ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ರಿಷಬ್‌ ಶೆಟ್ಟಿ ಅವರನ್ನು ಬಂಧಿಸುವಂತಿಲ್ಲ : ಸುಪ್ರೀಂ ಕೋರ್ಟ್‌ ಆದೇಶ

Bengaluru : ಕನ್ನಡ ಚಿತ್ರರಂಗದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ಕೇರಳ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಿತ್ತು. ಸದ್ಯ ಈ ಪ್ರಕರಣ (Rishabh cannot be arrested) ಕೇರಳ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಮಧ್ಯೆಯೇ ಇದೀಗ ಸುಪ್ರೀಂ ಕೋರ್ಟ್‌ ಕಾಂತಾರ(Kanthara) ಚಿತ್ರತಂಡದ ಪರ ಆದೇಶವನ್ನು ಹೊರಡಿಸಿದೆ.

ಈ ಹಿಂದೆ ಕೇರಳ ಹೈಕೋರ್ಟ್‌ನ ನ್ಯಾಯಮೂರ್ತಿ ಎ. ಬದ್ರುದೀನ್ ಅವರು ರಿಷಬ್ ಶೆಟ್ಟಿ ಹಾಗೂ ವಿಜಯ್ ಕಿರಂದೂರು(Vijay Kirandur) ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದರು.

ಕಾಂತಾರ ಚಿತ್ರ ಬಿಡುಗಡೆಗೊಂಡು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿ ಜನಮನವನ್ನು ಸೆಳೆಯಿತು. ಕಾಂತಾರ ಚಿತ್ರದ ʻವರಾಹ ರೂಪಂʼ(Varaha Rupam) ಹಾಡು ಕೃತಿಚೌರ್ಯವಾಗಿದೆ ಎಂದು ಕೇರಳದ ತೈಕುಡಂ ಬ್ರಿಡ್ಜ್‌ ಆರೋಪಿಸಿ, ಕೋರ್ಟ್‌ನಲ್ಲಿ ಕೇಸ್‌ ದಾಖಲಿಸಿತು.

ಅಂದಿನಿಂದಲೂ ಇಂದಿನವರೆಗೂ ಕೃತಿಚೌರ್ಯ ಪ್ರಕರಣ ಕಾಂತಾರ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡತೊಡೆಗಿತು.

ಕಾಂತಾರ ಚಿತ್ರದಲ್ಲಿ ಕೇಳಿಬರುವ ಪ್ರಮುಖ ಹಾಡು ವರಾಹ ರೂಪಂ ಹಾಡು ನಮ್ಮ ಟ್ಯೂನ್ ಅನ್ನು ಕದ್ದು ಮಾಡಲಾಗಿದೆ ಎಂದು ತೈಕ್ಕುಡಂ ಬ್ರಿಡ್ಜ್ ತಂಡದವರು ಆರೋಪ ಮಾಡಿದ್ದರು.

ಈ ವಿಚಾರ ಕೇರಳ ಹೈಕೋರ್ಟ್(High Court) ಮೆಟ್ಟಿಲೇರಿ ದೊಡ್ಡ ವಿವಾದವನ್ನು ಹುಟ್ಟು ಹಾಕಿದೆ.

ಸದ್ಯ ಈ ಪ್ರಕರಣದ ವಿಚಾರಣೆಯಲ್ಲಿ ಹೊಂಬಾಳೆ ಫಿಲ್ಮ್ಸ್ನ(Hombale Films) ವಿಜಯ್ ಕಿರಗಂದೂರು ಹಾಗೂ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರು ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ವರಾಹ ರೂಪಂ ಹಾಡನ್ನು ತೆಗೆದುಹಾಕಬೇಕೆಂಬ ಕೇರಳ ಹೈಕೋರ್ಟ್‌ ಆದೇಶ ಜಾರಿ ಮಾಡಿದ್ದು, ಸುಪ್ರೀಂ ಕೋರ್ಟ್‌(Supreme Court)

ಕಾಂತಾರ ಚಿತ್ರದ ವರಾಹ ರೂಪಂ ಹಾಡನ್ನು ಚಿತ್ರದಲ್ಲಿ ಅಥವಾ ಯಾವುದೇ ಮ್ಯೂಸಿಕ್‌ ಆಪ್‌ನಲ್ಲಿ ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್‌ ವಿಧಿಸಿದ್ದ

ನಿರ್ಬಂಧದ ಷರತ್ತನ್ನು ಇದೀಗ ಸಡಿಲಿಕೆ ಮಾಡುವ ಮುಖೇನ ಕಾಂತಾರ ಚಿತ್ರತಂಡಕ್ಕೆ ಬಿಗ್‌ ರಿಲೀಫ್‌ ನೀಡಿದೆ. ಅಷ್ಟಕ್ಕೂ ಸುಪ್ರೀಂ ಕೋರ್ಟ್‌ ನೀಡಿದ ಆದೇಶದಲ್ಲಿ ಏನಿದೆ? ಇಲ್ಲಿದೆ ಮಾಹಿತಿ ಓದಿ.

ಕಾಂತಾರ ಚಿತ್ರದ ನಿರ್ಮಾಪಕರು ಚಿತ್ರದಲ್ಲಿ ಬಳಸಿರುವ ವರಾಹ ರೂಪಂ ಹಾಡನ್ನು ತೆಗೆದು ಹಾಕುವ ಅವಶ್ಯಕತೆಯಿಲ್ಲ! ಎಂದು ಸುಪ್ರೀಂ ಕೋರ್ಟ್‌ನ (Rishabh cannot be arrested) ಮಧ್ಯಂತರ ಆದೇಶ ತಿಳಿಸಿದೆ.

ಚಿತ್ರದ ನಟ ರಿಷಬ್‌ ಶೆಟ್ಟಿ ಹಾಗೂ ನಿರ್ಮಾಪಕ ವಿಜಯ್‌ ಕಿರಗಂದೂರು ಅವರನ್ನು ಪೊಲೀಸರು ವಿಚಾರಣೆ ಮಾಡಬಹುದು.

ಆದ್ರೆ, ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದಲ್ಲಿ ಅವರನ್ನು ಬಂಧಿಸಲು ಅನುಮತಿಯಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಿದೆ.

ಅರ್ಜಿಯ ವಿಚಾರಣೆ ನಡೆಸಲು ಇಂದು ಪಟ್ಟಿಯಾಗದಿದ್ದರೂ ಕೂಡ, ಸಿಜೆಐ(CJI) ಅವರ ಮುಂದೆ ಶೀಘ್ರ ವಿಚಾರಣೆ ನಡೆಸಲು ಮನವಿಯಾದ ನಂತರ ವಿಚಾರಣೆ ನಡೆಸಲು ಒಪ್ಪಿಕೊಂಡಿರುವುದಾಗಿ ವರದಿ ಹೇಳಿದೆ.

ಕೇರಳ ಹೈಕೋರ್ಟ್‌ ಕಾಂತಾರ ಚಿತ್ರದ ನಿರ್ಮಾಪಕರು ಕೃತಿಚೌರ್ಯ ಮಾಡಿದ್ದಾರೆ ಎಂದು ಬಲವಾಗಿ ಭಾವಿಸಿದೆ.

ಆದ್ರೆ ಆ ರೀತಿಯ ಷರತ್ತುಗಳನ್ನು ವಿಧಿಸಬಹುದು ಎಂಬ ಅರ್ಥವಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್‌ ಆದೇಶದಲ್ಲಿ ಉಲ್ಲೇಖಿಸಿ ಹೇಳಿದ್ದಾರೆ.

ಕೃತಿಚೌರ್ಯ ವಿವಾದವನ್ನು ಕುರಿತು ಆದೇಶ ಹೊರಡಿಸಿರುವ ಸುಪ್ರೀಂಕೋರ್ಟ್‌, ಕೇರಳ ಹೈಕೋರ್ಟ್‌ ಆದೇಶದ ಷರತ್ತು ೧೨(೧) ಅನ್ನು ಮಾರ್ಪಡಿಸಲಾಗಿದ್ದು,

ಅರ್ಜಿದಾರರು ಫೆ.೧೨ ಮತ್ತು ೧೩ ರಂದು ತನಿಖಾಧಿಕಾರಿಯ ಮುಂದೆ ಹಾಜರಾಗತಕ್ಕದ್ದು, ಕಾಂತಾರ ಚಿತ್ರದ ನಟ ರಿಷಬ್‌ ಶೆಟ್ಟಿ ಮತ್ತು

ನಿರ್ಮಾಪಕ ವಿಜಯ್‌ ಕಿರಗಂದೂರು ಅವರನ್ನು ಬಂಧಿಸಿದ ಸಂದರ್ಭದಲ್ಲಿ ಹೈಕೋರ್ಟ್‌ ನೀಡಿರುವ ಆದೇಶದ ಅನುಸಾರ ಜಾಮೀನಿನ ಮೇಲೆ ಅವರನ್ನು ಬಿಡುಗಡೆಗೊಳಿಸಬೇಕು.

ಇದಲ್ಲದೇ ಹಾಡನ್ನು ತೆಗೆದುಹಾಕಬೇಕು ಎಂಬ ಕೇರಳ ಹೈಕೋರ್ಟ್‌ ಆದೇಶ ಜಾರಿಗೆ ತಡೆ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Exit mobile version