಾವ ರೆವಿನ್ಯೂ ಸೈಟ್‌ಗಳನ್ನು ಸಕ್ರಮಗೊಳಿಸಲು ಸಾಧ್ಯವಿಲ್ಲ ನೋಡೋಣ. ಎಸ್‌ಸಿ/ಎಸ್‌ಟಿಗೆ ಸೇರಿದ ಜಮೀನು, ನದಿಯ ತೀರದಲ್ಲಿರುವ ನಿವೇಶನಗಳು,
ಹೈಟೆನ್ಶೆನ್ ತಂತಿಗಳು ಹಾದುಹೋಗಿರುವ ಸೈಟ್
ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಸೈಟ್.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟ ಭೂಮಿಯನ್ನು ಕೆಲವು ಸಂದರ್ಭದಲ್ಲಿ ರೆವಿನ್ಯೂ ಸೈಟ್ಗಳನ್ನುಅಕ್ರಮ-ಸಕ್ರಮ ಮೂಲಕವೂ ಕಾನೂನು ಬದ್ಧಗೊಳಿಸಲು ಆಗುವುದಿಲ್ಲ. ನದಿಯ ತೀರದಲ್ಲಿರುವ ರೆವಿನ್ಯೂ ಸೈಟ್ಗಳನ್ನುಕಾನೂನು ಬದ್ಧಗೊಳಿಸಲು ಆಗುವುದಿಲ್ಲ. ಹೈಟೆನ್ಶೆನ್ ತಂತಿಗಳು ಸೈಟ್ಮೇಲೆ ಹಾದುಹೋಗಿದ್ದರೆ ಅಂತಹ ಸೈಟ್ಗಳನ್ನು ಸಕ್ರಮಗೊಳಿಸಲು ಆಗುವುದಿಲ್ಲ. ಸರ್ಕಾರಿ ಭೂಮಿಯನ್ನುಒತ್ತುವರಿ ಮಾಡಿಕೊಂಡು ರೆವಿನ್ಯೂ ಸೈಟ್ಮಾಡಿಕೊಂಡಿದ್ದರೆ ಅಂತಹ ಸೈಟ್ಗಳನ್ನುಸಕ್ರಮ ಮಾಡಲು ಬರುವುದಿಲ್ಲ. ಹಾಗಾಗಿ ರೆವಿನ್ಯೂ ಸೈಟ್‌ಗಳನ್ನು ಖರೀದಿಸುವಾಗ ತುಂಬನೇ ಕೇರ್‌ಫುಲ್ ಆಗಿ ಖರೀದಿಸಬೇಕು.

ಮೋಸ ಹೋಗ್ತಿರಾ ಎಚ್ಚರ : ಸರ್ಕಾರ ರೆವಿನ್ಯೂ ಸೈಟ್‌ಗಳನ್ನು ಸಕ್ರಮ ಮಾಡುತ್ತೆ ಅಂದಾಗ ಅಮಾಯಕರಿಗೆ ಮೋಸ ಮಾಡಲು ದಲ್ಲಾಳಿಗಳ ದೊಡ್ಡ ಗ್ಯಾಂಗೇ ರೆಡಿಯಾಗುತ್ತೆ. ಹಾಗಾಗಿ ನೀವು ಸೈಟ್ ಖರೀದಿಸೋ ಮುನ್ನ ಸಾಕಷ್ಟು ಜಾಗರೂಕರಾಗಿ.ಈ ಸೈಟ್ಗೆ ಯಾವುದೆ ರೀತಿಯ ಕಾನೂನಾತ್ಮಕವಾಗಿ ಆಧಾರವಿರುವುದಿಲ್ಲ. ಆದ್ದರಿಂದಲೇ ರೆವಿನ್ಯೂ ಸೈಟ್ ಖರೀದಿಸಬೇಕಾದರೆ ಹೆಚ್ಚು ಯೋಚನೆ ಮಾಡಬೇಕಾಗುತ್ತದೆ.
- ಪದ್ಮಶ್ರೀ