ಕ್ರಿಕೆಟಿಗ ರಿಷಬ್‌ಪಂತ್‌ ಕಾರು ಭೀಕರ ಅಪಘಾತ ; ಪಂತ್‌ಗೆ ಗಂಭೀರ ಗಾಯ

Dehradun: ಭಾರತದ ಸ್ಟಾರ್ ವಿಕೆಟ್‌ ಕೀಪರ್‌ ರಿಷಬ್ ಪಂತ್ (Rishabh pant car accident) ದೆಹಲಿಯಿಂದ ಉತ್ತರಾಖಂಡಕ್ಕೆ ಹಿಂದಿರುಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ರಿಷಬ್‌ಪಂತ್‌ಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯರ ಪ್ರಕಾರ, ರಿಷಬ್‌ಪಂತ್ ಅವರ ಹಣೆ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿವೆ. ಈ ಕುರಿತು ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಈ ಕುರಿತು ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ದೇಹತ್ ಸ್ವಪ್ನಾ ಕಿಶೋರ್ ಸಿಂಗ್ ಅವರು ಸ್ಥಳಕ್ಕೆ ಧಾವಿಸಿ, ರಿಷಬ್ ಪಂತ್ ಸ್ಥಿತಿ ಸ್ಥಿರವಾಗಿದ್ದು,

https://vijayatimes.com/rip-heeraben-modi/

ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ಗೆ (Dehradun) ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಪ್ರತ್ಯಕ್ಷದರ್ಶಿಗಳ ಪ್ರಕಾರ, ರಿಷಬ್ ಅವರ ಕಾರು ರೇಲಿಂಗ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಬಹಳ ಕಷ್ಟಪಟ್ಟು ಬೆಂಕಿಯನ್ನು ಹತೋಟಿಗೆ ತರಲಾಯಿತು.

Rishab Panth

ಅದೇ ಸಮಯದಲ್ಲಿ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ರಿಷಬ್ ಪಂತ್ ಅವರನ್ನು ದೆಹಲಿ (Delhi) ರಸ್ತೆಯಲ್ಲಿರುವ ಸಕ್ಷಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ರಿಷಬ್‌ಪಂತ್ ಅವರು ನಿದ್ರಿಸಿದ್ದರಿಂದ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅವರು ವಿಂಡ್‌ ಸ್ಕ್ರೀನ್‌ ಅನ್ನು ಒಡೆದು ಹೊರಬಂದರು (Rishabh pant car accident) ಎಂದು ಹೇಳಿದ್ದಾರೆ.

ಉತ್ತರಾಖಂಡದ (Utharakhand) ಡಿಜಿಪಿ ಅಶೋಕ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದು, ರಿಷಬ್‌ ಪಂತ್ ಅವರು ತಮ್ಮ ಬಿಎಂಡಬ್ಲ್ಯು(BMW) ಕಾರನ್ನು ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಬೆಂಕಿ ಹೊತ್ತಿಕೊಂಡಿದೆ.

ಇದನ್ನೂ ಓದಿ: https://vijayatimes.com/arshdeep-nominated-for-award/

ನಂತರ ಅವರನ್ನು ಸ್ಥಳೀಯರು ರಕ್ಷಿಸಿ, ರೂರ್ಕಿಯ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ರಿಷಬ್ ಪಂತ್ ಅವರು ಶ್ರೀಲಂಕಾ (Sri lanka) ವಿರುದ್ಧದ ಏಕದಿನ ಮತ್ತು ಟಿ-20 (T20) ಸರಣಿಯ ಭಾರತ ತಂಡದಿಂದ ಹೊರಗುಳಿದಿದ್ದಾರೆ.

ಬಿಸಿಸಿಐ (BCCI) ಪತ್ರಿಕಾ ಪ್ರಕಟಣೆಯಲ್ಲಿ ಪಂತ್ ಗಾಯಗೊಂಡಿದ್ದಾರೆಯೇ, ವಿಶ್ರಾಂತಿ ಪಡೆದಿದ್ದಾರೆಯೇ ಅಥವಾ ಕೈಬಿಡಲಾಗಿದೆಯೇ ಎಂಬುದನ್ನು ನಿರ್ದಿಷ್ಟಪಡಿಸಿಲ್ಲ.
Exit mobile version