ಗೋಲ್ಡನ್ ಗ್ಲೋಬ್ ಗೆದ್ದ ‘RRR’ ಸಿನಿಮಾ; ನಿರ್ಮಾಪಕ ದಾನಯ್ಯ ಅವರಿಗೆ ಚಿತ್ರತಂಡದಿಂದಲೇ ಅವಮಾನ ?

Tallywood : ಕಳೆದ ವರ್ಷ ತೆರೆಕಂಡು ಗಲ್ಲಾ ಪೆಟ್ಟಿಗೆ ಚಿಂದಿ ಮಾಡಿದ್ದ ಸಿನಿಮಾ ‘RRR’ ಚಿತ್ರದ ‘ನಾಟು ನಾಟು’ ಹಾಡಿಗೆ ಕ್ಯಾಲಿಫೋರ್ನಿಯಾದಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಬೆಸ್ಟ್ (‘RRR’ wins Golden Globe) ಒರಿಜಿನಲ್ ಸಾಂಗ್ ಪ್ರಶಸ್ತಿ ಲಭಿಸಿದೆ. ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ ಪ್ರಶಸ್ತಿ ಸ್ವೀಕರಿಸಿದರು.

ಈ ಚಿತ್ರದ ನಿರ್ದೇಶಕ ರಾಜಮೌಳಿ (Rajamouli) ಸೇರಿದಂತೆ ಇಡೀ ಚಿತ್ರತಂಡವು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿ ಆಗಿತ್ತು. ಜ್ಯೂ. ಎನ್‌ಟಿಆರ್, ರಾಮ್‌ಚರಣ್ (NTR, Ramcharan) ನಟನೆಯ RRR ಸಿನಿಮಾ ಈಗ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲೂ ಇದೆ.

ಆಸ್ಕರ್‌ ಪ್ರಶಸ್ತಿ ನಂತೆಯೇ ಪ್ರತಿಷ್ಠಿತವಾದ (‘RRR’ wins Golden Globe) ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿರೋದು ಭಾರತೀಯ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿಯೇ ಹೆಮ್ಮೆ ತಂದು ಕೊಟ್ಟಿದೆ.

ರಾಜಮೌಳಿ ಹಾಗು ಅವರ ತಂಡಕ್ಕೆ ಬಾಲಿವುಡ್ ನ ಸೂಪರ್ ಸ್ಟಾರ್ಸ್ ಸೇರಿದಂತೆ ಭಾರತೀಯ ಚಿತ್ರರಂಗವೂ ಅಭಿನಂದನೆ ತಿಳಿಸುತ್ತಿದೆ.

ಬಾಕ್ಸಾಫೀಸ್‌ನಲ್ಲಿ (Box office) ಹಿಟ್ ಆದ ಈ ಸಿನಿಮಾ ಬೇರೆ ಬೇರೆ ಭಾಷೆಗಳಲ್ಲಿ ತೆರೆಕಂಡ ಮೇಲೆಯೂ ಹೌಸ್ಫುಲ್ ಪ್ರದರ್ಶನ ಕಂಡಿತ್ತು.

ಇದನ್ನೂ ಓದಿ : https://vijayatimes.com/santro-ravi-bjp-worker/

ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾ 120 ಕೋಟಿ ಬಾಚಿಕೊಂಡಿದೆ. ಹಿಂದಿ ವರ್ಷನ್ನಿಂದಲೇ ಈ ಚಿತ್ರ 25 ಕೋಟಿಗೂ ಅಧಿಕ ಗಳಿಸಿದ್ರೆ, ತಮಿಳುನಾಡು ಹಾಗೂ ಕೇರಳದಿಂದ ಚಿತ್ರಕ್ಕೆ 17 ಕೋಟಿ ಗಳಿಕೆ ಆಗಿದೆ.

ವಿದೇಶದಲ್ಲೂ ಈ ಸಿನಿಮಾ ಅಬ್ಬರಿಸಿದ್ದು, ಸುಮಾರು 78 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರ ಒಟ್ಟು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿದೆ.

ನಿರ್ಮಾಪಕ ದಾನಯ್ಯ (Danaiah) ಹೆಸರು ಮಾತ್ರ ಹೇಳುತ್ತಿಲ್ಲ:

ಈ ಚಿತ್ರದ ‘ನಾಟು ನಾಟು’ ಹಾಡಿಗೆ ಪ್ರಶಸ್ತಿ ಘೋಷಣೆ ಆಗುತ್ತಿದ್ದಂತೆ ಇಡೀ ಚಿತ್ರತಂಡ ಕುಣಿದು ಕುಪ್ಪಳಿಸುತ್ತಿದ್ದ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ದಾನಯ್ಯ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಈಗಾಗಲೇ ಸಾಕಷ್ಟು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಮೌಳಿ ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆದರೆ ಯಾವ ವೇದಿಕೆಯಲ್ಲೂ ನಿರ್ಮಾಪಕ ದಾನಯ್ಯ ಅವರ ಹೆಸರು ಪ್ರಸ್ತಾಪಿಸಲಿಲ್ಲ.

ಇದನ್ನೂ ಓದಿ : https://vijayatimes.com/aam-aadmi-party-fine/

ರಾಜಮೌಳಿ ಅವರು ಇಷ್ಟು ಯಶಸ್ಸು ಪಡೆದು ಸಿನಿಮಾ ಮಾಡಲು ಮುಖ್ಯ ಕಾರಣ ನಿರ್ಮಾಪಕ ದಾನಯ್ಯ. ಆದರೆ ಅವರನ್ನು ಯಾಕೆ ನೆನಪಿಸಿಕೊಳ್ಳುತ್ತಿಲ್ಲ ಅನ್ನುವ ಪ್ರಶ್ನೆ ಈಗ ಎಲ್ಲರಲ್ಲು ಕಾಡುತಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ (Golden Globe Award) ಪ್ರದಾನ ವೇದಿಕೆಯಲ್ಲೂ ಸಹ ಮೌಳಿ, ದಾನಯ್ಯ ಅವರ ವಿಚಾರವಾಗಿ ಮಾತನಾಡಲ್ಲಿಲ್ಲ.

ಅದಲ್ಲದೆ ಪ್ರಶಸ್ತಿ ಪಡೆದ ಸಂಗೀತ ನಿರ್ದೇಶಕ ಎಂ. ಎಂ ಕೀರವಾಣಿ (M. M Keeravani) ವೇದಿಕೆಯಲ್ಲಿ ಮಾತನಾಡುತ್ತಾ “ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸ್ವೀಕರಿಸಿದ್ದು ನಮಗೆ ಸಂತಸ ತಂದಿದೆ.

ಈ ಪ್ರಶಸ್ತಿ ನೀಡಿದ ಹೆಚ್‌ಎಫ್‌ಪಿಎ ಗೆ ಧನ್ಯವಾದ. ಈ ಸಂತಸದ ಸಮಯವನ್ನು ನನ್ನ ಪತ್ನಿ ಜೊತೆ ಹಂಚಿಕೊಳ್ಳುತ್ತಿರುವುದಕ್ಕೆ ಖುಷಿಯಾಗುತ್ತಿದೆ.

ನನ್ನ ಸಹೋದರ ರಾಜಮೌಳಿಗೆ ಈ ಪ್ರಶಸ್ತಿ ಸಲ್ಲಬೇಕು. ಹಾಡಿಗೆ ಕೆಲಸ ಮಾಡಿದ ಕೊರಿಯೋಗ್ರಫರ್ ಪ್ರೇಮ್ ರಕ್ಷಿತ್, ಹಾಡು ಹಾಡಿದ ರಾಹುಲ್ ಸಿಪ್ಲಿಗಂಜ್, ಕಾಲಭೈರವ, ಸಾಹಿತ್ಯ ಬರೆದ ಚಂದ್ರಬೋಸ್, ಡ್ಯಾನ್ಸ್ ಮಾಡಿದ ಚರಣ್, ತಾರಕ್ ಎಲ್ಲರಿಗೂ ಧನ್ಯವಾದ” ಎಂದಿದ್ದಾರೆ.

ಆದರೆ ನಿರ್ಮಾಪಕ ದಾನಯ್ಯ ಹೆಸರನ್ನು ಮಾತ್ರ ಪ್ರಸ್ತಾಪಿಸಲೇ ಇಲ್ಲ.ಇದೇ ವಿಚಾರವಾಗಿ ನಿರ್ದೇಶಕ (Director) ರಾಜಮೌಳಿ ಹಾಗೂ ಅವರ ತಂಡ ನಿರ್ಮಾಪಕ (Producer) ದಾನಯ್ಯ ಅವರಿಗೆ ಅವಮಾನ ಮಾಡ್ತಿದೆ ಎನ್ನುವ ಆರೋಪ ಕೂಡ ಕೇಳಿಬರ್ತಿದೆ. ಇವರ ಈ ವರ್ತನೆಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Exit mobile version