ಇಹಲೋಕ ತ್ಯಜಿಸಿದ ವಿಶ್ವ ದಾಖಲೆ ಬರೆದ ಫುಟ್ಬಾಲ್ ಮಾಂತ್ರಿಕ !

Brasilia : ವಿಶ್ವ ಫುಟ್‌ಬಾಲ್‌ (RIP Pele Football Player) ಚಾಣಾಕ್ಷ ಆಟಗಾರ ಬ್ರೆಜಿಲ್‌ಗೆ 3 ಬಾರಿ ವಿಶ್ವಕಪ್‌ಗಳನ್ನು ತಂದುಕೊಟ್ಟ ಜನಪ್ರಿಯ ಪುಟ್ಬಾಲ್ ಆಟಗಾರ ಪೀಲೆ (Pele) (82) ಅಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಈ ಸುದ್ದಿ ಅವರ ಅಭಿಮಾನಿಗಳಿಗೆ ಭಾರೀ ದುಃಖವನ್ನು ಉಂಟುಮಾಡಿದೆ. ಇವರ ಪೂರ್ಣ ಹೆಸರು ಎಡ್ಸನ್ ಅರಾಂಟೆಸ್ ಡೊ ನಾಸಿಮೆಂಟೊ (Edson Arantes do Nascimento) ಇವರು 23ಅಕ್ಟೋಬರ್ 1940 ರಲ್ಲಿ ಜನಿಸಿದರು.

ಇವರನ್ನು ಪ್ರೀತಿಯಿಂದ ಏಕನಾಮದಲ್ಲಿ ಪೀಲೆ ಎಂದು ಕರೆಯುತ್ತಾರೆ. ಇವರು ತಮ್ಮ ವೃತ್ತಿ ಜೀವನವನ್ನು ಬ್ರೆಜಿಲಿಯನ್ಗಾಗಿ ಫಾರ್ವರ್ಡ್ ಆಗಿ ಆಡುತ್ತಿದ್ದರು.

2021 ರಿಂದ ಕ್ಯಾನ್ಸರ್ (Cancer) ನಿಂದ ಬಳಲುತ್ತಿದ್ದ ಪೀಲೆ, ಸುಮಾರು 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಹಲವು ಖಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ನವೆಂಬರ್ 29ರಂದು ಆಸ್ಪತ್ರೆಗೆ ದಾಖಲಿಸಿದ್ದರು .

ಆದರೆ ವಿಧಿಯಾಟ ನಿನ್ನೆ ಡಿಸೆಂಬರ್ 29, 2022 ರಂದು ಇಹಲೋಕ ತ್ಯಜಿಸಿದ್ದಾರೆ. ಪೀಲೆಯವರು ತಮ್ಮ16ನೇ ವಯಸ್ಸಿನಲ್ಲಿ (RIP Pele Football Player) ಬ್ರೆಝಿಲ್ ರಾಷ್ಟ್ರೀಯ ತಂಡದ ಪರ ಆಡಲು ಆರಂಭಿಸಿದರು.

1958, 1962 ಹಾಗೂ 1970ರಲ್ಲಿ ನಡೆದ ಬ್ರೆಝಿಲ್ ಫಿಫಾ ವಿಶ್ವಕಪ್ (FIFA World Cup) ಗೆಲ್ಲಲು ಕಾರಣಕರ್ತರಾದರು. ಈ ಸಾಧನೆ ಮಾಡಿದ ಏಕೈಕ ಆಟಗಾರನೆಂಬ ಹೆಗ್ಗಳಿಕೆಯೂ ಕೂಡ ಪೀಲೆಗೆ ಸೇರುತ್ತದೆ.

ಇದನ್ನೂ ಓದಿ : https://vijayatimes.com/rishabh-pant-car-accident/

ಅಂತಾರಾಷ್ಟ್ರೀಯ ಪಂದ್ಯಗಳನ್ನು ಸಲೀಸಾಗಿ ಆಡಿರುವ ಪೀಲೆ 77 ಗೋಲುಗಳನ್ನು ಗಳಿಸಿದ್ದಾರೆ.

ಎಲ್ಲಾ ಕ್ಲಬ್‌ಗಳು ಸೇರಿದಂತೆ ಒಟ್ಟು 840 ಪಂದ್ಯಗಳನ್ನು ಆಡಿರುವ ಪೀಲೆ 775 ಗೋಲು ಬಾರಿಸುವುದರ ಮೂಲಕ ಜನಮನ್ನಣೆ ಕಾರಣರಾದರು.

ಅಷ್ಟೇ ಅಲ್ಲದೆ, 100ಕ್ಕೂ ಹೆಚ್ಚು ಬಾರಿ ಹ್ಯಾಟ್ರಿಕ್‌ ಗೋಲುಗಳನ್ನು ಗಳಿಸಿರುವ ಆಟಗಾರ ಎಂಬ ಬಿರುದು ಇವರದೇ.

ಮೂರು ಬಾರಿ ವಿವಾಹವಾಗಿದ್ದ ಪೀಲೆ(Pele) ಅವರಿಗೆ ಒಟ್ಟು 7 ಮಕ್ಕಳಿದ್ದಾರೆ. ಪೀಲೆ ನಿಧನಕ್ಕೆ ಜಗತ್ತಿನ ಗಣ್ಯರು ಕಂಬನಿ ಮಿಡಿದಿದ್ದು, ಪುಟ್ಬಾಲ್ ಮಾಂತ್ರಿಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನವೆಂಬರ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಆರಂಭದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದರಾದರೂ, ದಿನ ಕಳೆಯುತ್ತಿದ್ದಂತೆ, ಆರೋಗ್ಯ ಕ್ಷೀಣಿಸುತ್ತಲೇ ಇತ್ತು.

ಇದನ್ನ ಗಮನಿಸಿದ ವೈದ್ಯರು ಅವರಿಗೆ ಕೀಮೊಥೆರಪಿಯನ್ನೂ ನಿಲ್ಲಿಸಿದ್ದರು. ಚಿಕಿತ್ಸೆಯ ಮಧ್ಯೆಯೇ, ಕೋಟ್ಯಂತರ ಅಭಿಮಾನಿಗಳ ಪ್ರಶ್ನೆ ಗಳಿಗೆ ಉತ್ತರಿಸಿದ ಪೀಲೆಯವರು,

“ನಾನು ಗೆದ್ದು ಬರುವೆ” ಎಂದು ಧೈರ್ಯ ನೀಡಿದ್ದರು. ಆದರೆ ಇದೀಗ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ಪರಲೋಕದ ಪಾಲಾಗಿದ್ದಾರೆ.

ಇದನ್ನೂ ಓದಿ : https://vijayatimes.com/arshdeep-nominated-for-award/

ಒಟ್ಟಾರೆಯಾಗಿ ಕ್ರೀಡಾ(Sports) ಜಗತ್ತಿನ ಅತ್ಯುತ್ತಮ ಹಾಗೂ ನಂಬಿಕೆಯ ಆಟಗಾರನಾಗಿದ್ದ ಪೀಲೆ ‘ಸಾಧನೆಯ ಶಿಖರ’ ವನ್ನು ಸಮೀಪದಿಂದ ನೋಡಿದವರಲ್ಲೊಬ್ಬರು. ಇದೀಗ ಪ್ರಪಂಚದಾದ್ಯಂತ ಅವರ ಪಾರ್ಥಿವ ಶರೀರಕ್ಕೇ ಕಂಬನಿ ಮಿಡಿದಿದ್ದಾರೆ.
Exit mobile version