ರಾಜಸ್ಥಾನದ (Rajasthan) 199 ವಿಧಾನಸಭಾ ಕ್ಷೇತ್ರಗಳಿಗೆ ಇಂದು (ನ.25) ಚುನಾವಣೆ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದ್ದು, 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ಉಳಿದ ಒಂದು ಕ್ಷೇತ್ರದ ಚುನಾವಣೆಯನ್ನು ಮುಂದೂಡಲಾಗಿದ್ದು, ಡಿಸೆಂಬರ್ (December) 3 ರಂದು ಚುನಾವಣಾ ಫಲಿತಾಂಶ ಘೋಷಣೆ ಆಗಲಿದೆ.
ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot), ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲೆಟ್, ಸ್ಪೀಕರ್ ಸಿಪಿ ಜೋಶಿ, ಸಚಿವರಾದ ಶಾಂತಿ ಧರಿವಾಲ, ಬಿಡಿ ಕಲ್ಲ, ಭನ್ವರ್ ಸಿಂಗ್, ಮಮತಾ ಭೂಪೇಶ್ (Mamatha Bhupesh) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಭವಿಷ್ಯ ಇಂದು ನಿರ್ಧಾರವಾಗಲಿದೆ.
ಸತೀಶ್ ಪೂನಿಯಾ (Sathish Punia) ಕೂಡ ಸ್ಪರ್ಧಾ ಕಣದಲ್ಲಿದ್ದು, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕಿ ವಸುಂದರಾ ರಾಜೆ ಅವರ ಭವಿಷ್ಯ ಕೂಡ ಇಂದು ನಿರ್ಧಾರ ಆಗಲಿದೆ. ಒಟ್ಟು ರಾಜಸ್ಥಾನ ವಿಧಾನಸಭೆಯಲ್ಲಿ 1862 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು, ಇವರ ಭವಿಷ್ಯವನ್ನು 5,25,38,105 ಮಂದಿ ನಿರ್ಧರಿಸಲಿದ್ದಾರೆ. ಸದ್ಯ ರಾಜಸ್ಥಾನ ವಿಧಾನಸಭೆಯಲ್ಲಿ 107 ಕಾಂಗ್ರೆಸ್ ಶಾಸಕರಿದ್ರೆ, 70 ಬಿಜೆಪಿ, 3 ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ, 2 ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (Communist Part of India), 2 ಬಿಟಿಪಿ, 1 ಆರ್ಎಲ್ಡಿ, 13 ಪಕ್ಷೇತರ ಶಾಸಕರಿದ್ದಾರೆ. ಎರಡು ಕ್ಷೇತ್ರಗಳಿಗೆ ಯಾವುದೇ ಶಾಸಕರಿಲ್ಲ.
ಕಣಕ್ಕಿಳಿದಿರುವ ರಾಜಮನೆತನದ ಸದಸ್ಯರು
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನದ ರಾಜಕೀಯ ಪಕ್ಷಗಳು ರಾಜಮನೆತನದ ಸುಮಾರು ಆರು ಸದಸ್ಯರನ್ನು ಕಣಕ್ಕಿಳಿಸಿದೆ ಅವರಲ್ಲಿ ಐವರು ಬಿಜೆಪಿಯಿಂದ (BJP) ಮತ್ತು ಒಬ್ಬರು ಕಾಂಗ್ರೆಸ್ನಿಂದ (Congress) ಕಣಕ್ಕಿಳಿದಿದ್ದಾರೆ.
*ವಸುಂಧರಾ ರಾಜೆ (Vasundhara Raje): ಧೋಲ್ಪುರ್ ರಾಜಮನೆತನದ ಸದಸ್ಯ
*ದಿಯಾ ಕುಮಾರಿ: ಜೈಪುರ ರಾಜಮನೆತನದ ರಾಜಕುಮಾರಿ
*ಸುಶ್ರೀ ಸಿದ್ಧಿ ಕುಮಾರಿ: ಬಿಕಾನೇರ್ ರಾಜಮನೆತನದ ರಾಜಕುಮಾರಿ
*ಕಲ್ಪನಾ ದೇವಿ (Kalpana Devi): ಕೋಟಾ ರಾಜಮನೆತನದ ರಾಣಿ
*ಕುನ್ವರ್ ವಿಶ್ವರಾಜ್ ಸಿಂಗ್ ಮೇವಾರ್: ಉದಯಪುರ ರಾಜಮನೆತನದ ರಾಜಕುಮಾರ
*ವಿಶ್ವೇಂದ್ರ ಸಿಂಗ್: ಭರತ್ಪುರ (Bharatpura) ರಾಜ ಕುಟುಂಬದ ರಾಜ
ಭವ್ಯಶ್ರೀ ಆರ್ ಜೆ